ಕದನ ವಿರಾಮ ಒಪ್ಪಂದ ಪಾಲನೆಗೆ ಪಾಕ್‌ಗೆ ಭಾರತದ ಸೂಚನೆ

Update: 2025-04-02 23:24 IST
ಕದನ ವಿರಾಮ ಒಪ್ಪಂದ ಪಾಲನೆಗೆ ಪಾಕ್‌ಗೆ ಭಾರತದ ಸೂಚನೆ

ಸಾಂದರ್ಭಿಕ ಚಿತ್ರ | PC : PTI

  • whatsapp icon

ಹೊಸದಿಲ್ಲಿ: ಮಂಗಳವಾರ ಪೂಂಛ್ ಜಿಲ್ಲೆಯ ಎಲ್‌ಒಸಿಯಲ್ಲಿ ಪಾಕ್ ಸೈನಿಕರಿಂದ ಗುಂಡು ಹಾರಾಟದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ಗಡಿಯಲ್ಲಿ ಶಾಂತಿಯನ್ನು ಕಾಯ್ದುಕೊಳ್ಳಲು 2021ರಲ್ಲಿ ಮಾಡಿಕೊಳ್ಳಲಾದ ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕರ ಒಪ್ಪಂದಕ್ಕೆ ಬದ್ಧವಾಗಿರುವಂತೆ ಬುಧವಾರ ಪಾಕಿಸ್ತಾನದ ಸೇನೆಗೆ ಸೂಚಿಸಿದೆ.

ಗಡಿಯಲ್ಲಿ ಶಾಂತಿಯನ್ನು ಕಾಯ್ದುಕೊಳ್ಳಲು 2021ರ ಒಪ್ಪಂದದ ತತ್ವಗಳನ್ನು ಎತ್ತಿ ಹಿಡಿಯುವುದರ ಮಹತ್ವವನ್ನು ಭಾರತೀಯ ಸೇನೆಯು ಪುನರುಚ್ಚರಿಸುತ್ತದೆ ಎಂದು ಲೆ.ಕ.ಸುನೀಲ ಬರ್ತ್ವಾಲ್ ಹೇಳಿದರು.

2021ರ ಕದನ ವಿರಾಮ ಒಪ್ಪಂದದ ಬಳಿಕ ಉಲ್ಲಂಘನೆಗಳ ಕೆಲವೇ ಘಟನೆಗಳು ನಡೆದಿವೆ,ಆದರೆ ಈ ವರ್ಷ ಉಲ್ಲಂಘನೆಗಳು ಹೆಚ್ಚುತ್ತಿವೆ. ಈ ವರ್ಷದ ಜನವರಿ ಮತ್ತು ಫೆಬ್ರವರಿಯಲ್ಲಿ ಜಮ್ಮು,ರಜೌರಿ ಮತ್ತು ಪೂಂಛ್ ಜಿಲ್ಲೆಗಳ ಎಲ್‌ಒಸಿಯಲ್ಲಿ ಕನಿಷ್ಠ ಆರು ಗುಂಡಿನ ಚಕಮಕಿಗಳು ನಡೆದಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News