"ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ": ಸೈಫ್ ಅಲಿ ಖಾನ್ ಗೆ ಇರಿದಿದ್ದ ಆರೋಪಿಯಿಂದ ಜಾಮೀನು ಕೋರಿ ಅರ್ಜಿ
Update: 2025-03-29 16:29 IST

Photo credit: PTI
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್‌ರನ್ನು ಅವರ ಬಾಂದ್ರಾ ನಿವಾಸದಲ್ಲಿ ಇರಿದಿದ್ದ ಆರೋಪಕ್ಕೆ ಗುರಿಯಾಗಿರುವ 30 ವರ್ಷದ ಬಾಂಗ್ಲಾದೇಶ ಪ್ರಜೆಯು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ನನ್ನ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾನೆ.
ಶುಕ್ರವಾರ ಸೆಷನ್ಸ್ ನ್ಯಾಯಾಲಯದೆದುರು ಜಾಮೀನು ಅರ್ಜಿ ಸಲ್ಲಿಸಿದ ಆರೋಪಿ ಮುಹಮ್ಮದ್ ಶರೀಫುಲ್ ಇಸ್ಲಾಂ ಶೆಹಝಾದ್, "ಎಫ್‌ಐಆರ್ ಸಂಪೂರ್ಣವಾಗಿ ಸುಳ್ಳಾಗಿದ್ದು, ನನ್ನ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸಲಾಗಿದೆ" ಎಂದು ಆರೋಪಿಸಿದ್ದಾನೆ.
ಜನವರಿ 16ರಂದು ಬಾಂದ್ರಾದಲ್ಲಿನ 12ನೇ ಮಹಡಿಯಲ್ಲಿರುವ 54 ವರ್ಷದ ಬಾಲಿವುಡ್ ನಟ ಸೈಫ್ ಅಲಿ ಖಾನ್‌ರ ಅಪಾರ್ಟ್‌ಮೆಂಟ್ ಒಳಕ್ಕೆ ಹೊಕ್ಕಿದ್ದ ನುಸುಳುಕೋರನೊಬ್ಬ, ನಟ ಸೈಫ್ ಅಲಿ ಖಾನ್‌ರ ಬೆನ್ನಿಗೆ ಹರಿತವಾದ ಚಾಕುವಿನಿಂದ ಇರಿದಿದ್ದ. ಈ ಘಟನೆಯಲ್ಲಿ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಸೈಫ್ ಅಲಿ ಖಾನ್, ಲೀಲಾವತಿ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.