ಅರಣ್ಯೀಕರಣ ನಿಧಿ ದುರುಪಯೋಗ : ಉತ್ತರಾಖಂಡ ಸರಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

Update: 2025-03-06 14:23 IST
ಅರಣ್ಯೀಕರಣ ನಿಧಿ ದುರುಪಯೋಗ : ಉತ್ತರಾಖಂಡ ಸರಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಸಾಂದರ್ಭಿಕ ಚಿತ್ರ | PC : PTI

  • whatsapp icon

ಹೊಸದಿಲ್ಲಿ: ಅರಣ್ಯೀಕರಣ ನಿಧಿ ದುರುಪಯೋಗಪಡಿಸಿಕೊಂಡ ಕುರಿತು ಸಿಎಜಿ ವರದಿ ಬಹಿರಂಗದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಉತ್ತರಾಖಂಡ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ಕುರಿತು ವಿವರಣೆಯನ್ನು ನೀಡುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.

ಮಾರ್ಚ್ 5ರಂದು ಅಮಿಕಸ್ ಕ್ಯೂರಿ ಕೆ. ಪರಮೇಶ್ವರ್ ಅವರು ಗಮನಕ್ಕೆ ತಂದ ಸುದ್ದಿ ವರದಿಯನ್ನು ನ್ಯಾಯಮೂರ್ತಿಗಳಾದ ಗವಾಯಿ ಮತ್ತು ಎ.ಜಿ.ಮಸಿಹ್ ಅವರು ಗಮನಿಸಿದರು.

ಉತ್ತರಾಖಂಡ ಅರಣ್ಯ ಅಧಿಕಾರಿಗಳು ಐಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಫ್ರಿಜ್‌ಗಳು, ಕೂಲರ್‌ಗಳ ಖರೀದಿಗೆ ಮತ್ತು ಕಟ್ಟಡಗಳ ನವೀಕರಣಕ್ಕೆ ಮತ್ತು ನ್ಯಾಯಾಲಯದ ಪ್ರಕರಣಗಳಿಗೆ ʼಪರಿಹಾರ ಅರಣ್ಯೀಕರಣಕ್ಕಾಗಿ ಮೀಸಲಿರಿಸಿದ ಹಣʼವನ್ನು ಬಳಸಿದ್ದಾರೆ ಎಂದು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್(ಸಿಎಜಿ) ಬಹಿರಂಗಪಡಿಸಿತ್ತು.

2019- 2022ರ ನಡುವೆ ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರದ (CAMPA) ಕಾರ್ಯ ನಿರ್ವಹಣೆ ಬಗ್ಗೆ ಸಿಎಜಿ ವರದಿಯು ಬಹಿರಂಗಪಡಿಸಿದೆ. ಪರಿಹಾರ ಅರಣ್ಯೀಕರಣವನ್ನು ಬಿಟ್ಟು ವಿವಿಧ ಚಟುವಟಿಕೆಗಳಿಗಾಗಿ 13.86 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ತಿಳಿಸಿದೆ.

ಸ್ವೀಕಾರಾರ್ಹವಲ್ಲದ ಉದ್ದೇಶಗಳಿಗಾಗಿ ಈ ಹಣವನ್ನು ಏಕೆ ಬಳಸಲಾಗಿದೆ ಎಂಬುದನ್ನು ವಿವರಿಸುವಂತೆ ಸುಪ್ರೀಂ ಕೋರ್ಟ್ ಉತ್ತರಾಖಂಡದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ. CAMPA ನಿಧಿಯನ್ನು ಹಸಿರು ಹೊದಿಕೆಯನ್ನು ಹೆಚ್ಚಿಸಲು ಬಳಸಬೇಕಿದೆ. ಸ್ವೀಕಾರಾರ್ಹವಲ್ಲದ ಚಟುವಟಿಕೆಗಳಿಗೆ ಅದನ್ನು ಬಳಸಿರುವುದು ಕಳವಳಕಾರಿ ವಿಷಯವಾಗಿದೆ. ಹೀಗಾಗಿ ಮುಂದಿನ ದಿನಾಂಕದೊಳಗೆ ಈ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನಾವು ನಿರ್ದೇಶನ ನೀಡುತ್ತೇವೆ ಎಂದು ಪೀಠವು ಹೇಳಿದೆ.

CAMPA ಅಧಿಕಾರಿಗಳು ಪದೇ ಪದೇ ವಿನಂತಿಸಿದರೂ 2019-20 ಮತ್ತು 2021-22ರ ನಡುವೆ 275.34 ಕೋಟಿ ರೂಪಾಯಿಗಳ ಬಡ್ಡಿಯನ್ನು ಪಾವತಿಸಿಲ್ಲ. ಮಾರ್ಚ್ 19ರೊಳಗೆ ಈ ಕುರಿತು ಮುಖ್ಯ ಕಾರ್ಯದರ್ಶಿ ತೃಪ್ತಿಕರ ಉತ್ತರವನ್ನು ನೀಡದಿದ್ದರೆ, ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ನೀಡಲಾಗುವುದು ಎಂದು ಉತ್ತರಾಖಂಡ ಸರಕಾರವನ್ನು ಪ್ರತಿನಿಧಿಸುವ ವಕೀಲರಿಗೆ ನ್ಯಾಯಾಲಯ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News