ರೂ. 76,000 ಕೋಟಿಯಷ್ಟು ಬಾಕಿಗಳನ್ನು ʼವಸೂಲಾತಿಗೆ ಕಷ್ಟʼ ಎಂದು ವರ್ಗೀಕರಿಸಿದ ಸೆಬಿ

Update: 2024-08-20 06:15 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಮಾರ್ಚ್‌ 2024ರಲ್ಲಿದ್ದಂತೆ “ವಸೂಲಾತಿಗೆ ಕಷ್ಟ” (ಡಿಟಿಆರ್-‌ ಡಿಫಿಕಲ್ಟ್‌ ಟು ರಿಕವರ್‌ ಡ್ಯೂಸ್) ಎಂಬ ವಿಭಾಗದಡಿಯಲ್ಲಿ ಬಾಕಿ ಮೊತ್ತಗಳು ರೂ 76,293 ಕೋಟಿ ಎಂದು ಸೆಬಿ ವರ್ಗೀಕರಿಸಿದೆ. ಈ ಮೊತ್ತ ಕಳೆದ ವರ್ಷಕ್ಕೆ ಹೋಲಿಸಿದಾಗ ಶೇ4ರಷ್ಟು ಹೆಚ್ಚಾಗಿದೆ.

ಈ ಮೊತ್ತದಲ್ಲಿ ಹೆಚ್ಚಿನ ಮೊತ್ತವು ಕೋರ್ಟ್‌ ನೇಮಿತ ಸಮಿತಿಗಳ ಮುಂದಿರುವ ಪ್ರಕರಣಗಳಕ್ಕೆ ಸಂಬಂಧಿಸಿವೆ.‌

ಈ ರೀತಿ ಡಿಟಿಆರ್‌ ಬಾಕಿಗಳನ್ನು ವರ್ಗೀಕರಿಸುವುದು ಸಂಪೂರ್ಣವಾಗಿ ಒಂದು ಆಡಳಿತಾತ್ಮಕ ಕ್ರಮವಾಗಿದೆ ಮತ್ತು ವಸೂಲಾತಿ ಅಧಿಕಾರಿಗಳು ಈ ಬಾಕಿ ಮೊತ್ತ ವಸೂಲಿ ಯತ್ನ ನಿಲ್ಲಿಸುವುದಿಲ್ಲ ಎಂದು ಸೆಬಿ ತನ್ನ ವಾರ್ಷಿಕ ವರದಿ 2023-24ರಲ್ಲಿ ಹೇಳಿದೆ.

ಮಾರ್ಚ್‌ 31, 2024ರಲ್ಲಿದ್ದಂತೆ ಸೆಬಿ ಒಟ್ಟು 807 ಡಿಟಿಆರ್‌ ಪ್ರಕರಣಗಳನ್ನು ಗುರುತಿಸಿದ್ದು ಬಾಕಿ ಮೊತ್ತ ರೂ 76,293 ಕೋಟಿ ಆಗಿದ್ದು ಹಿಂದಿನ ವರ್ಷದ 692 ಪ್ರಕರಣಗಳು ಮತ್ತು ರೂ. 73,287 ಕೋಟಿ ಮೊತ್ತಕ್ಕಿಂತ ಏರಿಕೆಯಾಗಿದೆ.

ಒಟ್ಟು 807 ಡಿಟಿಆರ್‌ ಪ್ರಕರಣಗಳಲ್ಲಿ ರಾಜ್ಯ ಪಿಐಡಿ ಕೋರ್ಟ್‌ಗಳಲ್ಲಿ, ನ್ಯಾಷನಲ್‌ ಕಂಪನಿ ಲಾ ಟ್ರಿಬ್ಯುನಲ್‌, ನ್ಯಾಷನಲ್‌ ಕಂಪನಿ ಲಾ ಅಪೆಲ್ಲೇಟ್‌ ಟ್ರಿಬ್ಯುನಲ್‌ ಮುಂದೆ 36 ಪ್ರಕರಣಗಳಿದ್ದು ಒಟ್ಟು ಮೊತ್ತ ರೂ. 12,199 ಕೋಟಿಯಾಗಿದೆ. ಇವುಗಳ ಹೊರತಾಗಿ 60 ಪ್ರಕರಣಗಳು ಕೋರ್ಟ್‌ ನೇಮಿತ ಸಮಿತಿಗಳ ಮುಂದಿದ್ದು ಬಾಕಿ ಮೊತ್ತ ರೂ 59,970 ಆಗಿದೆ.

ಪತ್ತೆಹಚ್ಚಲಾಗದ ವಿಭಾಗದಲ್ಲಿರುವ 140 ಡಿಟಿಆರ್‌ಗಳಲ್ಲಿ 131 ವ್ಯಕ್ತಿಗಳಿಗೆ ಸಂಬಂಧಿಸಿದ ಪ್ರಕರಣಗಳು ಹಾಗೂ ಒಂಬತ್ತು ಕಂಪೆನಿಗಳಿಗೆ ಸಂಬಂಧಿಸಿದ ಪ್ರಕರಣಗಳಾಗಿದ್ದು ಬಾಕಿ ಮೊತ್ತ ಕ್ರಮವಾಗಿ ರೂ 13.3 ಕೋಟಿ ಮತ್ತು ರೂ 15.7 ಕೋಟಿ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News