ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆಗೆ ಭಾರತ ರತ್ನ ಘೋಷಿಸಬೇಕು: ಸಂಜಯ್ ರಾವತ್
Update: 2025-01-23 13:00 IST

ಬಾಳಾ ಠಾಕ್ರೆ, ಸಂಜಯ್ ರಾವತ್ | PTI
ಹೊಸದಿಲ್ಲಿ: ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಅವರಿಗೆ ಭಾರತ ರತ್ನ ಘೋಷಿಸಬೇಕು ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಆಗ್ರಹಿಸಿದ್ದಾರೆ.
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಅವರಿಗೆ ಘೋಷಿಸಬೇಕು ಎಂದು ಅವರು ಅಧಿಕೃತ ಬೇಡಿಕೆ ಮಂಡಿಸಿದ್ದಾರೆ.