ಲ್ಯಾಪ್‌ಟಾಪ್‌, ಕಂಪ್ಯೂಟರ್ ಗಳ ಆಮದಿಗೆ ಸರಳ ಅನುಮತಿ ಪ್ರಕ್ರಿಯೆಯ ಸಾಧ್ಯತೆ

Update: 2023-10-13 11:39 GMT

ಸಾಂದರ್ಭಿಕ ಚಿತ್ರ (Photo credit: freepik.com)

ಹೊಸದಿಲ್ಲಿ: ಸರಕಾರವು ನ.1ರಿಂದ ಲ್ಯಾಪ್‌ಟಾಪ್‌ ಗಳು, ಟ್ಯಾಬ್ಲೆಟ್ಗಳು ಮತ್ತು ಕಂಪ್ಯೂಟರ್ಗಳ ಆಮದಿಗೆ ಪರವಾನಿಗೆ ವ್ಯವಸ್ಥೆಯ ಬದಲಿಗೆ ಸರಳ ಅನುಮತಿ ಪ್ರಕ್ರಿಯೆಯನ್ನು ಜಾರಿಗೊಳಿಸುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಆದಾಗ್ಯೂ ವಾಣಿಜ್ಯ ಸಚಿವಾಲಯವು ಈ ವಿಷಯದಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಂತಿಮ ಅಭಿಪ್ರಾಯಕ್ಕಾಗಿ ಕಾಯುತ್ತಿದೆ ಎಂದು ಅವು ಹೇಳಿವೆ.

ಸರಕಾರವು ಕಳೆದ ಆಗಸ್ಟ್ ನಲ್ಲಿ ದೇಶಿಯ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಚೀನಾದಂತಹ ದೇಶಗಳಿಂದ ಆಮದುಗಳನ್ನು ಕಡಿತಗೊಳಿಸಲು ಲ್ಯಾಪ್ಟಾಪ್ಗಳು, ಟ್ಯಾಬ್ಲೆಟ್ಗಳು ಮತ್ತು ಕಂಪ್ಯೂಟರ್ಗಳ ಆಮದುಗಳ ಮೇಲೆ ನಿರ್ಬಂಧಗಳನ್ನು ಹೇರಿತ್ತು.

ವಿದೇಶ ವ್ಯಾಪಾರ ಮಹಾ ನಿರ್ದೇಶನಾಲಯದ ಅಧಿಸೂಚನೆಯಂತೆ ನಿರ್ಬಂಧಗಳು ನ.1ರಿಂದ ಜಾರಿಗೆ ಬರಲಿವೆ. ಈ ಬಗ್ಗೆ ಐಟಿ ಹಾರ್ಡ್ವೇರ್ ಉದ್ಯಮವು ಕಳವಳವನ್ನು ವ್ಯಕ್ತಪಡಿಸಿದೆ. ಇದು ಹೆಚ್ಚಾಗಿ ಆಮದು ನಿರ್ವಹಣೆ ವ್ಯವಸ್ಥೆಯ ಸ್ವರೂಪದಲ್ಲಿರಲಿದೆ. ಅತ್ಯಂತ ಮೃದು ಪರವಾನಿಗೆಯಾಗಲಿದೆ. ಅದು ಕೇವಲ ಅನುಮತಿಯಾಗಲಿದೆ ಎಂದು ಮೂಲವೊಂದು ತಿಳಿಸಿದೆ.

ಈಗ ಕಂಪನಿಯೊಂದು ನಿರ್ದಿಷ್ಟ ಸಂಖ್ಯೆಯ ಆಮದುಗಳಿಗಾಗಿ ಮನವಿಯನ್ನು ಸಲ್ಲಿಸಲು ಸಾಧ್ಯವಾಗುತ್ತದೆ ಮತ್ತು ಅದು ಆಮದುಗಳಿಗೆ ಅನುಮತಿಯನ್ನು ಪಡೆಯುತ್ತದೆ. ಆ.3ರಂದು ಹೊರಡಿಸಲಾಗಿದ್ದ ಆದೇಶವು ಪರವಾನಿಗೆ ಅಗತ್ಯಗಳನ್ನು ತಕ್ಷಣವೇ ಜಾರಿಗೊಳಿಸಿತ್ತು ಮತ್ತು ನಂತರ ತಿದ್ದುಪಡಿಗಳನ್ನು ತಂದಿದ್ದು, ಮಾರ್ಪಾಡುಗಳಿಗಾಗಿ ಅ.31ರವರೆಗೆ ಅವಧಿಯನ್ನು ಒದಗಿಸಲಾಗಿತ್ತು.

ಮೈಕ್ರೋ ಕಂಪ್ಯೂಟರ್ಗಳು,ದೊಡ್ಡ ಅಥವಾ ಮೇನ್ಫ್ರೇಮ್ ಕಂಪ್ಯೂಟರ್ಗಳು ಮತ್ತು ಕೆಲವು ಡೇಟಾ ಸಂಸ್ಕರಣೆ ಯಂತ್ರಗಳ ಮೇಲೂ ನಿರ್ಬಂಧಗಳಿವೆ.

ಭಾರತವು ಈಗಾಗಲೇ ಉಕ್ಕು,ಕಲ್ಲಿದ್ದಲು ಮತ್ತು ಕಾಗದದಂತಹ ಉತ್ಪನ್ನಗಳಿಗೆ ಆಮದು ಮೇಲ್ವಿಚಾರಣೆ ವ್ಯವಸ್ಥೆಯನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News