ಶ್ರೀರಾಮನ ಆಡಳಿತ ಸಂವಿಧಾನ ರಚನೆಕಾರರಿಗೆ ಸ್ಪೂರ್ತಿ

Update: 2024-01-28 15:28 GMT

ನರೇಂದ್ರ ಮೋದಿ | Photo: PTI 

ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ಜನವರಿ 28ರಂದು ನಡೆದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಕೋಟ್ಯಂತರ ಜನರನ್ನು ಬೆಸೆದಿದೆ. ಈ ಕಾರ್ಯಕ್ರಮದ ಸಂದರ್ಭ ದೇಶದ ಸಮಷ್ಠಿ ಶಕ್ತಿ ಕಂಡು ಬಂತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ವರ್ಷ ಪ್ರಸಾರವಾದ ಮೊದಲ ‘ಮನ್ ಕಿ ಬಾತ್’ ರೇಡಿಯೊ ಸರಣಿಯ 109ನೇ ಕಾರ್ಯಕ್ರಮದಲ್ಲಿ ಪ್ರಧಾನಿ ಅವರು ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು.

ಶ್ರೀರಾಮನ ಆಡಳಿತ ಸಂವಿಧಾನ ರಚನೆಕಾರರಿಗೆ ಸ್ಪೂರ್ತಿಯಾಗಿತ್ತು. ಆದುದರಿಂದಲೇ ಅಯೋಧ್ಯೆಯಲ್ಲಿ ಜನವರಿ 22ರಂದು ನಾನು ‘‘ದೇವನಿಂದ ದೇಶ’’ ಹಾಗೂ ‘‘ರಾಮನಿಂದ ರಾಷ್ಟ್ರ’’ದ ಕುರಿತು ಮಾತನಾಡಿದ್ದೆ ಎಂದರು.

ಎಲ್ಲರ ಭಾವನೆಯೂ ಒಂದೇ, ಎಲ್ಲರ ಭಕ್ತಿಯೂ ಒಂದೆ. ಪ್ರತಿಯೊಬ್ಬರ ಮಾತಿನಲ್ಲೂ ರಾಮನಿದ್ದಾನೆ, ಪ್ರತಿಯೊಬ್ಬರ ಹೃದಯದಲ್ಲೂ ರಾಮನಿದ್ದಾನೆ ಎಂದು ಅವರು ಹೇಳಿದರು.

ಈ ಸಂದರ್ಭ ಹಲವು ಜನರು ರಾಮ ಭಜನೆ ಮಾಡಿದ್ದಾರೆ ಹಾಗೂ ಶ್ರೀರಾಮನಿಗೆ ಸಮರ್ಪಿಸಿದ್ದಾರೆ. ಜನವರಿ 22ರಂದು ಸಂಜೆ ಇಡೀ ದೇಶ ರಾಮ ಜ್ಯೋತಿ ಬೆಳಗಿಸಿದೆ ಹಾಗೂ ದೀಪಾವಳಿ ಆಚರಿಸಿದೆ ಎಂದು ಅವರು ತಿಳಿಸಿದರು.

ಇತ್ತೀಚೆಗೆ ಪದ್ಮ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟ ಹಲವು ಜನರು ತಳಮಟ್ಟದಲ್ಲಿ ಕೆಲಸ ಮಾಡಿದವರು ಮತ್ತು ದೊಡ್ಡ ಬದಲಾವಣೆಗಳನ್ನು ಮಾಡಿದರೂ ಪ್ರಚಾರದಿಂದ ದೂರ ಇದ್ದವರು. ಕಳೆದ ದಶಕದಲ್ಲಿ ಪದ್ಮ ಪ್ರಶಸ್ತಿಗಳ ವ್ಯವಸ್ಥೆ ಸಂಪೂರ್ಣ ಬದಲಾಗಿದ್ದು, ಈಗ ಇದು ಜನರ ಪದ್ಮ ಪ್ರಶಸ್ತಿಯಾಗಿ ಮಾರ್ಪಟ್ಟಿರುವುದು ತನಗೆ ತುಂಬಾ ಸಂತೋಷ ಉಂಟು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News