ಮತ ಎಣಿಕೆ ದಿನದಂದು ಕುಸಿದ ಷೇರು ಮಾರುಕಟ್ಟೆ

Update: 2024-06-04 06:49 GMT

Photo : PTI

ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಮತ ಎಣಿಕೆಗಳು ನಡೆಯುತ್ತಿರುವಂತೆಯೇ ಭಾರತದ ಷೇರು ಮಾರುಕಟ್ಟೆಯಲ್ಲಿ ಇಂದು ಭಾರೀ ಕುಸಿತ ಕಂಡು ಬಂದಿದ್ದು ಸುಮಾರು 4,000 ಅಂಕಗಳಷ್ಟು ಕುಸಿತ ಕಂಡಿದೆ.

ಎಕ್ಸಿಟ್‌ ಪೋಲ್‌ಗಳಲ್ಲಿ ಸೂಚಿಸಿದಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮುನ್ನಡೆ ಸಾಧಿಸದೇ ಇರುವ ನಡುವೆ ಈ ಬೆಳವಣಿಗೆ ನಡೆಇದೆ.

ಬಿಎಸ್‌ಇ ಸೆನ್ಸೆಕ್ಸ್‌ ಇಂದು ಶೇ5.07ರಷ್ಟು ಅಥವಾ 3,997ಅಂಕಗಳಷ್ಟು ಕುಸಿದು 72,684ರಲ್ಲಿದ್ದರೆ , ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕ ಶೇ 5.07ರಷ್ಟು ಕುಸಿತ ಕಂಡು 1,178 ಅಂಕಗಳಷ್ಟಿದೆ.

ಶನಿವಾರದ ಎಕ್ಸಿಟ್‌ ಪೋಲ್‌ ಫಲಿತಾಂಶಗಳ ಬಳಿಕ ಸೋಮವಾರ ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News