ಕೇರಳ ನಟಿಗೆ ದೌರ್ಜನ್ಯ ಪ್ರಕರಣ | ಪಲ್ಸರ್ ಸುನಿಗೆ ಸುಪ್ರೀಂ ಜಾಮೀನು

Update: 2024-09-17 16:12 GMT

ಪಲ್ಸರ್ ಸುನಿ | PC : thehindu.com

ಕೊಚ್ಚಿ : 2017ರ ಕೇರಳದಲ್ಲಿ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ ವಿಚಾರಣೆ ಆಮೆಗತಿಯಲ್ಲಿ ಸಾಗುತ್ತಿರುವುದನ್ನು ಮತ್ತು ಪ್ರಮುಖ ಆರೋಪಿ ಸುನಿಲ ಎಸ್. ಅಲಿಯಾಸ್ ಪಲ್ಸರ್ ಸುನಿ ಕಳೆದ ಏಳು ವರ್ಷಗಳಿಂದಲೂ ಜೈಲಿನಲ್ಲಿರುವುದನ್ನು ಪರಿಗಣಿಸಿ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಆತನಿಗೆ ಜಾಮೀನು ಮಂಜೂರು ಮಾಡಿದೆ.

ಪ್ರಕರಣದಲ್ಲಿ ಜಾಮೀನು ಕೋರಿ ಪಲ್ಸರ್ ಸುನಿ ಅರ್ಜಿ ಸಲ್ಲಿಸಿದ ಬಳಿಕ ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಪಂಕಜ ಮಿತ್ತಲ್ ಅವರ ಪೀಠವು ರಾಜ್ಯ ಸರಕಾರದಿಂದ ವರದಿಯನ್ನು ಕೇಳಿತ್ತು.

ಈ ವರ್ಷದ ಜೂ.6ರಂದು ಕೇರಳ ಉಚ್ಚ ನ್ಯಾಯಾಲಯವು ತನ್ನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಸುನಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದ.

ಪ್ರಕರಣದಲ್ಲಿಯ ಇತರ ಎಲ್ಲ ಆರೋಪಿಗಳು ಜಾಮೀನು ಬಿಡುಗಡೆಗೊಂಡಿದ್ದರೂ ಸುನಿ ಏಳು ವರ್ಷಗಳಿಗೂ ಅಧಿಕ ಜೈಲುವಾಸವನ್ನು ಅನುಭವಿಸಿದ್ದಾನೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡ ಸರ್ವೋಚ್ಚ ನ್ಯಾಯಾಲಯವು, ಎರ್ನಾಕುಲಂ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ರೀತಿಯನ್ನು ಟೀಕಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News