ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳ ಮೌಖಿಕ ಉಲ್ಲೇಖಕ್ಕೆ ನಿಷೇಧ

Update: 2024-11-12 15:07 GMT

ಸುಪ್ರೀಂ ಕೋರ್ಟ್‌ | PTI 

ಹೊಸದಿಲ್ಲಿ : ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ)ರಾಗಿ ಸಂಜೀವ ಖನ್ನಾ ಅವರು ಅಧಿಕಾರ ವಹಿಸಿಕೊಂಡ ಬಳಿಕ ಮಹತ್ವದ ಕಾರ್ಯವಿಧಾನ ಬದಲಾವಣೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ತುರ್ತು ವಿಚಾರಣೆಗಾಗಿ ಪ್ರಕರಣಗಳನ್ನು ಮೌಖಿಕವಾಗಿ ಉಲ್ಲೇಖಿಸುವುದನ್ನು ನಿಷೇಧಿಸಿದೆ.

ಇನ್ನು ಮುಂದೆ ತುರ್ತು ವಿಚಾರಣೆಗಾಗಿ ಮೌಖಿಕ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಿಜೆಐ ಮಂಗಳವಾರ ಪ್ರಕಟಿಸಿದರು. ತುರ್ತು ವಿಚಾರಣೆಗಾಗಿ ಮನವಿಗಳನ್ನು ಈಗ ಕಾರಣಸಹಿತ ಇಮೇಲ್ ಅಥವಾ ಲಿಖಿತ ಚೀಟಿಗಳ ಮೂಲಕ ಸಲ್ಲಿಸಬೇಕಾಗುತ್ತದೆ.

ಹಿಂದಿನ ಸಿಜೆಐ ಡಿ.ವೈ.ಚಂದ್ರಚೂಡ್ ಅವರ ಅಧಿಕಾರಾವಧಿಯಲ್ಲಿ ಮೌಖಿಕ ಉಲ್ಲೇಖಗಳ ಪರಿಪಾಠವು ಪ್ರಕರಣಗಳ ತುರ್ತು ವಿಚಾರಣೆಗಾಗಿ ಬಾಯಿಮಾತಿನಲ್ಲಿ ಮನವಿ ಮಾಡಿಕೊಳ್ಳಲು ವಕೀಲರಿಗೆ ಅವಕಾಶ ಕಲ್ಪಿಸಿತ್ತು,ಆದರೂ ಇದನ್ನು ಸಾಮಾನ್ಯವಾಗಿ ಕಟ್ಟಡಗಳ ನೆಲಸಮ ಅಥವಾ ತಕ್ಷಣದ ಬಂಧನ ಭೀತಿಯ ಸಂದರ್ಭದಲ್ಲಿ ಬಳಸಲಾಗುತ್ತಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News