ನೀಟ್ ಅವ್ಯವಹಾರ: ಎನ್‌ಟಿಎ ಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ
Update: 2024-06-27 07:28 GMT
ಹೊಸದಿಲ್ಲಿ: ಇತ್ತೀಚೆಗೆ ನಡೆದ ನೀಟ್-ಯುಜಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಲರ್ನಿಂಗ್ ಆಪ್ ಒಂದು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ (ಎನ್‌ಟಿಎ)ಗೆ ನೋಟಿಸ್ ಜಾರಿಗೊಳಿಸಿದೆ. ಮುಂದಿನ ವಿಚಾರಣೆ ನಡೆಯಲಿರುವ ಜುಲೈ ಒಳಗಾಗಿ ನೋಟಿಸಿಗೆ ಉತ್ತರಿಸುವಂತೆ ಎನ್‌ಟಿಎಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಮೇ 5ರಂದು ನಡೆದ ಪರೀಕ್ಷೆಯ ಕುರಿತು ಹಲವಾರು ಗಂಭೀರ ಕಳವಳವನ್ನು ಅರ್ಜಿ ವ್ಯಕ್ತಪಡಿಸಿದೆ.
ಈ ಪರೀಕ್ಷೆಯಲ್ಲಿ 1,500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ಒದಗಿಸಲಾಗಿರುವುದರಿಂದ ಒಟ್ಟಾರೆ ರ್ಯಾಂಕಿಂಗ್ ಮತ್ತು ಪರೀಕ್ಷೆಯ ನ್ಯಾಯಪರತೆಯ ಮೇಲೆ ಇದು ಗಂಭೀರ ಪರಿಣಾಮ ಬೀರಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಶೀಟ್‌ಗಳನ್ನು ಪಡೆಯುವ ವಿದ್ಯಾರ್ಥಿಗಳ ಹಕ್ಕುಗಳ ಪರ ಅರ್ಜಿದಾರರು ವಾದ ಮಂಡಿಸಿದ್ದಾರೆ.