ವಾರಣಾಸಿ ಜ್ಞಾನವಾಪಿ ಮಸೀದಿಯಲ್ಲಿ ಸರ್ವೆ ಆರಂಭ, ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮಸೀದಿ ಆಡಳಿತ ಮಂಡಳಿ

Update: 2023-07-24 05:17 GMT

ಹೊಸದಿಲ್ಲಿ: ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಯ 30 ಸದಸ್ಯರ ತಂಡ ಸೋಮವಾರ ಬೆಳಗ್ಗೆ 7 ಗಂಟೆಗೆ 'ವೈಜ್ಞಾನಿಕ ಸಮೀಕ್ಷೆ' ಆರಂಭಿಸಿದೆ. ಸಮೀಕ್ಷೆಗೆ ಅವಕಾಶ ನೀಡಿರುವ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಸೀದಿ ಆಡಳಿತ ಮಂಡಳಿಯು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಇವತ್ತೇ ನಡೆಯಲಿದೆ.

ಎಎಸ್ಐ ತಂಡವಲ್ಲದೆ, ನಾಲ್ವರು ಮಹಿಳಾ ದಾವೆದಾರರು ಮತ್ತು ಹಿಂದೂ ಅರ್ಜಿದಾರರ ನಾಲ್ವರು ವಕೀಲರು ಸ್ಥಳದಲ್ಲಿದ್ದಾರೆ. ಸಮೀಕ್ಷೆಯ ಸಂದರ್ಭದಲ್ಲಿ ತಂಡದೊಂದಿಗೆ ಮುಸ್ಲಿಂ ಅರ್ಜಿದಾರರ ವಕೀಲರಿಗೂ ಅವಕಾಶ ನೀಡಲಾಗಿತ್ತು. ಮಸೀದಿಯ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ ಹಾಗೂ ಸಂಕೀರ್ಣದ 2-ಕಿಮೀ ವ್ಯಾಪ್ತಿಯೊಳಗೆ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

ಜ್ಞಾನವಾಪಿ ಮಸೀದಿಯೊಳಗೆ ಐವರು ಹಿಂದೂ ಮಹಿಳೆಯರಿಗೆ ಪೂಜೆ ಸಲ್ಲಿಸುವ ಹಕ್ಕನ್ನು ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್ನ ತೀರ್ಪನ್ನು ಅರ್ಜಿಯು ಪ್ರಶ್ನಿಸಿದೆ.

ಜ್ಞಾನವಾಪಿ ಮಸೀದಿ ಆವರಣದಲ್ಲಿ ಎಎಸ್ಐ ಸಮೀಕ್ಷೆ ನಡೆಸುವಂತೆ ಜಿಲ್ಲಾ ನ್ಯಾಯಾಲಯವು ಇತ್ತೀಚೆಗೆ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಅರ್ಜಿಯ ತುರ್ತಾಗಿ ಪಟ್ಟಿ ಮಾಡುವಂತೆ ಮುಸ್ಲಿಮ್ ಅರ್ಜಿದಾರರ ಪರ ವಕೀಲರು ಕೋರುತ್ತಿದ್ದಾರೆ.

ಕಳೆದ ಶುಕ್ರವಾರ ಜಿಲ್ಲಾ ನ್ಯಾಯಾಧೀಶ ಎ..ಕೆ..ವಿಶ್ವೇಶ್ ಅವರು ಎಎಸ್ ಐಗೆ ಆಗಸ್ಟ್ 4 ರೊಳಗೆ ಸಮೀಕ್ಷೆಯ ಪ್ರಕ್ರಿಯೆಗಳ ವೀಡಿಯೊಗಳು ಹಾಗೂ ಫೋಟೊಗಳ ಜೊತೆಗೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದರು,

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News