ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್: ತಮಿಳುನಾಡು ಬಿಜೆಪಿ ಕಾರ್ಯಕರ್ತನ ಬಂಧನ

Tamil Nadu BJP Youth Member Pravin Raj Arrested For Posting 'Obscene Videos' Of Rahul & Priyanka Gandhi

Update: 2023-10-01 16:14 GMT

ಪ್ರವೀಣ ರಾಜ್ | Photo: Twitter

ನಾಮಕ್ಕಲ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ x ನಲ್ಲಿ ಅವಹೇಳನಕಾರಿ ಪೋಸ್ಟಿಗಾಗಿ ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತನೋರ್ವನನ್ನು ತಮಿಳುನಾಡಿನ ಕರೂರಿನ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ರವಿವಾರ ಬೆಳಗಿನ ಜಾವ ಎರಡು ಗಂಟೆಯ ಸುಮಾರಿಗೆ ಆರೋಪಿ ಪ್ರವೀಣ ರಾಜ್ ನನ್ನು ಆತನ ಮನೆಯಿಂದ ಪೊಲೀಸರು ಬಂಧಿಸಿದ್ದಾರೆ.

'x'ನಲ್ಲಿ   ‘ಸಂಘಿ ಪ್ರಿನ್ಸ್’ ಹೆಸರಿನಲ್ಲಿ ಹ್ಯಾಂಡಲ್ ನಿರ್ವಹಿಸುತ್ತಿರುವ ಪ್ರವೀಣರಾಜ್ ಆ.10ರಂದು ರಾಹುಲ್ ಮತ್ತು ಅವರ ಸೋದರಿ ಪ್ರಿಯಾಂಕಾ ಗಾಂಧಿ ಅವರ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದ ಮತ್ತು ಅವರಿಬ್ಬರ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದ. ರಾಹುಲ್ ಓರ್ವ ಅಪ್ರಾಮಾಣಿಕ ರಾಜಕಾರಣಿ ಎಂದು ಆತ ಬಣ್ಣಿಸಿದ್ದ. ಈ ಬಗ್ಗೆ ಕರೂರು ಕಾಂಗ್ರೆಸ್ ಸಮಿತಿ ಸದಸ್ಯರು ಪೋಲಿಸರಿಗೆ ದೂರು ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News