ಬಿಜೆಪಿ ಸಂಸದನ ಆಯ್ಕೆಯನ್ನು ಪ್ರಶ್ನಿಸಿದ ಅರ್ಜಿ ಪುರಸ್ಕರಿಸಿದ ಬಾಂಬೆ ಹೈಕೋರ್ಟ್

Update: 2024-08-16 14:52 GMT

ಬಾಂಬೆ ಹೈಕೋರ್ಟ್ | PTI  

ಮುಂಬೈ : ಮಹಾರಾಷ್ಟ್ರದ ರತ್ನಗಿರಿ-ಸಿಂಧುದುರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದ ನಾರಾಯಣ್ ರಾಣೆ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ಪುರಸ್ಕರಿಸಿದ್ದು, ಅವರಿಗೆ ಸಮನ್ಸ್ ಜಾರಿಗೊಳಿಸಿದೆ.

ರಾಣೆ ಅವರ ಗೆಲುವನ್ನು ಪ್ರಶ್ನಿಸಿ ಅವರ ಎದುರಾಳಿ ಅಭ್ಯರ್ಥಿಯಾಗಿದ್ದ ಶಿವಸೇನಾ (ಯುಬಿಟಿ ಬಣ)ದ ವಿನಾಯಕ್ ರಾವತ್ ಅವರು ಅರ್ಜಿ ಸಲ್ಲಿಸಿದ್ದರು.

ಎರಡು ಬಾರಿ ಸಂಸದರಾಗಿದ್ದ ರಾವುತ್ ಅವರನ್ನು ರಾಣೆ ಲೋಕಸಭೆಯಲ್ಲಿ 47,858 ಮತಗಳಿಂದ ಸೋಲಿಸಿದ್ದರು. ರಾಣೆ ಅವರಿಗೆ 4,48,514 ಮತಗಳು ದೊರೆತರೆ ರಾವುತ್ ಅವರಿಗೆ 4,00,656 ಮತಗಳು ಲಭಿಸಿದ್ದವು.

ರಾಣೆ ಅವರು ವಂಚನೆಯ ಮಾರ್ಗಗಳ ಮೂಲಕ ಚುನಾವಣೆಯನ್ನು ಗೆದ್ದಿದ್ದಾರೆಂದು ಆಪಾದಿಸಿ ಪರಾಜಿತ ಅಭ್ಯರ್ಥಿ ರಾವುತ್ ಹೈಕೋರ್ಟ್ ಮೆಟ್ಟಲೇರಿದ್ದರು.

ಚುನಾವಣಾ ಪ್ರಚಾರದ ಮುಕ್ತಾಯಗೊಂಡ ಬಳಿಕ ಬಿಜೆಪಿ ಬೆಂಬಲಿಗರು ಇವಿಎಂ ಒಂದನ್ನು ತೋರಿಸಿ ರಾಣೆಗೆ ಮತ ಹಾಕುವಂತೆ ಒತ್ತಾಯಿಸುವ ದೃಶ್ಯಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಬಿಜೆಪಿ ಅಭ್ಯರ್ಥಿಗೆ ಅಕ್ರಮ ಹಾಗೂ ನ್ಯಾಯಸಮ್ಮತವಲ್ಲದ ರೀತಿಯಲ್ಲಿ ಮತಚಲಾಯಸುವಂತೆಯೂ ಅವರು ಮತದಾರರನ್ನು ಒತ್ತಾಯಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿತ್ತು.

ಈ ವಿವಾದಿತ ವೀಡಿಯೊಗಳ ಬಗ್ಗೆ ತನಿಖೆ ನಡೆಸಲು ಸ್ವತಂತ್ರ ಸಮಿತಿಯೊಂದನ್ನು ರಚಿಸುವಂತೆ ಆದೇಶಿಸಬೇಕೆಂದು ರಾವುತ್ ಅವರು ನ್ಯಾಯಾಲಯವನ್ನು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News