ವರನಿಗೆ ಸರ್ಕಾರಿ ಕೆಲಸವಿಲ್ಲವೆಂದು ಮದುವೆ ಸಮಾರಂಭವನ್ನು ಅರ್ಧದಲ್ಲೇ ನಿಲ್ಲಿಸಿದ ವಧು!‌

Update: 2024-11-27 12:51 GMT

ಸಾಂದರ್ಭಿಕ ಚಿತ್ರ | PC : freepik.com

ಲಕ್ನೋ: ಉತ್ತರ ಪ್ರದೇಶದ ವಧುವೊಬ್ಬಳು ತನ್ನ ವರನಿಗೆ ಸರ್ಕಾರಿ ಕೆಲಸವಿಲ್ಲವೆಂದು ತಿಳಿದ ನಂತರ ಮದುವೆ ಸಮಾರಂಭವನ್ನು ಅರ್ಧದಲ್ಲೇ ನಿಲ್ಲಿಸಿರುವ ಘಟನೆ ವರದಿಯಾಗಿದೆ. ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವಧುವಿನ ನಿರಾಕರಣೆಯ ನಂತರ ಮದುವೆ ಸಮಾರಂಭ ಅರ್ಧದಲ್ಲೇ ಮೊಟಕುಗೊಂಡಿದೆ.

ವರ ಖಾಸಗಿ ವಲಯದ ಉದ್ಯೋಗಿಯಾಗಿದ್ದು, ತಿಂಗಳಿಗೆ 1.2 ಲಕ್ಷ ರೂ. ಸಂಬಳವಿದೆಯೆಂದು ಮಾಧ್ಯಮಗಳು ವರದಿಮಾಡಿದೆ. ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ವರ ತಿಂಗಳಿಗೆ 1.2 ಲಕ್ಷ ರೂ. ಸಂಪಾದಿಸುತ್ತಿದ್ದ. ಅಲ್ಲದೆ, ಛತ್ತೀಸ್‌ಗಢದ ಬಲರಾಮ್‌ಪುರ ಮೂಲದ ವರನಿಗೆ ಆರು ಜಮೀನು ಮತ್ತು 20 ಬಿಘಾ ಭೂಮಿಯನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ. ಇಷ್ಟು ಆಸ್ತಿಯ ಹೊರತಾಗಿಯೂ, ವರನಿಗೆ ಸರ್ಕಾರಿ ಕೆಲಸವಿಲ್ಲವೆಂದು ಉಲ್ಲೇಖಿಸಿ, ವಧು ಅವನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ.

ವರ್ಮಲಾ ಅಥವಾ ಜಯಮಾಲಾ ಆಚರಣೆಯು ತಡರಾತ್ರಿಯಲ್ಲಿ ನಡೆಯುವ ವೇಳೆ, ವಧುವಿಗೆ ತನ್ನ ವರನಿಗೆ ಸರ್ಕಾರಿ ಕೆಲಸವಿಲ್ಲ ಎಂಬ ಮಾಹಿತಿ ಸಿಕ್ಕಿತು. ಆ ನಂತರ ಮದುವೆಯ ವಿಧಿವಿಧಾನಗಳನ್ನು ಮುಂದುವರಿಸಲು ನಿರಾಕರಿಸಿದಳು ಎಂದು ವರದಿಯಾಗಿದೆ.

ಎರಡೂ ಕುಟುಂಬಗಳು ವಧುವಿನ ಮನಪರಿವರ್ತಿಸಲು ಪ್ರಯತ್ನಿಸಿತ್ತಾದರೂ ಅದು ಫಲಪ್ರಯೋಜಕವಾಗಿಲ್ಲ. ವಧುವಿನ ಮನವೊಲಿಸಲು ವರ ತನ್ನ ಸಂಬಳದ ಸ್ಲಿಪ್‌ ಅನ್ನು ಕೂಡಾ ಕಂಪೆನಿಯಿಂದ ಪಡೆದುಕೊಂಡಿದ್ದಾನೆ. ಅದಾಗ್ಯೂ ವಧು ತನ್ನ ಪಟ್ಟು ಬದಲಿಸಲಿಲ್ಲ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News