ಮಣಿಪುರ ಹಿಂಸಾಚಾರದ ಹಿಂದೆ ಗಡಿಯಾಚೆಯ ಶಕ್ತಿಗಳ ಕೈವಾಡವಿರಬಹುದು: ರಾಜ್ಯಪಾಲೆ
ಹಿಂಸಾಚಾರದಲ್ಲಿ ಬಾಹ್ಯ ಶಕ್ತಿಗಳು ಭಾಗಿಯಾಗಿರುವ ಬಗ್ಗೆ ಅವರು ಗುರುವಾರ ಸುಳಿವು ನೀಡಿದ್ದರು. ಗುಪ್ತಚರ ಮಾಹಿತಿ ಆಧರಿಸಿ ರಾಜ್ಯಪಾಲರು ಈ ಹೇಳಿಕೆ ನೀಡಿದ್ದಾರೆ ಎಂದು ರಾಜಭವನ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Update: 2023-07-14 17:51 GMT
ಗುವಾಹಟಿ: ಮಣಿಪುರದ ಸದ್ಯದ ಹಿಂಸಾಚಾರ ಪರಿಸ್ಥಿತಿಯ ಹಿಂದೆ ಗಡಿಯಾಚೆಯ ಶಕ್ತಿಗಳ ಕೈವಾಡವಿರಹುದು ಎಂದು ಮಣಿಪುರ ರಾಜ್ಯಪಾಲೆ ಅನುಸೂಯಾ ಉಯಿಕೆ ಹೇಳಿದ್ದಾರೆ.
ಹಿಂಸಾಚಾರದಲ್ಲಿ ಬಾಹ್ಯ ಶಕ್ತಿಗಳು ಭಾಗಿಯಾಗಿರುವ ಬಗ್ಗೆ ಅವರು ಗುರುವಾರ ಸುಳಿವು ನೀಡಿದ್ದರು. ಗುಪ್ತಚರ ಮಾಹಿತಿ ಆಧರಿಸಿ ರಾಜ್ಯಪಾಲರು ಈ ಹೇಳಿಕೆ ನೀಡಿದ್ದಾರೆ ಎಂದು ರಾಜಭವನ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
" ಮಣಿಪುರದಲ್ಲಿ ಅಶಾಂತಿಗೆ ಉತ್ತೇಜನ ನೀಡಲು ಗಡಿಯಾಚೆಯಿಂದ ನುಸುಳಿರಬಹುದಾದ ಶತ್ರುಗಳಿರಬಹುದು ಎನ್ನುವ ಗುಪ್ತಚರ ಮಾಹಿತಿಗಳನ್ನು ಆಧರಿಸಿ ರಾಜ್ಯಪಾಲರು ಹೇಳಿಕೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ" ಎಂದು ರಾಜಭವನ ಹೇಳಿಕೆಯಲ್ಲಿ ತಿಳಿಸಿದೆ.
"ಭದ್ರತಾ ಪಡೆಗಳು ಈ ಸವಾಲುಗಳನ್ನು ಎದುರಿಸಿವೆ. ಇಂತಹ ಯಾವುದೇ ಬೆದರಿಕೆಗಳನ್ನು ತೊಡೆದುಹಾಕಲು ನಿಯಮಿತವಾಗಿ ಜಂಟಿ ಕಾರ್ಯಾಚರಣೆಗಳನ್ನು ನಡೆಸುತ್ತಿವೆ" ಎಂದು ಉಯಿಕೆ ಭರವಸೆ ನೀಡಿದ್ದಾರೆ.