ಮೂರನೇ ದಿನಕ್ಕೆ ಕಾಲಿರಿಸಿದ ಕಿರಿಯ ವೈದ್ಯರ ಮುಷ್ಕರ

Update: 2024-10-07 16:08 GMT

PC : ANI 

ಕೋಲ್ಕತಾ : ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ, ಹತ್ಯೆಗೆ ನ್ಯಾಯ ಹಾಗೂ ಕೆಲಸದ ಸ್ಥಳದಲ್ಲಿ ಸುರಕ್ಷತೆ ಒದಗಿಸುವಂತೆ ಆಗ್ರಹಿಸಿ ಪಶ್ಚಿಮಬಂಗಾಳದಲ್ಲಿ ಕಿರಿಯ ವೈದ್ಯರು ನಡೆಸುತ್ತಿರುವ ಅಮರಣಾಂತ ಉಪವಾಸ ಮುಷ್ಕರ ಸೋಮವಾರ ಮೂರನೇ ದಿನಕ್ಕೆ ಕಾಲಿರಿಸಿದೆ.

6 ಮಂದಿ ಕಿರಿಯ ವೈದ್ಯರು ಶನಿವಾರ ಸಂಜೆಯಿಂದ ಅಮರಣಾಂತ ಉಪವಾಸ ಮುಷ್ಕರ ಆರಂಭಿಸಿದ್ದಾರೆ. ಅನಂತರ ಮತ್ತೊಬ್ಬ ಕಿರಿಯ ವೈದ್ಯರು ಅವರೊಂದಿಗೆ ಕೈಜೋಡಿಸಿದ್ದಾರೆ.

ಪಶ್ಚಿಮ ಬಂಗಾಳದ ವೈದ್ಯರ ಜಂಟಿ ವೇದಿಕೆಯ ಹಿರಿಯ ಸದಸ್ಯರು ಕಿರಿಯ ವೈದ್ಯರಿಗೆ ಬೆಂಬಲ ವ್ಯಕ್ತಪಡಿಸಲು ಅಮರಣಾಂತ ಉಪವಾಸದಲ್ಲಿ ಪಾಲ್ಗೊಳ್ಳುವ ಆಯ್ಕೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

‘‘ನಮ್ಮ ಅಮರಣಾಂತ ಉಪವಾಸ ಮುಷ್ಕರ ಆರಂಭವಾಗಿದೆ. ನಾವು ರಾಜ್ಯ ಸರಕಾರದಿಂದ ಯಾವುದೇ ಸಂದೇಶವನ್ನು ಸ್ವೀಕರಿಸಿಲ್ಲ. ನಮ್ಮ ಎಲ್ಲಾ ಬೇಡಿಕೆಗಳು ಈಡೇರುವ ವರೆಗೆ ಅಮರಣಾಂತ ಉಪವಾಸ ಮುಷ್ಕರ ಮುಂದುವರಿಯಲಿದೆ. ಮೃತಪಟ್ಟ ನಮ್ಮ ಸಹೋದರಿಗೆ ನ್ಯಾಯ ಕೋರಿ ನಡೆಸುತ್ತಿರುವ ಪ್ರತಿಭಟನೆಯ ದಾರಿಯಿಂದ ನಮ್ಮನ್ನು ದೂರ ಸರಿಸಲು ಬಾಹ್ಯಾ ಶಕ್ತಿಯಿಂದ ಸಾಧ್ಯವಾಗದು’’ ಎಂದು ಕಿರಿಯ ವೈದ್ಯ ಅನಿಕೇತ್ ಮಹತೊ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News