ಈ ವರ್ಷದ ಬೇಸಿಗೆ ಋತುವಿನ ಗರಿಷ್ಠ ವಿದ್ಯುತ್ ಬಳಕೆ 240 ಗಿಗಾ ವ್ಯಾಟ್
Update: 2024-05-25 15:24 GMT
ಹೊಸದಿಲ್ಲಿ : ದೇಶದ ವಿವಿಧ ಭಾಗಗಳಲ್ಲಿ ಶಾಖ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಬೇಸಿಗೆ ಋತುವಿನ ಗರಿಷ್ಠ ವಿದ್ಯುತ್ ಬೇಡಿಕೆ ಶುಕ್ರವಾರ ದಾಖಲಾಗಿದೆ.
ಜನರು ಹೆಚ್ಚೆಚ್ಚು ಏರ್ ಕಂಡೀಶನರ್‌ಗಳು ಮತ್ತು ತಂಪುಕಾರಕ ಸಲಕರಣೆಗಳನ್ನು ಬಳಸುತ್ತಿರುವಂತೆಯೇ, ಶುಕ್ರವಾರ 239.96 ಗಿಗಾ ವ್ಯಾಟ್ ವಿದ್ಯುತ್ ಖರ್ಚಾಗಿದೆ ಎಂದು ವಿದ್ಯುತ್ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಇದು ಈ ಋತುವಿನಲ್ಲಿ ಈವರೆಗಿನ ಗರಿಷ್ಠ ವಿದ್ಯುತ್ ಬಳಕೆಯಾಗಿದೆ.
ಗುರುವಾರ 236.59 ಗಿಗಾ ವ್ಯಾಟ್ ವಿದ್ಯುತ್ ಖರ್ಚಾದರೆ, ಬುಧವಾರ 235.06 ಗಿಗಾವ್ಯಾಟ್ ವಿದ್ಯುತ್ ಬಳಕೆಯಾಗಿತ್ತು.
ಸಾರ್ವಕಾಲಿಕ ಗರಿಷ್ಠ ವಿದ್ಯುತ್ ಬಳಕೆ 2023 ಸೆಪ್ಟಂಬರ್‌ನಲ್ಲಿ ದಾಖಲಾಗಿತ್ತು. ಅಂದು 243.27 ಗಿಗಾ ವ್ಯಾಟ್ ವಿದ್ಯುತ್ ಖರ್ಚಾಗಿತ್ತು. ಈ ದಾಖಲೆಯು ಈ ಬೇಸಿಗೆ ಋತುವಿನಲ್ಲಿ ಮುರಿಯುವ ನಿರೀಕ್ಷೆಯಿದೆ.