ಶಿಕ್ಷೆ ರದ್ದುಗೊಳಿಸುವಂತೆ ಅಸಾರಾಮ್ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ
Update: 2024-03-01 16:44 GMT
ಹೊಸದಿಲ್ಲಿ : ಆರೋಗ್ಯ ಹದಗೆಡುತ್ತಿರುವ ಹಿನ್ನಲೆಯಲ್ಲಿ ತನ್ನ ಶಿಕ್ಷೆ ರದ್ದುಗೊಳಿಸುವಂತೆ ಕೋರಿ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಘೋಷಿತ ದೇವಮಾನವ ಆಸಾರಾಮ್ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಪೊಲೀಸ್ ಕಸ್ಟಡಿಯಲ್ಲಿ ಮಹಾರಾಷ್ಟ್ರದ ಖೊಪೋಲಿಯಲ್ಲಿರುವ ಮಾಧವ್ಬಾಗ್ ಹಾರ್ಟ್ ಹಾಸ್ಪಿಟಲ್ನಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಸರಕಾರಿ ಅಭಿಯೋಜಕರ ಹೇಳಿಕೆಯನ್ನು ಆಸಾರಾಮ್ ಒಪ್ಪಿಕೊಳ್ಳಲು ಸಿದ್ಧರಿದ್ದರು ಎಂದು ಆಸಾರಾಮ್ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಮಕುಲ್ ರೋಹ್ಟಗಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಂಕರ್ ದತ್ತಾ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು.
ಇದಕ್ಕೆ ಪೀಠ, ಮಾಧವಭಾಗ್ ಹಾರ್ಟ್ ಹಾಸ್ಪಿಟಲ್ನಲ್ಲಿ ಚಿಕಿತ್ಸೆ ಪಡೆಯಲು ರಾಜಸ್ಥಾನ ಉಚ್ಛ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸುವಂತೆ ಆಸಾರಾಮ್ಗೆ ಸೂಚಿಸಿತು ಹಾಗೂ ಅದು ಕಾನೂನು ಪ್ರಕಾರ ಪರಿಗಣಿಸಲಿದೆ ಎಂದು ತಿಳಿಸಿತು.