ಹಿಂದೂಯೇತರರು ದೇವಸ್ಥಾನದ ಒಳಗೆ ಪ್ರವೇಶಿಸುವಂತಿಲ್ಲ

Update: 2024-01-31 15:35 GMT

ಮದ್ರಾಸ್‌ ಹೈಕೋರ್ಟ್ | Photo: PTI 

ಚೆನ್ನೈ : ಪಳನಿ ದೇವಸ್ಥಾನ ಮತ್ತು ರಾಜ್ಯದಲ್ಲಿರುವ ಅದರ ಉಪ ದೇವಾಲಯಗಳ ಒಳಗೆ ಹಿಂದೂಯೇತರರನ್ನು ಬಿಡಬಾರದು ಎಂದು ಮದ್ರಾಸ್‌ ಹೈಕೋರ್ಟ್ ಮಂಗಳವಾರ ತಮಿಳುನಾಡು ಸರಕಾರ ಮತ್ತು ರಾಜ್ಯದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ನಿದೇರ್ಶನ ನೀಡಿದೆ.

‘‘ದೇವಾಲಯದ ಕೊಡಿಮರಕ್ಕಿಂತ ಮುಂದಕ್ಕೆ ಮತ್ತು ದೇವಾಲಯದ ಪ್ರಮುಖ ಸ್ಥಳಗಳಿಗೆ ಹಿಂದೂಯೇತರರನ್ನು ಹೋಗಲು ಬಿಡಬಾರದು. ಯಾಕೆಂದರೆ ದೇವಸ್ಥಾನಗಳು ಪ್ರವಾಸಿ ಸ್ಥಳಗಳಲ್ಲ’’ ಎಂದು ನ್ಯಾಯಮೂರ್ತಿ ಎಸ್. ಶ್ರೀಮತಿ ನೇತೃತ್ವದ ನ್ಯಾಯಪೀಠವೊಂದು ತಮಿಳುನಾಡು ಸರಕಾರಕ್ಕೆ ಸೂಚಿಸಿದೆ.

‘‘ಹಿಂದೂಯೇತರರು ಕೊಡಿಮರದ ಬಳಿಕ ದೇವಸ್ಥಾನದ ಒಳಗೆ ಪ್ರವೇಶಿಸುವಂತಿಲ್ಲ’’ ಎಂಬ ಬರಹಗಳನ್ನು ಎಲ್ಲಾ ಹಿಂದೂ ದೇವಾಲಯಗಳಲ್ಲಿ ಪ್ರದರ್ಶಿಸಬೇಕು’’ ಎಂದು ನ್ಯಾಯಾಲಯ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News