ಸಂಸತ್ತಿನತ್ತ ರೈತರ ಪ್ರತಿಭಟನಾ ಮೆರವಣಿಗೆಗೆ ನೊಯ್ಡಾದಲ್ಲಿ ಪೊಲೀಸರಿಂದ ತಡೆ

Update: 2024-02-08 09:44 GMT

Screengrab:X/@ANI

ಹೊಸದಿಲ್ಲಿ: ವಿವಿಧ ಬೇಡಿಕೆಗಳನ್ನು ಹಾಗೂ ಹೆಚ್ಚುವರಿ ಪರಿಹಾರವನ್ನು ಆಗ್ರಹಿಸಿ ಉತ್ತರ ಪ್ರದೇಶದ ರೈತರು ಸಂಸತ್ತಿನತ್ತ ಪ್ರತಿಭಟನಾ ಮೆರವಣಿಗೆ ಹೊರಟಿದ್ದು ಅವರನ್ನು ಪೊಲೀಸರು ನೊಯ್ಡಾದಲ್ಲಿ ತಡೆದಿದ್ದಾರೆ.

ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ದಿಲ್ಲಿ ಗಡಿಯಲ್ಲಿ ಪೊಲೀಸರು ವ್ಯಾಪಕ ಬಂದೋಬಸ್ತ್‌ ಮಾಡಿದ್ದಾರೆ. ಪ್ರತಿಭಟನೆಯ ಕಾರಣ ನೊಯ್ಡಾ- ಗ್ರೇಟರ್‌ ನೊಯ್ಡಾ ಎಕ್ಸ್‌ಪ್ರೆಸ್‌ವೇ ಮುಂತಾದ ಸ್ಥಳಗಳಲ್ಲಿ ಸಂಚಾರದಲ್ಲಿ ವ್ಯತ್ಯಯವಾಗಿದೆ. ಹಲವೆಡೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ.

ಭಾರತೀಯ ಕಿಸಾನ್‌ ಪರಿಷದ್‌ ನೇತೃತ್ವದಲ್ಲಿ ರೈತರು ನೊಯ್ಡಾದ ಮಹಾಮಾಯಾ ಫ್ಲೈಓವರ್‌ ಪ್ರದೇಶದಲ್ಲಿ ಜಮಾಯಿಸಲಿದ್ದಾರೆ. ಅಲ್ಲಿಂದ ನಂತರ ಸಂಸತ್ತಿನತ್ತ ತೆರಳುವ ಯೋಜನೆಯನ್ನು ಅವರು ಹೊಂದಿದ್ದಾರೆ.

ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರಗಳು ಸ್ವಾಧೀನಪಡಿಸಿಕೊಂಡ ತಮ್ಮ ಜಮೀನಿಗೆ ಬದಲಿಯಾಗಿ ಹೆಚ್ಚುವರಿ ಪರಿಹಾರ ಮತ್ತು ಅಭಿವೃದ್ಧಿಪಡಿಸಿದ ಪ್ಲಾಟ್‌ಗಳನ್ನು ನೀಡಬೇಕೆಂಬುದು ರೈತರ ಆಗ್ರಹವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News