ಉತ್ತರಪ್ರದೇಶ | ಪೊಲೀಸರಿಂದ ಥಳಿತ ; ದಲಿತ ಬಾಲಕ ಮೃತ್ಯು

Update: 2024-09-18 13:55 GMT

   ಸಾಂದರ್ಭಿಕ ಚಿತ್ರ 

ಲಕ್ನೋ : ಪೊಲೀಸರ ಥಳಿತಕ್ಕೆ ಒಳಗಾಗಿ 16 ವರ್ಷದ ದಲಿತ ಬಾಲಕನೊಬ್ಬ ಮೃತಪಟ್ಟ ಘಟನೆ ಉತ್ತರಪ್ರದೇಶದಲ್ಲಿ ಬುಧವಾರ ನಡೆದಿದೆ. ಕಳವು ಪ್ರಕರಣಕ್ಕೆ ಸಂಬಂಧಿಸಿ ಬಾಲಕನನ್ನು ಸೆಪ್ಟೆಂಬರ್ 3ರಂದು ಖೇರಿ ಠಾಣಾ ಪೊಲೀಸರು ಬಂಧಿಸಿದ್ದರು. ವಿಚಾರಣೆಯ ವೇಳೆ ಪೊಲೀಸರು ಆತನನ್ನು ತೀವ್ರವಾಗಿ ಥಳಿಸಿದ್ದರು. ಗಂಭೀರವಾಗಿ ಗಾಯಗಳಾದ ಬಾಲಕನು ಶನಿವಾರ ಲಕ್ನೋದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ವರದಿಗಳು ತಿಳಿಸಿವೆ.

‘‘ ಬಾಲಕನ ಸಾವಿಗೆ ಸಂಬಂಧಿಸಿ ವಿಸ್ತೃತ ತನಿಖೆಗೆ ಆದೇಶಿಸಲಾಗಿದೆ’’ ಎಂದು ಪೊಲೀಸ್ ಅಧೀಕ್ಷಕ ಗಣೇಶ್ ಪ್ರಸಾದ್ ಸಾಹಾ ಅವರ ಹೇಳಿಕೆಯನ್ನು ಉದ್ದೇಶಿಸಿ, ‘ ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಮೃತಪಟ್ಟ ಬಾಲಕ ಆಕಾಶ್ ಸೆಪ್ಟಿಸೆಮಿಯಾ ಕಾಯಿಲೆಯೆಂದ ಬಳಲುತ್ತಿದ್ದು, ದೀರ್ಘಸಮಯದಿಂದ ಆತ ಅಸ್ವಸ್ಥನಾಗಿದ್ದನೆನ್ನಲಾಗಿದೆ’’ ಎಂದು ವರದಿ ತಿಳಿಸಿದೆ.

ಬಾಲಕನ ಸಾವಿನಿಂದ ಆಕ್ರೋಶಗೊಂಡ ಆತನ ಬಂಧುಗಳು ಹಾಗೂ ಸಿಸಾವಾನ್ ಕಾಲಾ ಗ್ರಾಮದ ನಿವಾಸಿಗಳು, ಪೊಲೀಸ್ ಠಾಣೆಯ ಸಮೀಪ ಹಲವು ತಾಸುಗಳವರೆಗೆ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಿರ್ಮಿಸಿದ್ದರು ಹಾಗೂ ಬಾಲಕನ ಸಾವಿಗೆ ಕಾರಣರಾದ ಪೊಲೀಸ್ ಸಿಬ್ಬಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಆಗ್ರಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News