ಹಿಂದೂಯೇತರರನ್ನು ದೂರವಿಡಲು ಗರ್ಬಾದಲ್ಲಿ ಭಾಗವಹಿಸುವವರಿಗೆ ಗೋಮೂತ್ರ ಸಿಂಪಡಿಸಲು, ಆಧಾರ್‌ ಕಡ್ಡಾಯಗೊಳಿಸಲು ವಿಹಿಂಪ, ಬಜರಂಗದಳ ಚಿಂತನೆ

Update: 2023-10-16 10:57 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ನವರಾತ್ರಿ ಸಂದರ್ಭ ನಡೆಯುವ ಗರ್ಬಾ ನೃತ್ಯ ಕಾರ್ಯಕ್ರಮಗಳಲ್ಲಿ ಹಿಂದೂಯೇತರರು ಭಾಗವಹಿಸುವುದನ್ನು ತಡೆಯಲು ಕೆಲವೊಂದು ಕ್ರಮಗಳಿಗೆ ವಿಶ್ವ ಹಿಂದು ಪರಿಷದ್‌ ಮತ್ತು ಬಜರಂಗದಳ ಮುಂದಾಗಿವೆ ಎಂದು wire.in ವರದಿ ಮಾಡಿದೆ.

ಗರ್ಬಾ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪ್ರವೇಶಿಸುವವರಿಗೆ ಗೋಮೂತ್ರ ಸಿಂಪಡಿಸಿದರೆ ಹಾಗೂ ಅವರಿಗೆ ತಿಲಕವಿಟ್ಟರೆ ಆರಂಭದಲ್ಲಿಯೇ ಹಿಂದೂಗಳು ಮತ್ತು ಹಿಂದೂಯೇತರರನ್ನು ಪ್ರತ್ಯೇಕಿಸಬಹುದಾಗಿದೆ ಎಂದು ಗುಜರಾತ್‌ ವಿಹಿಂಪ ಅಧ್ಯಕ್ಷ ಹಿತೇಂದ್ರಸಿಂಗ್‌ ರಾಜಪುತ್‌ ಹೇಳಿದ್ದಾರೆಂದು ವರದಿಯಾಗಿದೆ.

ಲವ್‌ ಜಿಹಾದ್‌ ತಡೆಯಲು ತಿಲಕವಿಟ್ಟು ಪ್ರವೇಶ ನೀಡುವ ವ್ಯವಸ್ಥೆ ಅಗತ್ಯ ಎಂದು ಹಲವು ಬಿಜೆಪಿ ಶಾಸಕರು ಕೂಡ ಅಭಿಪ್ರಾಯಪಟ್ಟಿದ್ದಾರೆಂದು ವರದಿಯಾಗಿದೆ.

ಮಹಾರಾಷ್ಟ್ರದಲ್ಲಿ ಗರ್ಬಾ ನೃತ್ಯದಲ್ಲಿ ಭಾಗವಹಿಸುವವರು ತಮ್ಮ ಆಧಾರ್‌ ಕಾರ್ಡ್‌ ಹಾಜರುಪಡಿಸಬೇಕೆಂಬ ನಿಯಮವನ್ನು ವಿಹಿಂಪ ತಂದಿದೆ ಹಾಗೂ ಈ ಮೂಲಕ ಭಾಗವಹಿಸುವವರು ಹಿಂದೂಗಳೆಂದು ದೃಢಪಡಿಸಲು ಮುಂದಾಗಿದೆ.

“ಹಬ್ಬದ ಕಾರ್ಯಕ್ರಮಗಳ ಆಯೋಜಕರು ಆಧಾರ್‌ ಹಾಜರಿಯನ್ನು ಕಡ್ಡಾಯಗೊಳಿಸಬೇಕು. ಭಾಗವಹಿಸುವವರ ಹಣೆಗೆ ತಿಲಕವಿಡಬೇಕು ಹಾಗೂ ಕೈಗೆ ಕಲ್ವಾ (ಪವಿತ್ರ ಕೆಂಪು ನೂಲು) ಕಟ್ಟಬೇಕು,” ಎಂದು ವಿಹಿಂಪ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್‌ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News