ಅ.12ರಂದು ಆರೆಸ್ಸೆಸ್‌ನ ವಿಜಯ ದಶಮಿ ಕಾರ್ಯಕ್ರಮ | ಮುಖ್ಯ ಅತಿಥಿಯಾಗಲಿರುವ ಇಸ್ರೋ ಮಾಜಿ ಮುಖ್ಯಸ್ಥ ರಾಧಾಕೃಷ್ಣನ್

Update: 2024-09-16 15:28 GMT

ಕೆ.ರಾಧಾಕೃಷ್ಣನ್ |  PTI 

ನಾಗ್ಪುರ(ಮಹಾರಾಷ್ಟ್ರ ): ಇಲ್ಲಿ ಅ.12ರಂದು ನಡೆಯಲಿರುವ ಆರೆಸ್ಸೆಸ್‌ನ ವಿಜಯ ದಶಮಿ ಕಾರ್ಯಕ್ರಮದಲ್ಲಿ ಇಸ್ರೋದ ಮಾಜಿ ಮುಖ್ಯಸ್ಥ ಕೆ.ರಾಧಾಕೃಷ್ಣನ್ ಅವರು ಮುಖ್ಯ ಅತಿಥಿಯಾಗಲಿದ್ದಾರೆ.

ಆರೆಸ್ಸೆಸ್ ಸೋಮವಾರ ಎಕ್ಸ್ ಪೋಸ್ಟ್ ಮೂಲಕ ಈ ಮಾಹಿತಿಯನ್ನು ನೀಡಿದೆ.

ವಿಜಯ ದಶಮಿ ಆರೆಸ್ಸೆಸ್‌ನ ಅತ್ಯಂತ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಅದರ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಮುಖ್ಯ ಭಾಷಣವನ್ನು ಮಾಡಲಿದ್ದಾರೆ.

ಅ.12ರಂದು ಬೆಳಿಗ್ಗೆ 7:30ಕ್ಕೆ ರೇಶಿಮಬಾಗ್ ಮೈದಾನದಲ್ಲಿ ಕಾರ್ಯಕ್ರಮವು ನಡೆಯಲಿದೆ ಎಂದು ಆರೆಸ್ಸೆಸ್ ತಿಳಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News