ಜುಲೈ 23ರಂದೇ ಕೇರಳಕ್ಕೆ ಪ್ರಕೃತಿ ವಿಕೋಪದ ಮುನ್ನೆಚ್ಚರಿಕೆ ನೀಡಲಾಗಿತ್ತು: ಗೃಹ ಸಚಿವ ಅಮಿತ್‌ ಶಾ

Update: 2024-07-31 12:10 GMT

ಗೃಹ ಸಚಿವ ಅಮಿತ್‌ ಶಾ (Screengrab:X/ANI)

ಹೊಸದಿಲ್ಲಿ: ಭಾರೀ ಮಳೆ ಮತ್ತು ಪ್ರಾಕೃತಿಕ ವಿಕೋಪ ಸಂಭವಿಸುವ ಬಗ್ಗೆ ಕೇಂದ್ರ ಸರಕಾರವು ಜುಲೈ 23ರಂದೇ ಕೇರಳ ಸರ್ಕಾರಕ್ಕೆ ಮುನ್ನೆಚ್ಚರಿಕೆ ನೀಡಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಕೇರಳಕ್ಕೆ ಈ ಮೊದಲೇ ಭಾರೀ ಮಳೆ ಮತ್ತು ಭೂಕುಸಿತದ ಎಚ್ಚರಿಕೆಯನ್ನು ನೀಡಲಾಗಿತ್ತು, ಅಲ್ಲದೆ ಎನ್‌ಡಿಆರ್‌ಎಫ್‌ ತಂಡಗಳು ಜುಲೈ 23ಕ್ಕೆ ಕೇರಳಕ್ಕೆ ತೆರಳಿದ್ದವು ಎಂದು ಅವರು ರಾಜ್ಯ ಸಭೆಯಲ್ಲಿ ತಿಳಿಸಿದ್ದಾರೆ.

ಬಳಿಕ ಇನ್ನೂ ಮೂರು ದಿನಗಳ ಕಾಲ ಈ ಎಚ್ಚರಿಕೆಗಳು ನೀಡಲಾಗಿತ್ತು, ಜುಲೈ 26 ರಂದು ಭಾರೀ ಮಳೆ, ಭೂಕುಸಿತದಂತಹ ಘಟನೆಗಳು ನಡೆದು ಜನರ ಸುರಕ್ಷತೆಗೆ ಅಪಾಯವಿದೆ ಎಂದು ತಿಳಿಸಲಾಗಿದೆ ಎಂದು ಗೃಹ ಸಚಿವರು ಹೇಳಿದರು.

ಕೇರಳ ಸರ್ಕಾರವು ಮುಂಚಿತವಾಗಿ ನೀಡಿದ್ದ ಎಚ್ಚರಿಕೆಗಳಿಗೆ ಕಿವಿಗೊಡಲಿಲ್ಲ, ಅಲ್ಲದೇ ಎನ್‌ಡಿಆರ್‌ಎಫ್‌ ತಂಡಗಳು ರಾಜ್ಯಕ್ಕೆ ಬಂದಿರುವುದು ಗೊತ್ತಾದರೂ ಅವರು ಎಚ್ಚೆತ್ತುಕೊಳ್ಳಲಿಲ್ಲ. ಈಗ ಅನಾಹುತ ಆಗಿ ಹೋಗಿದೆ. ನರೇಂದ್ರ ಮೋದಿ ಸರ್ಕಾರ ಕೇರಳ ಸರ್ಕಾರಕ್ಕೆ ಎಲ್ಲಾ ರೀತಿಯ ನೆರವನ್ನು ನೀಡುತ್ತೆ ಎಂದರು. 

ಕೇಂದ್ರ ಸರ್ಕಾರದ ಮುನ್ನೆಚ್ಚರಿಕೆ ವ್ಯವಸ್ಥೆ ಕುರಿತು ವಿಪಕ್ಷಗಳು ಟೀಕಿಸಿದ ಹಿನ್ನೆಲೆ ಪ್ರತಿಕ್ರಿಯಿಸಿದ ಅಮಿತ್ ಶಾ, ಪ್ರಾಕೃತಿಕ ವಿಕೋಪದಿಂದ ಅನಾಹುತ ಸಂಭವಿಸುವ ಸಾಧ್ಯತೆ ಬಗ್ಗೆ ಏಳು ದಿನಗಳ ಹಿಂದೆಯೇ ತಿಳಿಸಲಾಗಿತ್ತು. 9 ಎನ್‌ಡಿಆರ್‌ಎಫ್‌ ತಂಡಗಳನ್ನು ಜುಲೈ 23ರಂದು ಕೇರಳಕ್ಕೆ ಕಳುಹಿಸಲಾಗಿತ್ತು. ಎನ್‌ಡಿಆರ್‌ಎಫ್‌ ತಂಡಗಳನ್ನು ನೋಡಿದ ಮೇಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿದ್ದರೆ ಸಾವಿನ ಪ್ರಮಾಣವನ್ನು ತಗ್ಗಿಸಬಹುದಿತ್ತು ಎಂದು ಅಮಿತ್‌ ಶಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News