ಪಶ್ಚಿಮ ಬಂಗಾಳ ರಾಜ್ಯಪಾಲರಿಂದ ಪೊಲೀಸರು, ಸಹಾಯಕ ವಿತ್ತ ಸಚಿವೆಗೆ ರಾಜಭವನ ಪ್ರವೇಶ ನಿಷೇಧ

Update: 2024-05-03 16:37 GMT

 ಸಿ.ವಿ.ಆನಂದ ಭೋಸ್(PTI) , ಚಂದ್ರಿಮಾ ಭಟ್ಟಾಚಾರ್ಯ(ANI)

ಹೊಸದಿಲ್ಲಿ ; ತನ್ನ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಬೆನ್ನಲ್ಲೇ ಪಶ್ಚಿಮಬಂಗಾಳ ರಾಜ್ಯಪಾಲ ಸಿ.ವಿ.ಆನಂದ ಭೋಸ್ ಅವರು ರಾಜಭವನಕ್ಕೆ ಪೊಲೀಸರು ಹಾಗೂ ಸಹಾಯಕ ವಿತ್ತ ಸಚಿವ ಚಂದ್ರಿಮಾ ಭಟ್ಟಾಚಾರ್ಯ ಅವರ ಪ್ರವೇಶವನ್ನು ನಿಷೇಧಿಸಿದ್ದಾರೆ.   

ರಾಜ್ಯಪಾಲರ ವಿರುದ್ಧ ಮಾಧ್ಯಮಗಳ ಮುಂದೆ ಮಾನಹಾನಿಕರ ಹಾಗೂ ಸಂವಿಧಾನ ವಿರೋಧಿ ಹೇಳಿಕೆಗಳನನು ನೀಡಿದ್ದಕ್ಕಾಗಿ ಚಂದ್ರಿಮಾ ಭಟ್ಟಾಚಾರ್ಯ ಅವರಿಗೆ ಕೋಲ್ಕತಾ, ಡಾರ್ಜಿಲಿಂಗ್ ಹಾಗೂ ಬ್ಯಾರಾಕ್‌ಪೋರ್‌ಗಳಲ್ಲಿರುವ ರಾಜಭವನದ ಆವರಣಗಳಿಗೆ ಪ್ರವೇಶ ನಿಷೇಧಿಸಲಾಗಿದೆಯೆಂದು ರಾಜಭವನದ ಆದೇಶ ತಿಳಿಸಿದೆ.

ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು ಭಾಗವಹಿಸುವ ಯಾವುದೇ ಕಾರ್ಯಕ್ರಮದಲ್ಲಿಯೂ ರಾಜ್ಯಪಾಲರು ಪಾಲ್ಗೊಳ್ಳುವುದಿಲ್ಲವೆಂದು ಆದೇಶ ತಿಳಿಸಿದೆ.

ಸಚಿವೆಯ ವಿರುದ್ಧ ಮುಂದಿನ ಕಾನೂನುಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಲಹೆಯನ್ನು ಪಡೆಯುವುದಕ್ಕಾಗಿ ಭಾರತದ ಅಟಾರ್ನಿ ಜನರಲ್ ಅವರನ್ನು ಸಂಪರ್ಕಿಸಲಾಗಿದೆಯೆಂದು ಆದೇಶವು ತಿಳಿಸಿದೆ.

ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ರಾಜಭವನದ ಮಹಿಳಾ ಉದ್ಯೋಗಿಯೊಬ್ಬರು ಮೇ 2ರಂದು ಆಪಾದಿಸಿದ್ದರು. ರಾಜ್ಯಪಾಲರ ವಿರುದ್ಧ ಆಕೆ ಕೋಲ್ಕತಾದ ಹರೇ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News