ಪ.ಬಂಗಾಳ: ಮತ ಏಣಿಕೆ ಕೇಂದ್ರದಲ್ಲಿ ಮೊಹರಿರುವ ಬ್ಯಾಲೆಟ್ ಬಾಕ್ಸ್ ಗಳು ಪತ್ತೆ

Update: 2023-07-18 15:36 GMT

ಸಾಂದರ್ಭಿಕ ಚಿತ್ರ | Photo: PTI

ಕೋಲ್ಕತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಗಜೋಲ್ ಪಟ್ಟಣದ ಹೈಸ್ಕೂಲ್ ಒಂದರಲ್ಲಿ ಮೊಹರು ಮಾಡಿದ ಹಾಗೂ ಏಣಿಕೆಯಾಗದ ಮತಪತ್ರಗಳಿರುವ ಬ್ಯಾಲೆಟ್ ಪೆಟ್ಟಿಗೆಗಳನ್ನು ಪೊಲೀಸರು ಮಂಗಳವಾರ ಬೆಳಗ್ಗೆ ವಶಪಡಿಸಿಕೊಂಡಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಗ್ರಾಮಪಂಚಾಯತ್ ಚುನಾವಣೆಯ ವೇಳೆ ಈ ಶಾಲೆಯ ತರಗತಿಕೊಠಡಿಯೊಂದನ್ನು ಮತಏಣಿಕೆ ಕೇಂದ್ರವಾಗಿ ಪರಿವರ್ತಿಸಲಾಗಿತ್ತು ಹಾಗೂ ಅವುಗಳಲ್ಲಿ ಬ್ಯಾಲೆಟ್ ಪೆಟ್ಟಿಗೆಗಳನ್ನು ಮೊಹರು ಮಾಡಿ ಇರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಮತಪೆಟ್ಟಿಗೆಗಳು ಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪ್ರದೀಪ್ ಭಟ್ಟಾಚಾರ್ಯ ಅವರು,ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆದಿರುವ ಪಂಚಾಯತ್ ಚುನಾವಣೆಗಳು ಒಂದು ಪ್ರಹಸನವಾಗಿದೆ ಎಂದು ಆಪಾದಿಸಿದ್ದಾರೆ.

ಈ ಮತಪೆಟ್ಟಿಗೆಗಳಲ್ಲಿರುವ ಮತಪತ್ರಗಳನ್ನು ಏಣಿಕೆ ಮಾಡದೆ ಫಲಿತಾಂಶಗಳನ್ನು ಘೋಷಿಸಿದಕ್ಕಾಗಿ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಭಟ್ಟಾಚಾರ್ಯ ಆಗ್ರಹಿಸಿದ್ದಾರೆ.

ಗ್ರಾಮಾಡಳಿತ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯಲು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನಡೆಸಿದ ಹತಾಶೆಯ ಪ್ರಯತ್ನ ಇದಾಗಿದೆ ಎಂದರು.

ಜುಲೈ 8ರಂದು ನಡೆದ ಪಂಚಾಯತ್ ಚುನಾವಣೆಗಳಲ್ಲಿ ಟಿಎಂಸಿಯು ಪ್ರಚಂಡ ಜಯವನ್ನು ದಾಖಲಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News