‌ಸೋನಿಯಾ ಗಾಂಧಿ ತನ್ನನ್ನು ಪ್ರಧಾನಿ ಮಾಡುವುದಿಲ್ಲ ಎಂದು ಪುತ್ರಿಗೆ ತಿಳಿಸಿದ್ದ ಪ್ರಣಬ್ ಮುಖರ್ಜಿ!

Update: 2023-12-06 04:46 GMT

ಪ್ರಣಬ್ ಮುಖರ್ಜಿ (PTI)

ಹೊಸದಿಲ್ಲಿ: 2004ರಲ್ಲಿ ಪ್ರಧಾನಿಯಾಗುವ ಅವಕಾಶಗಳ ಬಗ್ಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಪುತ್ರಿ ಶಮಿಷ್ಟಾ ಮುಖರ್ಜಿ ಕೇಳಿದಾಗ, "ಇಲ್ಲ, ಈಕೆ (ಸೋನಿಯಾ ಗಾಂಧಿ) ನನ್ನನ್ನು ಪ್ರಧಾನಿಯಾಗಿ ಮಾಡುವುದಿಲ್ಲ" ಎಂದು ಮುಖರ್ಜಿಯವರು ಉತ್ತರಿಸಿದ್ದಾರೆ.

"ಇನ್ ಪ್ರಣಬ್, ಮೈ ಫಾದರ್: ಎ ಡಾಟರ್ ರಿಮೆಂಬರ್ಸ್" ಎಂಬ ಸದ್ಯದಲ್ಲೇ ಬಿಡುಗಡೆಯಾಗುವ ಕೃತಿಯಲ್ಲಿ ಶರ್ಮಿಷ್ಟಾ, ಮಾಜಿ ರಾಷ್ಟ್ರಪತಿಯ ಅಪರೂಪದ ವಿವರಗಳನ್ನು ದಾಖಲಿಸಿದ್ದಾರೆ. ಪ್ರಧಾನಿ ಹುದ್ದೆ ರೇಸ್‍ನಿಂದ ಈ ಮುತ್ಸದ್ದಿಯನ್ನು ಹೊರಹಾಕಲು ಸೋನಿಯಾ ಗಾಂಧಿ ನಿರ್ಧರಿಸಿದ ಬಳಿಕ ತಂದೆಯ ಪ್ರತಿಕ್ರಿಯೆ ಇದಾಗಿತ್ತು ಎಂದು ಹೇಳಿದ್ದಾರೆ.

ಆದರೆ ತಮ್ಮ ಬದಲು ಮನಮೋಹನ್ ಸಿಂಗ್ ಅವರನ್ನು ದೇಶದ ಉನ್ನತ ಹುದ್ದೆಗೆ ಆಯ್ಕೆ ಮಾಡಿದ ಬಗ್ಗೆ ಸೋನಿಯಾ ಕುರಿತು ಪ್ರಣಬ್ ಮುಖರ್ಜಿಯವರಿಗೆ ಯಾವುದೇ ಹಗೆತನ ಇರಲಿಲ್ಲ ಎಂದು 2021ರಲ್ಲಿ ಕಾಂಗ್ರೆಸ್ ತೊರೆದ ಮಾಜಿ ವಕ್ತಾರೆ ಪುಸ್ತಕದಲ್ಲಿ ವಿವರಿಸಿದ್ದಾರೆ.

ತಂದೆಯ ದಿನಚರಿ ಅವರ ವೈಯಕ್ತಿಕ ಕಥಾನಕದ ಬಣ್ಣನೆಯಾಗಿದ್ದರೂ, ಮುಖರ್ಜಿ ರಾಜಕೀಯ ಜೀವನದ ಹಲವು ಅಪರೂಪದ ಸತ್ಯಗಳನ್ನು ಈ ಕೃತಿಯಲ್ಲಿ ಶರ್ಮಿಷ್ಟಾ ಬೆಳಕಿಗೆ ತಂದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನೆಹರೂ-ಗಾಂಧಿ ಕುಟುಂಬದ ವ್ಯಕ್ತಿಪೂಜೆ, ರಾಹುಲ್‍ಗಾಂಧಿಯವರಲ್ಲಿ ವರ್ಚಸ್ಸಿನ ಕೊರತೆ ಹಾಗೂ ರಾಜಕೀಯವನ್ನು ಅರ್ಥ ಮಾಡಿಕೊಳ್ಳುವ ಚಾಣಕ್ಷತೆಯ ಕೊರತೆ ಮತ್ತಿತರ ಕಾರಣಗಳಿಂದ ನಂಬರ್ ವನ್ ಹುದ್ದೆಗೆ ಸೋನಿಯಾಗಾಂಧಿಯವರ ವಿಶ್ವಾಸ ಗಳಿಸಲು ಸಾಧ್ಯವಾಗಲಿಲ್ಲ ಎನ್ನುವ ಅಂಶದ ಉಲ್ಲೇಖ ದಿನಚರಿಯಲ್ಲಿದೆ ಎಂದು ಪ್ರಕಾಶಕರಾದ ರೂಪಾ ಪಬ್ಲಿಕೇಶನ್ಸ್ ಬಹಿರಂಗಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News