ಮಾನವೀಯತೆಯು ಎಚ್ಚರಗೊಳ್ಳುವುದು ಯಾವಾಗ?: ಗಾಝಾ ಮೇಲೆ ಇಸ್ರೇಲ್ ದಾಳಿಗೆ ಪ್ರಿಯಾಂಕಾ ಗಾಂಧಿ ಕಿಡಿ

Update: 2023-10-27 06:30 GMT

ಪ್ರಿಯಾಂಕಾ ಗಾಂಧಿ 

ಹೊಸದಿಲ್ಲಿ: ಗಾಝಾದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಟೀಕಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, “ಯಾವುದೇ ಅಂತರರಾಷ್ಟ್ರೀಯ ಕಾನೂನು ಉಲ್ಲಂಘವಾಗಿಲ್ಲವೇ? ಮಾನವೀಯತೆಯು ಎಚ್ಚರಗೊಳ್ಳುವುದು ಯಾವಾಗ?” ಎಂದು ಪ್ರಶ್ನಿಸಿದ್ದಾರೆ.

ಇಸ್ರೇಲ್‌ ಮೇಲೆ ಹಮಾಸ್‌ ನಡೆಸಿದ ಬಳಿಕ ಇಸ್ರೇಲ್‌ ತನ್ನ ದಾಳಿಯನ್ನು ತೀವ್ರಗೊಳಿಸಿದ್ದು, ಕಳೆದ 20 ದಿನಗಳಲ್ಲಿ 7,000 ಕ್ಕೂ ಹೆಚ್ಚು ಫೆಲೆಸ್ತೀನಿಯನ್ನರನ್ನು ಇಸ್ರೇಲ್‌ ದಾಳಿಗೆ ಬಲಿಯಾಗಿದ್ದಾರೆ ಎಂದು ಗಾಝಾ ಆರೋಗ್ಯ ಇಲಾಖೆ ತಿಳಿಸಿದೆ.

ಗಾಝಾದಲ್ಲಿ 7,000 ಜನರನ್ನು ಕೊಂದ ನಂತರವೂ ರಕ್ತಪಾತ ಮತ್ತು ಹಿಂಸಾಚಾರದ ಚಕ್ರ ನಿಂತಿಲ್ಲ. ಈ 7,000 ಜನರಲ್ಲಿ 3,000 ಮುಗ್ಧ ಮಕ್ಕಳು ಎಂದು ಪ್ರಿಯಾಂಕಾ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ.

“ಗಾಝಾದಲ್ಲಿ 7000 ಜನರನ್ನು ಕೊಂದ ನಂತರವೂ ರಕ್ತಪಾತ ಮತ್ತು ಹಿಂಸಾಚಾರದ ಚಕ್ರ ನಿಲ್ಲಲಿಲ್ಲ. ಈ 7000 ಜನರಲ್ಲಿ 3000 ಮುಗ್ಧ ಮಕ್ಕಳು. ಇನ್ನೂ ಎಷ್ಟು ಜೀವಗಳನ್ನು ಕಳೆದುಕೊಂಡ ನಂತರ, ಮಾನವೀಯತೆಯ ಸಾಮೂಹಿಕ ಪ್ರಜ್ಞೆಯು ಅಂತಿಮವಾಗಿ ಜಾಗೃತವಾಗುತ್ತದೆ? ಅಥವಾ ಅಂತಹ ಪ್ರಜ್ಞೆಯು ಈಗ ಉಳಿದಿಲ್ಲವೇ?” ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಬಳಿಕ 1,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಹಮಾಸ್ ಗಾಝಾದಲ್ಲಿ 200 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಾಗಿ ಇರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News