2014ರ ಮೊದಲಿನ ಆರ್ಥಿಕ ದುರಾಡಳಿತ ಕುರಿತು ಶ್ವೇತಪತ್ರ : ವಿತ್ತಸಚಿವೆ

Update: 2024-02-01 17:37 GMT

ನಿರ್ಮಲಾ ಸೀತಾರಾಮನ್| Photo: PTI

ಹೊಸದಿಲ್ಲಿ : 2014ಕ್ಕೆ ಮೊದಲು ನಡೆದಿದ್ದ ಆರ್ಥಿಕ ದುರಾಡಳಿತ ಕುರಿತು ಕೇಂದ್ರವು ಶ್ವೇತಪತ್ರವನ್ನು ಮಂಡಿಸಲಿದೆ ಎಂದು ವಿತ್ತಸಚಿವೆ ಗುರುವಾರ ಸಂಸತ್ತಿನಲ್ಲಿ ತನ್ನ ಮಧ್ಯಂತರ ಬಜೆಟ್ ಭಾಷಣದಲ್ಲಿ ತಿಳಿಸಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಒಂದು ದಶಕದ ಆಡಳಿತದ ಬಳಿಕ 2014ರಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಕೇಂದ್ರದಲ್ಲಿ ಅಧಿಕಾರಕ್ಕೇರಿತ್ತು.

‘2014ರಲ್ಲಿ ನಮ್ಮ ಸರಕಾರವು ಅಧಿಕಾರವನ್ನು ವಹಿಸಿಕೊಂಡಾಗ ಆರ್ಥಿಕತೆಯನ್ನು ಹಂತ ಹಂತವಾಗಿ ತಿದ್ದುವ ಮತ್ತು ಆಡಳಿತ ವ್ಯವಸ್ಥೆಗಳನ್ನು ಕ್ರಮಬದ್ಧಗೊಳಿಸುವ ಅಗಾಧ ಹೊಣೆಯೂ ನಮ್ಮ ಹೆಗಲ ಮೇಲೇರಿತ್ತು. ಜನರಿಗೆ ಭರವಸೆಯನ್ನು ನೀಡುವುದು, ಹೂಡಿಕೆಗಳನ್ನು ಆಕರ್ಷಿಸುವುದು ಮತ್ತು ಬಹು ಅಪೇಕ್ಷಿತ ಸುಧಾರಣೆಗಳಿಗೆ ಬೆಂಬಲ ನಿರ್ಮಾಣ ಆಗಿನ ಅಗತ್ಯವಾಗಿತ್ತು. ಆ ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸುವಲ್ಲಿ ನಮ್ಮ ಸರಕಾರವು ಯಶಸ್ವಿಯಾಗಿತ್ತು ’ ಎಂದು ಸೀತಾರಾಮನ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News