ಆನ್‌ಲೈನ್‌ನಲ್ಲಿ ಖರೀದಿಸಿದ ಚಾಕೊಲೇಟ್‌ ಸಿರಪ್‌ ಬಾಟಲಿಯಲ್ಲಿ ಸತ್ತ ಇಲಿ ಪತ್ತೆ!

Update: 2024-06-19 11:50 GMT

ಹೊಸದಿಲ್ಲಿ: ಆನ್‌ಲೈನ್‌ ಮೂಲಕ ಆರ್ಡರ್‌ ಮಾಡಿದ ಐಸ್‌ಕ್ರೀಂನಲ್ಲಿ ಮಾನವ ಬೆರಳಿನ ತುಂಡು ಪತ್ತೆಯಾದ ಘಟನೆ ಬೆನ್ನಲ್ಲೇ ಇದೀಗ ಚಾಕೊಲೇಟ್‌ ಸಿರಪ್‌ನಲ್ಲಿ ಸತ್ತ ಇಲಿ ಪತ್ತೆಯಾಗಿದೆ.

ಆನ್‌ಲೈನ್‌ ಆ್ಯಪ್‌ Zeptoದಲ್ಲಿ ಆರ್ಡರ್‌ ಮಾಡಿದ್ದ Hershey’s ಚಾಕೊಲೇಟ್‌ ಸಿರಪ್‌ ಬಾಟಲಿಯಲ್ಲಿ ಸತ್ತ ಇಲಿಯೊಂದು ಪತ್ತೆಯಾಗಿದೆ ಎಂದು ಕುಟುಂಬವೊಂದು ಆರೋಪಿಸಿದೆ. 

ಸತ್ತ ಇಲಿ ಇದ್ದ  ಸಿರಪ್‌ ಕುಡಿದಿದ್ದ ಮೂವರು ಕುಟುಂಬ ಸದಸ್ಯರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪ್ರಮಿ ಶ್ರೀಧರ್ ಎಂಬವರು ಆರೋಪಿಸಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, "ಕೇಕ್‌ನೊಂದಿಗೆ ತಿನ್ನಲು Zeptoದಲ್ಲಿ Hershey’s ಚಾಕೊಲೇಟ್‌ ಸಿರಪ್‌ ಆರ್ಡರ್‌ ಮಾಡಿ ತರಿಸಿದ್ದೆವು. ಬಾಟಲ್‌ ತೆರೆದಾಗ ಆರಂಭದಲ್ಲಿ ದಪ್ಪನೆ ರೀತಿಯಲ್ಲಿ ಸಿರಪ್‌ ಕಂಡುಬಂದಿತ್ತು. ಅದರ ಜತೆಗೆ ಸಣ್ಣ ಸಣ್ಣ ಕೂದಲುಗಳು ಕೂಡ ಇದ್ದವು. ಅನುಮಾನದಿಂದ ಬಾಟಲಿಯಲ್ಲಿರುವ ಚಾಕೊಲೇಟ್‌ ಸಿರಪ್‌ ಅನ್ನು ಪೂರ್ತಿಯಾಗಿ ಪಾತ್ರೆಗೆ ಹಾಕಿ ನೋಡಿದಾಗ ಸತ್ತ ಇಲಿ ಮರಿ ಪತ್ತೆಯಾಗಿದೆ. ಈ ಬಗ್ಗೆ ದೂರು ನೀಡಿದರೂ ಕಂಪನಿ ಕಡೆಯಿಂದ ಯಾವುದೇ ಉತ್ತರವಿಲ್ಲ. ದಯವಿಟ್ಟು ಆರ್ಡರ್‌ ಮಾಡಿ ತಿನ್ನುವ ಆಹಾರದ ಬಗ್ಗೆ ಎಚ್ಚರಿಕೆಯಿರಲಿ" ಎಂದು ಬರೆದುಕೊಂಡಿದ್ದಾರೆ. 

ಪ್ರಮಿ ಶ್ರೀಧರ್ ಅವರ ಪೋಸ್ಟ್‌ಗೆ ಪ್ರತಿಕ್ರಯಿಸಿರುವ Hershey’s ಕಂಪನಿಯು, ‘ಈ ಬಗ್ಗೆ ಕ್ಷಮೆಯಾಚಿಸುತ್ತೇವೆ. ನೀವು ಖರೀದಿಸಿದ ಉತ್ಪನ್ನದ ಬ್ಯಾಚ್‌ ಸಂಖ್ಯೆಯನ್ನು ಕಳುಹಿಸಿ. ನಮ್ಮ ತಂಡದ ಸದಸ್ಯರು ನಿಮ್ಮನ್ನು ಸಂಪರ್ಕಿಸುತ್ತಾರೆ’ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News