ಇಂಡಿಯಾ ಮೈತ್ರಿಕೂಟವನ್ನು ಟೀಕಿಸುವ ಬಿಜೆಪಿ ಜಾಹಿರಾತಿಗೆ ಮಹಿಳಾ ಸಂಘಟನೆಗಳ ವಿರೋಧ

Update: 2024-04-02 09:15 GMT

Photo Credit: X/@BJP4India

ಹೊಸದಿಲ್ಲಿ: ವಿಪಕ್ಷಗಳ ಒಕ್ಕೂಟವನ್ನು ಟೀಕಿಸಲು ಬಿಜೆಪಿ ಬಿಡುಗಡೆ ಮಾಡಿರುವ ಅಣಕು ಜಾಹಿರಾತು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ಜಾಹಿರಾತಿಗೆ ಮಹಿಳಾ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಮಹಿಳೆಯರ ಬಗ್ಗೆ ಸಂಕುಚಿತವಾಗಿ ಚಿತ್ರೀಕರಿಸಲಾಗಿದೆ ಎಂದು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

ಜಾಹಿರಾತನ್ನು ಖಂಡಿಸಿರುವ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಮರಿಯಂ ದವಳೆ, ಭಾರತೀಯ ಮಹಿಳಾ ರಾಷ್ಟ್ರೀಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆನ್ನಿ ರಾಜಾ, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಮೀನಾ ತಿವಾರಿ ಮೊದಲಾದವರು ಜಾಹಿರಾತನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

ಪ್ರಧಾನಿ ಅವರು ಪ್ರತಿಪಾದಿಸಿದ ನಾರಿ ಶಕ್ತಿ ಎಂಬ ಮನುವಾದಿ ಪರಿಕಲ್ಪನೆಯ ಮೂಲಕ ಬಿಜೆಪಿ ತನ್ನ ನಿಜ ಬಣ್ಣವನ್ನು ತೋರಿಸಿದೆ. ಬಿಜೆಪಿ ಮಹಿಳಾ ವಿರೋಧಿ ಮುಖವನ್ನು ಬಯಲು ಮಾಡಿದೆ. ಬಿಜೆಪಿಯು ಕ್ಷಮೆಯಾಚಿಸಿ, ಜಾಹಿರಾತು ಹಿಂಪಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.

ವಿವಾದಾತ್ಮಕ ಜಾಹಿರಾತಿನಲ್ಲಿ ಮಹಿಳೆಯೊಬ್ಬಳನ್ನು ವಧುವಿನಂತೆ ರೀತಿ ಸಿಂಗರಿಸಲಾಗಿದೆ. ಆಕೆಯ ವರನ ಆಯ್ಕೆ ಬಗ್ಗೆ ಇಂಡಿಯಾ ಮೈತ್ರಿಕೂಟದ ನಾಯಕರು ಜಗಳವಾಗುವಾಡುವಂತೆ ಜಾಹಿರಾತಿನಲ್ಲಿ ತೋರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News