ಹಾವು
Update: 2016-02-09 17:57 GMT
ಆತ ಹೊಸ ಮನೆ ಕಟ್ಟಿಸಿದ್ದ.
ಒಂದು ದಿನ ನೋಡಿದರೆ ಮನೆಯ ಹಿತ್ತಲಲ್ಲಿ ನಾಗರಹಾವು.
‘‘ನನ್ನ ಮನೆಗೆ ಹಾವು ಬಂದಿದೆ’’ ಆತ ಚೀರಾಡ ತೊಡಗಿದೆ.
ಹಲವು ವರ್ಷಗಳಿಂದ ಆ ಹಾವು ಅಲ್ಲೇ ವಾಸವಾಗಿತ್ತು.
ವಾಸ್ತವದಲ್ಲಿ ಹಾವು ಅವನ ಮನೆಗೆ ಬಂದದ್ದಲ್ಲ,
ಅವನು ಹಾವಿನ ಮನೆಯನ್ನು ಆಕ್ರಮಿಸಿದ್ದು.