ಇಂಡಿಯನ್ ಸೋಶಿಯಲ್ ಫೋರಂ ಒಮಾನ್ ರಿಂದ ಜೈಲು ಪಾಲಾದ ಯುವಕನ ಬಿಡುಗಡೆ

Update: 2016-02-16 07:30 GMT

ಮಸ್ಕತ್(ಒಮಾನ್):ಅನಿವಾಸಿ ಭಾರತೀಯರು ನೆಲೆಸಿರುವ ಮಸ್ಕತ್'ನಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಎಂಬ ಸಂಘಟನೆಯು, ಕಂಪೆನಿಯ ಬೇಜವಾಬ್ದಾರಿಯಿಂದ ಜೈಲುಪಾಲಾದ ಉಳ್ಳಾಳದ ಮುಹಮ್ಮದ್ ಇಸಾಕ್ ಎಂಬುವವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಸಫಲವಾಯಿತು.

    ಉಳ್ಳಾಳದ ಮೊಹಮ್ಮದ್ ಇಸಾಕ್ ಎಂಬವರು ಕಾರಣಾಂತರದಿಂದ ಜೈಲುಪಾಲಾಗಿದ್ದರು. ಇದನ್ನರಿತ ಊರಿನಲ್ಲಿರುವ ಆತನ ಸಂಬಂಧಿಕರು ದಾರಿ ತೋಚದೆ ಕರ್ನಾಟಕದ ಆರೋಗ್ಯ ಸಚಿವರು ಲಭ್ಯರಾಗದ ಕಾರಣ ಅವರ ತಮ್ಮನನ್ನು ಭೇಟಿಯಾಗಿ ನಮ್ಮ ಹುಡುಗನನ್ನು ಹೇಗಾದರೂ ಮಾಡಿ ಊರಿಗೆ ಕಳುಹಿಸಬೇಕಾಗಿ ಅವಲತ್ತುಕೊಂಡಿದ್ದರು.  3 ತಿಂಗಳು ಜೈಲಿನಿಂದ ಹೊರಬರಲಾರದೆ ಮೊಹಮ್ಮದ್ ಇಸಾಕ್ ಕಂಗೆಟ್ಟಿದ್ದ, ಇತ್ತ ಏನು ಮಾಡಬೇಕೆಂದು ತೋಚದೆ ಮನೆಯವರ ಪರದಾಟ ಮುಂದುವರಿಯುತ್ತಿತ್ತು.

    ಅದರ ಮಧ್ಯೆ ಒಮಾನ್ ನಲ್ಲಿ ಅನಿವಾಸಿ ಭಾರತೀಯರ "ಇಂಡಿಯನ್ ಸೋಶಿಯಲ್ ಫೋರಂ"   ಆಡಳಿತ ಕಮಿಟಿಯ ಸದಸ್ಯರಾದ ನಝೀರ್ ಕೊಡಿಂಬಾಡಿ ತನ್ನ ಕಂಪೆನಿಯ ಕೆಲಸದ ನಿಮಿತ್ತ ಅದೇ ಜೈಲಿಗೆ ಜೈಲಿನ ಮೇಲಧಿಕಾರಿಯನ್ನು ಭೇಟಿ ಮಾಡಿ ಮಾತನಾಡಿದಾಗ ಹೀಗೊಬ್ಬರು ಮಂಗಳೂರಿನವರು ಇದೇ ಜೈಲಿನಲ್ಲಿ ಸುಮಾರು 3 ತಿಂಗಳಿಂದಲೂ ಇರುವ ಮಾಹಿತಿ ನೀಡಿದರು. ಕೂಡಲೇ ಕಾರ್ಯ ಪ್ರವೃತ್ತರಾದ ನಝೀರ್ ಕೊಡಿಂಬಾಡಿ ಸೋಶಿಯಲ್ ಫೋರಂ ನ ಎಲ್ಲಾ ಸದಸ್ಯರ ಗಮನಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದರು.

     ಜೈಲಿನ ಮೇಲಧಿಕಾರಿಯ ಸಹಾಯ ಪಡೆದು ಜೈಲಿನೊಳಗಿದ್ದ ಮುಹಮ್ಮದ್ ಇಸಾಕ್ ಉಳ್ಳಾಲ್ ರನ್ನು ಮಾತನಾಡಿಸಲು ಸಫಲವಾಗುತ್ತಲೇ ಉಳಿದ ಸದಸ್ಯರು ಇಸಾಕ್'ನ ಊರಿನ ಮಾಹಿತಿಯೆಲ್ಲವೂ ಪಡೆದಾಗ ಈ ಮೇಲೆ ತಿಳಿಸಿದ ಮಾಹಿತಿಯೆಲ್ಲವೂ ಅವರ ಮನೆಯಿಂದ ಸಿಕ್ಕಿತ್ತು.

  ತನ್ನ ಯಾವುದೇ ತಪ್ಪುಗಳಿಲ್ಲದಿದ್ದರೂ ಕಂಪೆನಿಯ ಬೇಜವಾಬ್ದಾರಿಯಿಂದ ಜೈಲುಪಾಲಾಗಿ ನೊಂದ ಇಸಾಕ್'ರಿಗೆ ಧೈರ್ಯ ತುಂಬಿ, ಇಸಾಕ್ ಕೆಲಸ ಮಾಡುವ ಕಂಪೆನಿಯ ವಿಳಾಸವನ್ನು ತೆಗೆದು ಕಾನೂನು ರೀತಿಯ ಹೋರಾಟಕ್ಕೆ ಹೆಜ್ಜೆಯಿಟ್ಟರು. ತಮ್ಮ ಕೆಲಸವೆಲ್ಲವನ್ನು ಬದಿಗಿಟ್ಟು ಅವನ ಕಂಪೆನಿಯ ವಿಳಾಸವನ್ನು ಹುಡುಕಿ ಕಛೇರಿಯಲ್ಲಿ ಸಂಬಂಧಪಟ್ಟವರ ಕಂಡು ಮಾತಾಡಿದಾಗ ತಮಗೇನೂ ಸಂಬಂಧವೇ ಇಲ್ಲದಂತೆ ನುಚಿಕೊಳ್ಳತೊಡಗಿದ ಕಂಪೆನಿಯ ಮೇಲಧಿಕಾರಿಗಳ ಎದುರು ಕಾನೂನು ರೀತಿಯಲ್ಲಿ ಸವಾಲಾಗಿಸಿ ಸಫಲವಾಗುವಲ್ಲಿ ಯಶಸ್ವಿಯಾಗಿದ್ದರು. ಇದಕ್ಕಾಗಿ ಹಗಲಿರುಳು ರಾಯಭಾರಿ ಕಛೇರಿಗಳಿಗೆ, ವಕೀಲರುಗಳೊಂದಿಗೆ, ಕಾನೂನು ತಜ್ಙರೊಂದಿಗೆ ಬೆಂಬಿಡದೆ ಮಾಡಿದ ಕಾನೂನು ರೀತಿಯ ಹೋರಾಟದಲ್ಲಿ ಕೆಲವು ದಿನಗಳ ಅಂತರದಲ್ಲಿ ಜಯ ಸಿಕ್ಕಿತ್ತು.

    ಅಲ್ಲದೆ ಆ ಕಂಪೆನಿಯಿಂದ ಸಿಗಬೇಕಾದ ಕಷ್ಟನಷ್ಟಗಳ ಹಣದ ಜೊತೆಗೆ ಮುಂದಿನ ದಿನಗಳಲ್ಲಿ ಒಮಾನ್ ಗೆ ಬರಲು ಅನುಕೂಲವಾಗುವ ಎಲ್ಲಾ ರೀತಿಯ ಕಾಗದಪತ್ರ ಸೌಲಭ್ಯಗಳು ಭಾರತೀಯ ರಾಯಭಾರಿ ಕಛೇರಿಯ ಮುಖಾಂತರ ಪಡೆದು ನಗುಮುಖದೊಂದಿಗೆ ಇಸಾಖ್ ಉಳ್ಳಾಲ್ ರವರನ್ನು ಫೆ.16ರಂದು  ಊರಿಗೆ ಕಳುಹಿಸುತ್ತಿದ್ದಾರೆ.

 ಇಂಡಿಯನ್ ಸೋಶಿಯಲ್ ಫೋರಂ ಒಮಾನ್ ಇದರ ಕಾನೂನು ಹೋರಾಟದ ಮೇಲುಸ್ತುವಾರಿಯಾದ ನಝೀರ್ ಕೊಡಿಂಬಾಡಿ ಮತ್ತು ಎಲ್ಲಾ ಸದಸ್ಯರಿಗೂ ಆಭಾರಿಯಾದ ಇಸಾಕ್ ಉಳ್ಳಾಲ್ ರ ಮುಂದಿನ ಜೀವನ ಸುಖಕರವಾಗಲೆಂದು ಹಾರೈಸುತ್ತಿದ್ದೇವೆ.

Writer - ಅಬ್ದುಲ್ ಮುಬಾರಕ್ ಕಾರಾಜೆ

contributor

Editor - ಅಬ್ದುಲ್ ಮುಬಾರಕ್ ಕಾರಾಜೆ

contributor

Similar News