ನಿಧಿ
Update: 2016-02-21 18:10 GMT
ಆ ದಟ್ಟ ಕಾಡಿನಲ್ಲಿ ಭಾರೀ ನಿಧಿ ಅಡಗಿದೆ ಎಂದು ಯಾರೋ ಹೇಳಿದರು.
ನಾಡು, ಸರಕಾರ ಒಂದಾಗಿ ಕಾಡನ್ನು ಧ್ವಂಸ ಮಾಡಿತು. ಪ್ರಾಣಿ ಪಕ್ಷಿಗಳು ಸರ್ವನಾಶವಾದವು.
ನಿಧಿಯನ್ನು ಹುಡುಕಿ ಸೋತರು.
ಕೊನೆಗೂ ಅವರಿಗೆ ಕಳೆದುಕೊಂಡ ಕಾಡು, ಎಂತಹ ನಿಧಿಯಾಗಿತ್ತು ಎನ್ನುವುದು ಅರಿವಾಯಿತು.