ಯುದ್ಧ
Update: 2016-03-04 17:50 GMT
‘‘ಗಡಿಯಲ್ಲಿ ಯುದ್ಧ ಘೋಷಣೆಯಾಗಲಿ, ಯುದ್ಧ ಘೋಷಣೆಯಾಗಲಿ’’ ಅವನು ನಡು ಬೀದಿಯಲ್ಲಿ ಚೀರುತ್ತಿದ್ದ.
ಅವನ ಮಗ ಅಮೆರಿಕದ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೈ ತುಂಬಾ ಗಳಿಸುತ್ತಿದ್ದ.
‘‘ಯುದ್ಧ ನಡೆಯದಿರಲಿ. ಶಾಂತಿ, ಶಾಂತಿ ಶಾಂತಿ...’’ ಇವನು ದೇವರ ಮುಂದೆ ಕೈಯೊಡ್ಡಿ ಬೇಡುತ್ತಿದ್ದ.
ಇವನ ಮಗ ಗಡಿಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದ.