ಕೂಗು
Update: 2016-03-20 18:34 GMT
‘‘ಸಾರ್...ಹಸಿವಾಗ್ತಾ ಇದೆ...ಊಟ ಕೊಡಿ ಸಾರ್...’’
‘‘ಘೋಷಣೆ ಕೂಗಬೇಕು...ಕೂಗ್ತಿಯಾ?’’
‘‘ಕೂಗ್ತೀನಿ ಸಾರ್...’’
‘‘ಪಾಕಿಸ್ತಾನ ಜಿಂದಾಬಾದ್ ಎನ್ನಬೇಕು...’’
‘‘ಊಟ ಕೊಡೋದಾದ್ರೆ ಕೂಗ್ತೀನಿ ಸಾರ್...’’
ಮರುದಿನ ಊರಲ್ಲಿ ಗಲಾಟೆಯೋ ಗಲಾಟೆ.
ಅದಾವುದೋ ಸಮಾವೇಶದಲ್ಲಿ ಅದ್ಯಾವನೋ
ಉಗ್ರನೊಬ್ಬ ಪಾಕಿಸ್ತಾನ ಜಿಂದಾಬಾದ್ ಕೂಗಿದನಂತೆ.
ಪೊಲೀಸರು ಅವನನ್ನು ಬಂಧಿಸಿ ಅವನಿಗೂ ಇತರ ಉಗ್ರ
ಸಂಘಟನೆಗಳಿಗೂ ಇರುವ ಸಂಬಂಧದ ವಿಚಾರಣೆ ನಡೆಸುತ್ತಿದ್ದಾರಂತೆ.
-ಮಗು