ಪ .ಬಂ.ದಲ್ಲಿ ದೀದಿ, ಕೇರಳದಲ್ಲಿ ಎಡರಂಗ, ಅಸ್ಸಾಮ್ ನಲ್ಲಿ ಬಿಜೆಪಿ,ತ.ನಾ.ದಲ್ಲಿ ಅಮ್ಮಾ ಸರ್ಕಾರ ಖಚಿತ

Update: 2016-05-19 04:12 GMT

ರಾಜ್ಯವಾರು ಟ್ರೆಂಡ್ - 9 : 40


ಹೊಸದಿಲ್ಲಿ , ಮೇ 19:  ಸಮೀಕ್ಷೆಗಳಿಗೆ  ತದ್ವಿರುದ್ಧವಾಗಿ ತಮಿಳುನಾಡಿನಲ್ಲಿ ಜಯಲಲಿತಾ ಮತ್ತೆ  ಸರ್ಕಾರ ರಚಿಸುವುದು ಸ್ಪಷ್ಟವಾಗಿ ಕಾಣುತ್ತಿದೆ . ಮೊದಲು ಡಿಎಂಕೆ ಮುನ್ನಡೆ ಸಾಧಿಸಿದ್ದರೂ ಈಗ ಅಮ್ಮಾ 114 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮತ್ತೆ ಅಧಿಕಾರ ಹಿಡಿಯುವುದು ಖಚಿತವಾಗಿದೆ.  ಡಿಎಂಕೆ ಇದ್ದಕ್ಕಿದ್ದಂತೆ ಹಿನ್ನಡೆ ಕಂಡಿದ್ದು ,ಈಗ  80 ಸ್ಥಾನಗಳಲ್ಲಿ ಮಾತ್ರ  ಮುಂದಿದೆ . ವಿಜಯಕಾಂತ್ ಅವರ ಪಕ್ಷ ಈಗ ಯಾವುದೇ ಸ್ಥಾನದಲ್ಲಿ ಮುನ್ನದೆಯಲ್ಲಿಲ್ಲ
ಕೇರಳದಲ್ಲಿ ಎಡರಂಗ ಸ್ಪಷ್ಟ ಮುನ್ನಡೆ ಸಾಧಿಸಿದ್ದು ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಭಾರೀ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೆ ಏರುವುದು ಬಹುತೇಖ ಖಚಿತವಾಗಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ 50 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಎಡರಂಗ 87  ಸ್ಥಾನಗಳಲ್ಲಿ ಮುನ್ನಡೆ  ಸಾಧಿಸುವ ಮೂಲಕ ಮ್ಯಾಜಿಕ್ ನಂಬರ್ 71 ತಲುಪುವ ಮುನ್ಸೂಚನೆ ನೀಡಿದೆ.   ಬಿಜೆಪಿ ಮೈತ್ರಿಕೂಟ 2ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.  
ಪಶ್ಚಿಮ ಬಂಗಾಳದಲ್ಲಿ ನಿರೀಕ್ಷೆಯಂತೆ ಅಧಿಕಾರರೂಢ ತೃಣಮೂಲ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುವ ಸಾಧ್ಯತೆ ಇದೆ . ಮಮತಾ ನೇತೃತ್ವದ  ಪಕ್ಷ ಈಗಾಗಲೇ 179 ಸ್ಥಾನಗಳಲ್ಲಿ ಮುಂದಿದ್ದರೆ , ಎಡರಂಗ ಹಾಗು ಕಾಂಗ್ರೆಸ್ ಮೈತ್ರಿ ಕೇವಲ 69 ಸ್ಥಾನಗಳಲ್ಲಿ ಮುಂದಿದ್ದಾರೆ. ಬಿಜೆಪಿ ಕೇವಲ 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ
ಅಸ್ಸಾಮ್ ನಲ್ಲಿ ಬಿಜೆಪಿ ಮೈತ್ರಿಕೂಟ ಅಧಿಕಾರದ ಗದ್ದುಗೆ ಏರುವತ್ತ ಸಾಗುತ್ತಿದೆ. 59 ಸ್ಥಾನಗಳಲ್ಲಿ ಬಿಜೆಪಿ + ಮುಂದಿದ್ದರೆ ಕಾಂಗ್ರೆಸ್  21ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎಐಯುಡಿಎಫ಼್ ಕೇವಲ 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 
ಪುದುಚೇರಿಯಲ್ಲಿ  ಆಡಳಿತ ಪಕ್ಷ ಎಐಎನ್ ಆರ್ ಸಿ ಪಕ್ಷ ಹಿನ್ನಡೆ ಅನುಭವಿಸಿದ್ದು ಕೇವಲ 7 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಮೈತ್ರಿಕೂಟ 13  ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News