2016ರ ಚುನಾವಣೆ ಕಲಿಸಿದ 6 ಪಾಠಗಳು

Update: 2016-05-19 17:44 GMT

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಲಿತಾಂಶ, ಒಂದು ರಾಜ್ಯವನ್ನು ಹೊರತುಪಡಿಸಿ ಮತ್ತೊಮ್ಮೆ ರಾಜಕೀಯ ಪಂಡಿತರು ಹಾಗೂ ಮತಗಟ್ಟೆ ಸಮೀಕ್ಷೆಗಳನ್ನು ಗೊಂದಲಕ್ಕೀಡುಮಾಡಿವೆ. ಉದಾಹರಣೆಗೆ ತಮಿಳುನಾಡಿನಲ್ಲಿ ಎಐಎಡಿಎಂಕೆಗೆ ಯಾರೂ ಅವಕಾಶ ನಿರೀಕ್ಷಿಸಿರಲಿಲ್ಲ. ಮಮತಾ ಬ್ಯಾನರ್ಜಿ ಮತ್ತೆ ತಮ್ಮ ವಿರೋಗಳನ್ನು ಧೂಳೀಪಟ ಮಾಡಿದ್ದಾರೆ. ಅಸ್ಸಾಂ ಮೊತ್ತಮೊದಲ ಬಾರಿ ಬಿಜೆಪಿಗೆ ಮಣೆ ಹಾಕಿದೆ. ಆದರೆ ಕಾಂಗ್ರೆಸ್ ಪಕ್ಷ ಸಂಕುಚಿತಗೊಳ್ಳುವುದು ಮಾತ್ರ ಮುಂದುವರಿದಿದೆ. ಲಿತಾಂಶದ ಸೂಕ್ಷ್ಮ ಅಂಶಗಳನ್ನು ಅಂದರೆ ಮತಹಂಚಿಕೆ, ಶೇಕಡಾವಾರು ಮತ, ಮತದ ಸ್ವಿಂಗ್‌ಗಳ ಕ್ಷೇತ್ರವಾರು ವಿಶ್ಲೇಷಣೆ ನಡೆಯುತ್ತದೆ, ಆದರೆ ಅದುವರೆಗೆ, ಆರು ಪ್ರಮುಖ ಪಾಠಗಳನ್ನು ಈ ಚುನಾವಣಾ ಲಿತಾಂಶ ಕಲಿಸಿದೆ.

1:ಮಮತಾ ಬ್ಯಾನರ್ಜಿ ದೇಶದ ಅತ್ಯಂತ ಪ್ರಬಲ ಪ್ರಾದೇಶಿಕ ರಾಜಕಾರಣಿಯಾಗಿ ರೂಪುಗೊಂಡಿದ್ದಾರೆ. ಅವರಿಗೆ ಜಯಲಲಿತಾ, ಮುಲಾಯಂ ಸಿಂಗ್ ಯಾದವ್ ಹಾಗೂ ನಿತೀಶ್ ಕುಮಾರ್ ಸ್ಪರ್ಧೆಯಲ್ಲಿದ್ದರು. ದೀದಿಯ ಈ ಸ್ಪಷ್ಟ ಮುನ್ನಡೆಗೆ ಕಾರಣವೆಂದರೆ, ಅವರ ವಿಜಯದ ಅಂತರ. ಯಾರ ಹಂಗೂ ಇಲ್ಲದೇ ಸ್ವಂತ ಬಲದಲ್ಲೇ ಅವರು ಸರಕಾರ ರಚಿಸಬಲ್ಲರು. ಆಕೆ ಕಾಂಗ್ರೆಸ್‌ನಿಂದ ವಿಮುಖವಾಗಿರುವುದು ಈಗಾಗಲೇ ಸ್ಪಷ್ಟವಾಗಿದ್ದರೂ, ಬಿಜೆಪಿ ಆಕೆಯ ಬೆಂಬಲವನ್ನು ಮನಸೋ ಇಚ್ಛೆ ಪಡೆಯುವಂತಿಲ್ಲ. ಬಹುತೇಕ ಪ್ರಕರಣಗಳಲ್ಲಿ ಆಕೆ ಬಿಜೆಪಿ ಕಡೆಗೆ ವಾಲಿದ್ದಾರೆ. ಕೇಂದ್ರದಲ್ಲಿ ಅಕಾರದ ಚುಕ್ಕಾಣಿ ಹಿಡಿದಿರುವ ಪಕ್ಷವನ್ನು ಖುಷಿಪಡಿಸುವ ಮೂಲಕ, ತಾವು ನೀಡಿದ್ದಕ್ಕಿಂತ ಹೆಚ್ಚಿನ ಪ್ರತಿಲ ಪಡೆದಿದ್ದಾರೆ. ಇವೆಲ್ಲದರ ಜತೆಗೆ ರಾಜ್ಯದಲ್ಲಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಬೆಳೆಯದಂತೆ ತಡೆಯುವಲ್ಲೂ ಅವರು ಯಶಸ್ವಿಯಾಗಿದ್ದಾರೆ. ನಿತೀಶ್ ಕುಮಾರ್ ಅವರಿಗಿಂತ ಭಿನ್ನವಾಗಿ, ಇದುವರೆಗೂ ಮಮತಾ ಬ್ಯಾನರ್ಜಿ ರಾಷ್ಟ್ರರಾಜಕಾರಣದ ಅಪೇಕ್ಷೆಯನ್ನು ಬಹಿರಂಗಪಡಿಸಿಲ್ಲ. ಇದು ಅವರಿಗೆ ಹೆಚ್ಚಿನ ಸ್ಥಿತಿಸ್ಥಾಪಕ ಗುಣವನ್ನು ತಂದುಕೊಟ್ಟಿರುವುದು ಮಾತ್ರವಲ್ಲದೇ ಬಿಜೆಪಿ ಜತೆ ಸಂಯಮದಿಂದ ಇರುವುದನ್ನು ಸಾಧ್ಯವಾಗಿಸಿದೆ.


 2:ಪ್ರಾದೇಶಿಕ ಪಕ್ಷಗಳು ಪ್ರಬಲವಾಗುತ್ತಿವೆ. ಬಿಜೆಪಿ ಅಥವಾ ಕಾಂಗ್ರೆಸ್ ಕೇಂದ್ರದಲ್ಲಿ ಸರಕಾರ ನಡೆಸಿದ್ದರೂ, ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ವಿಶ್ವಾಸ ಹಾಗೂ ಬೆಂಬಲ ಪಡೆದಿವೆ. ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಬಿಹಾರಗಳಂತಹ ಪ್ರಮುಖ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಬೆಂಬಲವನ್ನು ಎದುರು ನೋಡುತ್ತಿವೆ. ಇಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಯಾವುದೇ ಗಮನಾರ್ಹ ಬೆಂಬಲ ಇಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಹೋಲಿಸಿದರೆ ಪ್ರಾದೇಶಿಕ ಪಕ್ಷಗಳ ಮತಹಂಚಿಕೆಯೇ ಅಕ ಎನ್ನುವುದು ಈ ಅಂಶವನ್ನು ಸ್ಪಷ್ಟಪಡಿಸುತ್ತವೆ.

 3:ಸಂಪೂರ್ಣ ಬಹುಮತದತ್ತ ಒಲವು: ಇತ್ತೀಚಿಗೆ ನಡೆದ ಎಲ್ಲ ಚುನಾವಣೆಗಳಲ್ಲಿ ಮತದಾರ ಯಾವುದೋ ಒಂದು ನಿರ್ದಿಷ್ಟ ಪಕ್ಷಕ್ಕೆ ಪೂರ್ಣ ಬಹುಮತ ನೀಡುತ್ತಿರುವುದು ಗಮನಾರ್ಹ ಅಂಶ. 2014ರಲ್ಲಿ ಬಿಜೆಪಿಯ ಭರ್ಜರಿ ವಿಜಯದ ಬಳಿಕ ನಡೆದ ಎಲ್ಲ ಚುನಾವಣೆಗಳಲ್ಲಿ (ಎರಡನ್ನು ಹೊರತುಪಡಿಸಿ) ನಿರ್ಣಾಯಕ ಲಿತಾಂಶ ಬಂದಿದೆ. ದಿಲ್ಲಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿದ್ದರೆ, ಬಿಹಾರ ಮತದಾರರು ಮಹಾಘಟಬಂಧನದ ಬೆಂಬಲಕ್ಕೆ ನಿಂತರು. ಈ ಬಾರಿ ಎಲ್ಲ ಐದೂ ರಾಜ್ಯಗಳಲ್ಲಿ ಜನರ ತೀರ್ಪು ಸ್ಪಷ್ಟವಾಗಿದೆ. ಚುನಾವಣೋತ್ತರ ಕುದುರೆ ವ್ಯಾಪಾರ ಅಥವಾ ದುರ್ಬಲ ಮೈತ್ರಿಕೂಟಕ್ಕೆ ಯಾವ ಅವಕಾಶವೂ ಇಲ್ಲ. ಮತದಾರರ ಸಂದೇಶ ಸ್ಪಷ್ಟವಾಗಿದ್ದು, ನಾವು ನಿಮಗೆ ಬಹುಮತ ಕೊಡುತ್ತೇವೆ. ನೀವು ನಮಗೆ ಒಳ್ಳೆಯ ಆಡಳಿತ ನೀಡಬೇಕು ಎನ್ನುವುದು ಈ ಸ್ಪಷ್ಟ ಸಂದೇಶ. ನೀವು ಅದನ್ನು ನೀಡದಿದ್ದರೆ, ಪರ್ಯಾಯ ಪಕ್ಷವನ್ನು ನೋಡುತ್ತೇವೆ ಎಂಬ ಸಂದೇಶ ರವಾನಿಸಿದ್ದಾರೆ.
 4:ಮೈತ್ರಿ ಸೋಗನ್ನು ಮತದಾರ ನೋಡಬಲ್ಲ. ಕಾಂಗ್ರೆಸ್ ಹಾಗೂ ಎಡಪಕ್ಷಗಳು ಪಶ್ಚಿಮ ಬಂಗಾಳದಲ್ಲಿ ಮೈತ್ರಿ ಪಕ್ಷಗಳು ಹಾಗೂ ಕೇರಳದಲ್ಲಿ ಪರಸ್ಪರ ವಿರುದ್ಧ ಪಕ್ಷಗಳು. ಎಡಪಕ್ಷಗಳು ದಶಕಗಳ ಕಾಲದಿಂದ ಕಾಂಗ್ರೆಸ್ ವಿರೋ ನಿಲುವನ್ನು ಹೊಂದಿವೆ. ಆದರೂ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಬಗ್ಗೆ ವಿಶೇಷ ಒಲವು ತೋರಿರುವುದಕ್ಕೆ ಜನಮನ್ನಣೆ ಸಿಕ್ಕಿಲ್ಲ. ಕೆಲವೊಂದು ಹೊಂದಾಣಿಕೆಗಳನ್ನು ಮಾಡಿಕೊಳ್ಳಬಹುದು. ಆದರೆ ದೀರ್ಘಾವಯಿಂದಲೂ ಎದುರಾಳಿಗಳಾಗಿದ್ದ ಪಕ್ಷಗಳು ಸಂಪೂರ್ಣ ಮೈತ್ರಿ ಮಾಡಿಕೊಂಡರೆ ಜನ ಅದನ್ನು ಸಹಿಸುವುದಿಲ್ಲ.

 5:ಬಿಜೆಪಿಗೆ ದೇಶವ್ಯಾಪಿ ಅಸ್ತಿತ್ವ ಬಂದಿದೆ. 2005ರಲ್ಲಿ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ, ಜಾತ್ಯತೀತ ಜನತಾದಳ ಜತೆ ಸೇರಿ ಸರಕಾರ ನಡೆಸಿದಾಗ ದಕ್ಷಿಣ ಭಾರತದಲ್ಲಿ ಮೊತ್ತಮೊದಲ ಬಾರಿಗೆ ಅಕಾರದ ಗದ್ದುಗೆ ಹಿಡಿದಿತ್ತು. ಇದೀಗ ಈಶಾನ್ಯ ಭಾರತದಲ್ಲಿ ಮೊತ್ತಮೊದಲ ಬಾರಿಗೆ ಈ ಸಾಧನೆ ಮಾಡಿದೆ. ಅದು ಕೇರಳದಲ್ಲೂ ಖಾತೆ ತೆರೆದಿದ್ದು, ಪಶ್ಚಿಮ ಬಂಗಾಳದಲ್ಲೂ ಗೆಲ್ಲಬಲ್ಲೆವು ಎನ್ನುವುದನ್ನು ತೋರಿಸಿಕೊಟ್ಟಿದೆ. ಇವೆಲ್ಲವೂ 2019ರ ಚುನಾವಣೆಯಲ್ಲಿ ಪ್ರಯೋಜನಕಾರಿಯಾಗಬಹುದು. ಇತರ ಜತೆಗೆ ಪಕ್ಷದ ಸಂಘಟನೆ ಬಲಗೊಳಿಸಲು ಕೂಡಾ ಇದು ಉತ್ತೇಜನವಾಗಬಹುದು. ದಿಲ್ಲಿ ಹಾಗೂ ಬಿಹಾರ ಸೋಲಿನ ಬಳಿಕ ಹತಾಶರಾಗಿದ್ದ ಬಿಜೆಪಿ ಕಾರ್ಯಕರ್ತರಿಗೆ ಈ ಲಿತಾಂಶ ಹೊಸ ಹುರುಪು ತುಂಬಬಹುದು. ಮುಂದಿನ ಕೆಲವು ತಿಂಗಳುಗಳಲ್ಲಿ ಪಂಜಾಬ್ ಹಾಗೂ ಉತ್ತರ ಪ್ರದೇಶ ಹೀಗೆ ಎರಡು ರಾಜ್ಯಗಳಲ್ಲಿ ಪ್ರಮುಖ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಇದು ಬಿಜೆಪಿಗೆ ಒಳ್ಳೆಯ ಸುದ್ದಿ. ಬಾಕಿ ಇರುವ ಆರ್ಥಿಕ ಹಾಗೂ ಇತರ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಇದು ಕೇಂದ್ರಕ್ಕೆ ಸುಸಂದರ್ಭ.

 6:ಅಸ್ತಿತ್ವಕ್ಕೆ ಹೋರಾಡಬೇಕಾದ ಸ್ಥಿತಿ ಕಾಂಗ್ರೆಸ್‌ಗೆ: ಆದರೆ ಆ ಪಕ್ಷ ಅಲ್ಲೊಂದು ಇಲ್ಲೊಂದು ಗೆಲುವು ಸಾಸಿದ್ದನ್ನೇ ಬಿಂಬಿಸಿಕೊಳ್ಳಬಹುದು. ಕಾಂಗ್ರೆಸ್‌ನ ಒಟ್ಟಾರೆ ಸಂಖ್ಯೆ ಬಿಜೆಪಿಗಿಂತ ಉತ್ತಮವಾಗಿರುವ ಬಗ್ಗೆ ಬೆನ್ನು ತಟ್ಟಿಕೊಳ್ಳಬಹುದು. ಇಂದಿಗೂ ಪ್ರತಿ ರಾಜ್ಯದಲ್ಲಿ ಅಸ್ತಿತ್ವ ಉಳಿಸಿಕೊಂಡಿದೆ ಎಂದು ಹೇಳಿಕೊಳ್ಳಬಹುದು. ಆದರೆ ಇದೀಗ ಯಾವ ರಾಜ್ಯದಲ್ಲೂ ಅದು ಮೊದಲ ಸ್ಥಾನದಲ್ಲಿಲ್ಲ ಎನ್ನುವುದು ಗಮನಾರ್ಹ ಅಂಶ. ಹಲವು ರಾಜ್ಯಗಳಲ್ಲಿ ಎರಡನೆ ಸ್ಥಾನದಲ್ಲಾದರೂ ಇದ್ದೇವೆ ಎಂಬ ಸಂತೋಷ ಕೂಡಾ ಈಗ ಕಾಂಗ್ರೆಸ್ ಪಕ್ಷಕ್ಕೆ ಉಳಿದಿಲ್ಲ. ಇಂದಿಗೂ ಸಣ್ಣಪ್ರಮಾಣದ ಬೆಂಬಲದ ನೆಲೆಯನ್ನು ಉಳಿಸಿಕೊಂಡಿದೆ. ಆದರೆ ಅದು ಈಗ ನಶಿಸುತ್ತಿರುವುದು ವಾಸ್ತವ. ಹೆಚ್ಚು ಹೆಚ್ಚು ಮತದಾರರು ಪರ್ಯಾಯ ಪಕ್ಷಗಳತ್ತ ಒಲವು ತೋರುತ್ತಿದ್ದು, ಕಾಂಗ್ರೆಸ್ ಬಲ ಕ್ಷೀಣಿಸುತ್ತಿದೆ. ಏಕೆಂದರೆ ಕಾಂಗ್ರೆಸ್ ಬಳಿ ಈಗ ಯಾವ ಭರವಸೆಯೂ ಉಳಿದಿಲ್ಲ. ಇದಕ್ಕೆ ಗಾಂ ಕುಟುಂಬವನ್ನು ಬೆಟ್ಟು ಮಾಡಬಹುದು. ಆದರೆ ಸಮಸ್ಯೆ ಇರುವುದು ರಾಚನಿಕ ಹಾಗೂ ಆಘಾತಕಾರಿಯಾಗಿ ಸೈದ್ಧಾಂತಿಕವಾದದ್ದು. ಪಕ್ಷದ ಪ್ರಮುಖ ವೌಲ್ಯಗಳು ಏನು ಎನ್ನುವ ಬಗ್ಗೆ ಯಾರಲ್ಲೂ ಖಚಿತತೆ ಇಲ್ಲ. ಪಕ್ಷ ಮೂಲಭೂತವಾಗಿ ಯಾವ ಆಧಾರದಲ್ಲಿ ನಿಂತಿದೆ ಎಂಬ ಬಗ್ಗೆ ಪಕ್ಷದಲ್ಲೇ ಗೊಂದಲ ಇದೆ. ಈ ಹಂತದಲ್ಲಿ ಕೂಡಾ ಚುನಾವಣಾ ಪೂರ್ವ ಭಿನ್ನಮತ ಹಾಗೂ ಕಳಪೆ ನಿರ್ವಹಣೆ ಪಂಜಾಬ್ ಹಾಗೂ ಉತ್ತರ ಪ್ರದೇಶದಲ್ಲಿ ಮತ್ತು ಅಂತಿಮವಾಗಿ ಕರ್ನಾಟಕದಲ್ಲೂ ಮುಂದುವರಿಯಬಹುದು.

Writer - ಸಿದ್ಧಾರ್ಥ ಭಾಟಿಯಾ

contributor

Editor - ಸಿದ್ಧಾರ್ಥ ಭಾಟಿಯಾ

contributor

Similar News