ಪುದುಚೇರಿ ಸ್ಪೀಕರ್ ಆಗಿ ಮಾಜಿ ಸಿಎಂ ವೈದ್ಯಲಿಂಗಂ

Update: 2016-06-11 18:15 GMT

ಪುದುಚೇರಿ, ಜೂ.11: ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ವಿ.ವೈದ್ಯಲಿಂಗಂ ಅವರನ್ನು ಪುದುಚೇರಿಯ 14ನೆ ವಿಧಾನಸಭೆಯ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಸ್ಪೀಕರ್ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಹಂಗಾಮಿ ಸ್ಪೀಕರ್ ಶಿವಕೊಲುಂಧು ಅವರು, ವೈದ್ಯಲಿಂಗಂ ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಪ್ರಕಟಿಸಿದರು. ನಿನ್ನೆ ಮಧ್ಯಾಹ್ನ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಏಕೈಕ ನಾಮಪತ್ರ ಸಲ್ಲಿಕೆಯಾಗಿರುವುದರಿಂದ ಅವರ ಅವಿರೋಧ ಆಯ್ಕೆಯನ್ನು ಶಿವಕೊಲುಂಧು ಪ್ರಕಟಿಸಿದರು.
66 ವರ್ಷದ ವೈದ್ಯಲಿಂಗಂ ಅವರನ್ನು ಸ್ಪೀಕರ್ ಕುರ್ಚಿಯತ್ತ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ, ಅವರ ಸಂಪುಟ ಸಹೋದ್ಯೋಗಿಗಳು, ಡಿಎಂಕೆ ಶಾಸಕ ಆರ್.ಶಿವ ಹಾಗೂ ಸದನದಲ್ಲಿ ವಿರೋಧ ಪಕ್ಷದ ನಾಯಕರಾದ ಎಐಎಡಿಎಂಕೆ ಮುಖಂಡ ಅಂಬಳಗನ್ ಅವರು ಕರೆತಂದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News