ವೃದ್ಧೆ ತಾಯಿಯನ್ನು ದೇವಸ್ಥಾನದಲ್ಲಿ ಬಿಟ್ಟುಹೋದ ಮಕ್ಕಳು !

Update: 2016-07-05 09:43 GMT

ಗುರುವಾಯೂರು, ಜುಲೈ 5: ತಂದೆ ತಾಯಿಗಳನ್ನುತೊರೆಯುವ ಮಕ್ಕಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಕಾನೂನು ಇದ್ದರೂ ಯಾವುದೇ ಪ್ರಯೋಜನವಿಲ್ಲ. ತಂದೆತಾಯಿಗಳೊಡನೆ ಕರುಣೆ ಪ್ರೀತಿ ಕಳಕೊಂಡವರಂತೆ ಜನರು ವರ್ತಿಸತೊಡಗಿದ್ದಾರೆ. ಗುರುವಾಯೂರಿನಲ್ಲಿ ಕರುಣೆಯಿಲ್ಲದ ಘಟನೆ ವರದಿಯಾಗಿದ್ದು ರೋಗಿಯಾದ ತಾಯಿಯನ್ನು ದೇವಸ್ಥಾನದಲ್ಲಿ ಬಿಟ್ಟುಹೋದ ಮಕ್ಕಳು ರೋಗ ಗುಣಮುಖವಾಗಿಯೂ ಕರೆದುಕೊಂಡು ಹೋಗಲು ಸಿದ್ಧರಾಗಿಲ್ಲ. ನಿರಾಶ್ರಿತೆಯಾದ ವೃದ್ಧೆಗೆ ಅನಾಥಾಲಯವೇ ಗತಿಯಾಗಿದೆ.

ಪಕ್ಷವಾತ ಪೀಡಿತರಾಗಿದ್ದ ಎಪ್ಪತ್ತು ವರ್ಷದ ಕುಮಾರಿ ಎಂಬ ಮಹಿಳೆಯನ್ನು ಗುರುವಾಯೂರು ದೇವಸ್ಥಾನದ ಪರಿಸರದಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು. ರೋಗ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿರುವ ಕುಮಾರಿಗೆ ಮನೆಉಪಚಾರ ಮಾತ್ರ ಅಗತ್ಯವಿದೆ. ಆದರೆ ತಿಂಗಳ ಹಿಂದೆ ದೇವಸ್ಥಾನದ ಬಳಿ ಬಿಟ್ಟು ಹೋಗಿದ್ದ ಮಕ್ಕಳಲ್ಲಿ ಯಾರೂ ಅಮ್ಮನನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಲು ಸಿದ್ಧರಿಲ್ಲ. ಕುಮಾರಿಗೆ ಮದುವೆಯಾದ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡು ಮಗ ಇದ್ದಾನೆ. ಅಮ್ಮನನ್ನು ಕರೆದುಕೊಂಡು ಹೋಗಲು ಫೋನ್ ಮಾಡಿದರೂ ಕರೆದುಕೊಂಡು ಹೋಗಲು ಯಾರೂ ಬಂದಿಲ್ಲ.

ಕೊನೆಗೆ ಕಾರುಣ್ಯ ಕಾರ್ಯಕರ್ತರಾದ ಜೋಯಿ ಅನಾಥಾಲಯಕ್ಕೆ ಕರೆದುಕೊಂಡು ಹೋಗಲು ಅಗತ್ಯವಿರುವ ದಾಖಲೆಗಳನ್ನೆಲ್ಲ ಸರಿಪಡಿಸಿದ್ದು ವಕುಂಚೇರಿಯ ಅನಾಥಾಲಯಕ್ಕೆ ಕುಮಾರಿಯನ್ನು ದಾಖಲಿಸಿದ್ದಾರೆ. ಗುರುವಾಯೂರು ದೇವಸ್ಥಾನದ ಅಧಿಕಾರಿಗಳು ದೇವಸ್ಥಾನದ ಪರಿಸರದಲ್ಲಿ ಬಿಟ್ಟು ಹೋಗಿದ್ದ ವೃದ್ಧೆಯನ್ನು ಆಸ್ಪತ್ರೆ ಸೇರಿಸಿದ್ದರು. ದೇವಸ್ಥಾನದ ಪರಿಸರದಲ್ಲಿ ಭಿಕ್ಷಾಟನೆ ಮಾಡಿ ಬದುಕಿದ್ದಾಗ ವೃದ್ಧೆ ಪಕ್ಷವಾತಕ್ಕೆ ತುತ್ತಾಗಿದ್ದರು. ಜೂನ್ 20ಕ್ಕೆ ಮೆಡಿಕಲ್ ಕಾಲೇಜ್‌ನ ಅನಾಥರೋಗಿಗಳ ಕುರಿತು ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾದ ನಂತರ ಮೆಡಿಕಲ್ ಕಾಲೇಜ್‌ನ ಅಧಿಕಾರಿಗಳು ವೃದ್ಧೆಯ ಮಕ್ಕಳನ್ನು ಪತ್ತೆಹಚ್ಚಿದ್ದರು. ಮಕ್ಕಳು ಅಮ್ಮನನ್ನು ಕರೆದುಕೊಂಡು ಹೋಗಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News