ಬೇಳೆ ಕಾಳು ಬೆಲೆ ನಿಯಂತ್ರಣ ರಾಜ್ಯ ಸರಕಾರಗಳ ಜವಾಬ್ದಾರಿ

Update: 2016-07-25 03:20 GMT

ಹೊಸದಿಲ್ಲಿ, ಜು.25: ಬೇಳೆ ಕಾಳುಗಳ ಬೆಲೆ ಗಗನಕ್ಕೇರುತ್ತಿರುವುದನ್ನು ಅರಗಿಸಿಕೊಳ್ಳಲಾಗದ ಕೇಂದ್ರ ಸರಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡು, ಬೇಳೆ ಕಾಳು ಬೆಲೆ ನಿಯಂತ್ರಣ ರಾಜ್ಯ ಸರಕಾರಗಳ ಜವಾಬ್ದಾರಿ ಎಂದು ಹೊಸ ರಾಗ ತೆಗೆದಿದೆ.

ಬೇಳೆ ಕಾಳುಗಳು ಹಾಗೂ ಅಗತ್ಯ ಆಹಾರ ಧಾನ್ಯಗಳ ಬೆಲೆ ನೀತಿಯನ್ನು ಮರು ಪರಿಶೀಲಿಸುವಂತೆ ರಾಜ್ಯಗಳನ್ನು ಆಗ್ರಹಿಸಿದೆ. ಎಣ್ಣೆ ಕಾಳು ಹಾಗೂ ಅಗತ್ಯ ಆಹಾರ ಧಾನ್ಯಗಳ ಖರೀದಿ ಹಾಗೂ ಮಾರಾಟಕ್ಕೆ ಗರಿಷ್ಠ ಬೆಲೆಗೆ ಮಿತಿ ವಿಧಿಸುವಂತೆ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಹೇಮ್ ಪಾಂಡೆ ಈ ಸಂಬಂಧ ಪತ್ರ ಬರೆದಿದ್ದು, ಈ ಉತ್ಪನ್ನಗಳ ಮೇಲಿನ ಎಲ್ಲ ಸ್ಥಳೀಯ ತೆರಿಗೆಗಳನ್ನು ತೆಗೆದುಹಾಕಿ, ಕೈಗೆಟುಕುವ ದರದಲಿ  ಜನರಿಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಅಗತ್ಯ ವಸ್ತುಗಳ ಕಾಯ್ದೆಯ ಸೆಕ್ಷನ್ 2ರ ಅನ್ವಯ ಗರಿಷ್ಠ ಬೆಲೆ ನಿಗದಿ ಮಾಡುವಂತೆ ಸೂಚಿಸಿದ್ದಾರೆ.

ಈ ಸಂಬಂಧ ರಾಜ್ಯ ಸರಕಾರಗಳಿಗೆ ಅಧಿಕಾರ ಇರುವುದರಿಂದ, ರಾಜ್ಯ ಸರಕಾರಗಳು ತಮ್ಮ ಅಧಿಕಾರವನ್ನು ಬಳಸಿಕೊಳ್ಳುವಂತೆ ಮನವಿಯನ್ನಷ್ಟೇ ಮಾಡಲು ಸಾಧ್ಯ. ಜನರಿಗೆ ಆಹಾರಧಾನ್ಯಗಳು ಯೋಗ್ಯ ಬೆಲೆಯಲ್ಲಿ ಸಿಗುವಂತಾಗಬೇಕು ಎಂದು ಅಧಿಕೃತ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News