75 ಮನೆಗಳಿರುವ ಈ ಪುಟ್ಟ ಗ್ರಾಮದಲ್ಲಿದ್ದಾರೆ 47 ಐಎಎಸ್‌ ಅಧಿಕಾರಿಗಳು

Update: 2016-07-25 16:29 IST
75 ಮನೆಗಳಿರುವ ಈ ಪುಟ್ಟ ಗ್ರಾಮದಲ್ಲಿದ್ದಾರೆ 47 ಐಎಎಸ್‌ ಅಧಿಕಾರಿಗಳು
  • whatsapp icon

ಉತ್ತರ ಪ್ರದೇಶದ ಸಣ್ಣ ಊರಾದ ಮಾಧೋಪಟ್ಟಿ ಇಡೀ ದೇಶದ ಆಡಳಿತ ಸೇವೆಯನ್ನು ನೋಡಿಕೊಳ್ಳುತ್ತದೆ. ಜುನ್ಪುರ್ ಜಿಲ್ಲೆಯ ಈ ಗ್ರಾಮದ 75 ಮನೆಗಳಲ್ಲಿ 47 ಐಎಎಸ್ ಅಧಿಕಾರಿಗಳಿದ್ದಾರೆ.

ಒಂದೇ ಊರಿನಿಂದ ನಾಲ್ಕು ಸಹೋದರರು ಐಎಎಸ್‌ಗೆ ನೇಮಕಗೊಂಡಿರುವ ದಾಖಲೆಯೂ ಗ್ರಾಮಕ್ಕಿದೆ. 1955ರಲ್ಲಿ ಬಿಹಾರದ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿದ ವಿನಯ್ ಕುಮಾರ್ ಸಿಂಗ್  ಐಎಎಸ್ ಪಾಸಾದ ಊರಿನ ಮೊದಲ ವ್ಯಕ್ತಿ. ಅವರ ಇಬ್ಬರು ಸಹೋದರರಾದ ಚತ್ರಪಾಲ್ ಸಿಂಗ್ ಮತ್ತು ಅಜಯ್ ಕುಮಾರ್ ಸಿಂಗ್ 1964ರಲ್ಲಿ ಐಎಎಸ್ ಪಾಸಾದರು. ನಾಲ್ಕನೇ ಸಹೋದರ ಶಶಿಕಾಂತ್ ಸಿಂಗ್ 1968ರಲ್ಲಿ ಐಎಎಸ್ ಪಾಸಾದರು. ಚತ್ರಪಾ ಕೂಡ ತಮಿಳುನಾಡಿನ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.

ಸಂಪೂರ್ಣ ಕುಟುಂಬ ಐಎಎಸ್ ಅಧಿಕಾರಿಗಳಾಗಿರುವುದೂ ಗ್ರಾಮಸ್ಥರಿಗೆ ವಿಶೇಷವೇನಲ್ಲ. ಆದರೆ ಈ ಅದ್ಭುತ ಸಾಧನೆ ಒಂದೇ ದಿನ ಆಗಿದ್ದಲ್ಲ. ಮಾಧೋಪಟ್ಟಿಯ ಮೊದಲ ಐಎಎಸ್ ಅಧಿಕಾರಿ ಮುಸ್ತಾಫಾ ಹುಸೇನ್ 1914ರಲ್ಲಿ ನಾಗರಿಕ ಸೇವೆಗೆ ಸೇರಿದ್ದರು. ಮುಂದಿನ ನಾಗರಿಕ ಸೇವೆ ಅಧಿಕಾರಿ ಈ ಗ್ರಾಮದಿಂದ ಸೇರ್ಪಡೆಯಾಗಿದ್ದು 1952ರಲ್ಲಿ. ಆಗ ಇಂದು ಪ್ರಕಾಶ್ ಐಎಎಸ್ ಪಾಸಾಗಿದ್ದರು. ಅಂದಿನಿಂದ ಗ್ರಾಮದ ಯುವಕರು ಐಎಎಸ್ ಪರೀಕ್ಷೆ ಬರೆಯುವ ಉಮೇದು ಬೆಳೆಸಿಕೊಂಡರು.

ಇಂಟರ್‌ಮೀಡಿಯೇಟ್ ಓದುವ ವಿದ್ಯಾರ್ಥಿಗಳೂ ಐಎಎಸ್ ಮತ್ತು ಪಿಸಿಎಸ್ ಪರೀಕ್ಷೆ ಮಾರ್ಗದರ್ಶಿಗಳನ್ನು ಇಲ್ಲಿ ಓದುತ್ತಾರೆ. ಅವರು ಬಹಳ ಯುವಕರಾಗಿದ್ದಾಗಲೇ ಸಿದ್ಧತೆ ಆರಂಭಿಸುತ್ತಾರೆ. ಹಿಂದಿ ಮಾಧ್ಯಮವೇ ಇಲ್ಲಿ ಹೆಚ್ಚಾಗಿದ್ದರೂ ಚಿಕ್ಕಂದಿನಲ್ಲೇ ಇಂಗ್ಲಿಷ್ ಸುಧಾರಿಸಿಕೊಳ್ಳುವ ಪ್ರಯತ್ನವೂ ನಡೆಯುತ್ತದೆ ಎನ್ನುತ್ತಾರೆ ಸ್ಥಳೀಯ ಅಧ್ಯಾಪಕ ಅರವಿಂದ್ ಕುಮಾರ್.

ಕೃಪೆ: www.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News