ದಲಿತರು-ಕಾಶ್ಮೀರ-ರೈತರು-ಬೇಳೆ ಬೆಲೆಯ ಕುರಿತು ಕೆಂಪುಕೋಟೆಯಿಂದ ಮಾತನಾಡಿ

Update: 2016-08-01 18:14 GMT

ಹೊಸದಿಲ್ಲಿ, ಆ.1: ಮುಂದಿನ ಸ್ವಾತಂತ್ರೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ದಲಿತ ದೌರ್ಜನ್ಯ, ಕಾಶ್ಮೀರ, ರೈತರ ಆತ್ಮಹತ್ಯೆ ಹಾಗೂ ಬೇಳೆಗಳ ದರದ ಕುರಿತು ಮಾತನಾಡಬೇಕೆಂದು ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಆಗ್ರಹಿಸಿದ್ದಾರೆ.

‘‘ಸರ್, ದಯವಿಟ್ಟು ದಲಿತ ದೌರ್ಜನ್ಯ, ಗೋರಕ್ಷಕರು, ಕಾಶ್ಮೀರ, ಅಖ್ಲಾಕ್, ರೈತರ ಆತ್ಮಹತ್ಯೆ, ಬೇಳೆಯ ಕ್ರಯದ ಕುರಿತು ಮಾತನಾಡಿ. ಜನರು ನಿಮ್ಮಿಂದ ಈ ಬಗ್ಗೆ ಆಲಿಸಲು ಕಾತರರಾಗಿದ್ದಾರೆ’’ ಎಂದವರು ಟ್ವೀಟಿಸಿದ್ದಾರೆ.
ಆ.15ರ ಭಾಷಣಕ್ಕೆ ಸಲಹೆ-ಸೂಚನೆ ನೀಡುವಂತೆ ಪ್ರಧಾನಿ ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿದ ಬಳಿಕ ಕೇಜ್ರಿವಾಲ್‌ರ ಈ ಸಲಹೆ ಹೊರಬಿದ್ದಿದೆ.
ತನ್ನ ಆ.15ರ ಭಾಷಣ 125 ಕೋಟಿ ಭಾರತೀಯರ ಧ್ವನಿಯನ್ನು ಪ್ರತಿನಿಧಿಸಬೇಕು. ಅದಕ್ಕೆ ತನ್ನ ಮೊಬೈಲ್ ಆ್ಯಪ್‌ನಲ್ಲಿ ಸಲಹೆ ನೀಡುವಂತೆ ಮೋದಿ ಹೇಳಿದ್ದರು.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರದೊಂದಿಗೆ ಕೇಜ್ರಿವಾಲ್‌ರ ಆಪ್ ಬಿರುಸಿನ ಅಧಿಕಾರ ಸಂಘರ್ಷದಲ್ಲಿ ನಿರತವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News