ರಿಯೊ: ನಿರಾಸೆಯ ಕಾರ್ಮೋಡದ ನಡುವೆಯೂ ಭರವಸೆಯ ಬೆಳಕು

Update: 2016-08-10 01:00 GMT

ರಿಯೊ ಡಿ ಜನೈರೊ: ಸತತ ನಾಲ್ಕನೇ ದಿನವೂ ಪದಕದ ಬರ ನೀಗಿಸಿಕೊಳ್ಳದ ಭಾರತಕ್ಕೆ ನಿರಾಸೆಯ ಕಾರ್ಮೋಡದ ನಡುವೆಯೂ ಕೆಲ ಭರವಸೆಯ ಬೆಳ್ಳಿಕಿರಣಗಳು ಪದಕದ ಆಸೆಯನ್ನು ಜೀವಂತವಾಗಿಸಿವೆ. ಭಾರತದ ಭರವಸೆಯ ಬಾಕ್ಸರ್ ವಿಕಾಸ್ ಕೃಷ್ಣ 75 ಕೆ.ಜಿ. ಮಿಡ್ಲ್‌ವೆಯಿಟ್ ಸ್ಪರ್ಧೆಯಲ್ಲಿ ಅಂತಿಮ 16ರ ಸುತ್ತು ತಲುಪಿದ್ದಾರೆ.

ಅಮೆರಿಕದ ಚಾರ್ಲ್ಸ್ ಕೋನ್‌ವೆಲ್ ವಿರುದ್ಧ 3-0 ಸುಲಭ ಜಯದೊಂದಿಗೆ ಗೆಲುವಿನ ಅಭಿಯಾನ ಆರಂಭಿಸಿದ ವಿಕಾಸ್‌ಕೃಷ್ಣ ಮುಂದಿನ ಸುತ್ತಿನಲ್ಲಿ ಟರ್ಕಿಯ ಓಂಡೆರ್ ಸಿಪಾಲ್ ವಿರುದ್ಧ ಸೆಣಸಲಿದ್ದಾರೆ.

ಶೂಟರ್‌ಗಳ ನಿರಾಶಾದಾಯಕ ಪ್ರದರ್ಶನ ಮುಂದುವರಿದಿದ್ದು, ಹೀನಾ ಸಂಧು 25 ಮೀಟರ್ ಮಹಿಳೆಯರ ಪಿಸ್ತೂಲ್ ಸ್ಪರ್ಧೆಯಲ್ಲಿ 20ನೇ ಸ್ಥಾನ ಪಡೆದು ಸ್ಪರ್ಧೆಯಿಂದ ಹೊರಬಿದ್ದರು. 600ರ ಪೈಕಿ 576 ಅಂಕ ಪಡೆಯಲಷ್ಟೇ ಅವರು ಸಫಲರಾದರು. ಭಾರತದ ಏಕೈಕ ರೋಯಿಂಗ್ ಸ್ಪರ್ಧಿ ದತ್ತು ಬಾಬನ್ ಭೊಕನಾಲ್ ಕ್ವಾರ್ಟರ್‌ಫೈನಲ್‌ನಲ್ಲಿ ನಾಲ್ಕನೆಯವರಾಗಿ ಪದಕ ಸ್ಪರ್ಧೆಯಿಂದ ಹೊರಬಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News