ಅಶ್ವಿನ್ ನಿವೃತ್ತಿ ಹಲವು ಆಟಗಾರರ ನಿವೃತ್ತಿಯ ಮುನ್ಸೂಚನೆಯೇ?

Update: 2024-12-20 16:35 GMT

ರವಿಚಂದ್ರನ್ ಅಶ್ವಿನ್ | PC : PTI  

ಮುಂಬೈ : 288 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿ, 750ಕ್ಕೂ ಅಧಿಕ ವಿಕೆಟ್‌ಗಳನ್ನು ಪಡೆದ ಬಳಿಕ, ಭಾರತೀಯ ಕ್ರಿಕೆಟ್ ತಂಡದ ಮುಂಚೂಣಿಯ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತನ್ನ ಅಂತರ್‌ರಾಷ್ಟ್ರೀಯ ಕ್ರೀಡಾ ಬದುಕಿಗೆ ಬುಧವಾರ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಅವರ ನಿವೃತ್ತಿಯು ವಿರಾಟ್ ಕೊಹ್ಲಿ ಸೇರಿದಂತೆ ಹಲವರಿಗೆ ಆಘಾತ ತಂದಿತ್ತು.

ಅಶ್ವಿನ್ ಬೆನ್ನಿಗೇ, ಸದ್ಯೋಭವಿಷ್ಯದಲ್ಲಿ ಹಲವು ಹಿರಿಯ ಆಟಗಾರರು ನಿವೃತ್ತಿ ಘೋಷಿಸಬಹುದು ಎನ್ನುವ ವದಂತಿಗಳು ಹರಿದಾಡುತ್ತಿವೆ.

ಭಾರತೀಯ ಕ್ರಿಕೆಟ್ ತಂಡವು ಸಂಕ್ರಮಣ ಘಟ್ಟವೊಂದನ್ನು ತಲುಪುವ ನಿರೀಕ್ಷೆಯಿದೆ ಎಂದು ‘ಕ್ರಿಕ್‌ಬಝ್’ನ ವರದಿಯೊಂದು ಹೇಳಿದೆ. ಮುಂದಿನ ವರ್ಷದ ಜೂನ್ ತಿಂಗಳಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ತಲುಪಿದರೆ, ಆ ಬಳಿಕ ತಂಡದಲ್ಲಿ ಹಲವು ಬದಲಾವಣೆಗಳು ನಡೆಯಲಿವೆ ಎಂದು ವರದಿಯು ಭವಿಷ್ಯ ನುಡಿದಿದೆ.

‘‘ಈ ನಿರ್ಧಾರಗಳ ಪೈಕಿ ಎಷ್ಟು ಯೋಜಿತ, ಸ್ವಯಂಪ್ರೇರಿತ ಅಥವಾ ಪ್ರಭಾವಿತ ಎನ್ನುವುದನ್ನು ನಿರ್ಧರಿಸುವುದು ಕಷ್ಟ. ಆದರೆ, ಭಾರತೀಯ ತಂಡವು ಶೀಘ್ರದಲ್ಲೇ ಪರಿವರ್ತನೆಗೆ ಒಳಗಾಗಲಿದೆ. ಈ ಪರಿವರ್ತನೆಯು 2025ರ ಬೇಸಿಗೆಯಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಭಾರತದ ಮುಂದಿನ ಟೆಸ್ಟ್ ಸರಣಿಯ ಆರಂಭದ ವೇಳೆಗೆ ಸಾಧ್ಯವಾಗಬಹುದು. ಇದರ ಯಶಸ್ಸು ಅಥವಾ ಅಪಯಶಸ್ಸು, ಎಂದಿನಂತೆ ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯೊಂದಿಗೆ ತಳುಕು ಹಾಕಿದೆ. ಹಲವು ವರ್ಷಗಳ ಅವಧಿಯಲ್ಲಿ, ಹಲವು ಆಟಗಾರರ ಕ್ರಿಕೆಟ್ ಬದುಕುಗಳನ್ನು ಧ್ವಂಸಗೊಳಿಸಿದ ಕುಖ್ಯಾತಿಯನ್ನು ಆಸ್ಟ್ರೇಲಿಯ ಪ್ರವಾಸಗಳು ಗಳಿಸಿವೆ’’ ಎಂದು ‘ಕ್ರಿಕ್‌ಬಝ್’ ವರದಿ ಹೇಳಿದೆ.

2008ರಲ್ಲಿ, ಆಸ್ಟ್ರೇಲಿಯ ಸರಣಿಯ ಬಳಿಕ ಸೌರವ್ ಗಂಗುಲಿ ಮತ್ತು ಅನಿಲ್ ಕುಂಬ್ಳೆ ನಿವೃತ್ತರಾಗಿದ್ದರು. 2025 ಕೂಡ ಅಂಥದೇ ನಿವೃತ್ತಿಗಳ ವರ್ಷವಾಗಬಹುದು ಎಂದು ವರದಿ ಅಭಿಪ್ರಾಯಪಟ್ಟಿದೆ.

ಜೂನ್‌ನಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ, ರೋಹಿತ್ ಶರ್ಮ, ಕೊಹ್ಲಿ ಮತ್ತು ರವೀಂದ್ರ ಜಡೇಜ ಟಿ20 ಅಂತರ್‌ರಾಷ್ಟ್ರೀಯ ಪಂದ್ಯಗಳಿಗೆ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News