ಅಶ್ವಿನ್‌ಗೆ ಖೇಲ್ ರತ್ನ ಪ್ರಶಸ್ತಿ ನೀಡುವಂತೆ ಕ್ರೀಡಾ ಸಚಿವರಿಗೆ ಕಾಂಗ್ರೆಸ್ ಸಂಸದ ಮನವಿ

Update: 2024-12-20 22:07 IST
Ravichandran Ashwin

 ರವಿಚಂದ್ರನ್ ಅಶ್ವಿನ್‌ | PC : PTI 

  • whatsapp icon

ಹೊಸದಿಲ್ಲಿ: ಇತ್ತೀಚೆಗೆ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಗೊಂಡಿರುವ ಭಾರತೀಯ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್‌ರನ್ನು ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿಯಿಂದ ಗೌರವಿಸುವಂತೆ ಕಾಂಗ್ರೆಸ್ ಸಂಸದ ವಿಜಯ ವಸಂತ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಮನ್‌ಸುಖ್ ಮಾಂಡವೀಯರಿಗೆ ಮನವಿ ಮಾಡಿದ್ದಾರೆ.

‘‘ಆರ್. ಅಶ್ವಿನ್‌ರಿಗೆ ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ನೀಡುವಂತೆ ಕೋರಿ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಮನ್‌ಸುಖ್ ಮಾಂಡವೀಯರಿಗೆ ನಾನು ಪತ್ರ ಬರೆದಿದ್ದೇನೆ. ಭಾರತೀಯ ಕ್ರಿಕೆಟ್‌ಗೆ ಅವರು ನೀಡಿರುವ ದೇಣಿಗೆಗಳು ಮತ್ತು ಕ್ರಿಕೆಟ್ ಮೈದಾನದಲ್ಲಿನ ಅವರ ಅಸಾಧಾರಣ ಸಾಧನೆಗಳು ಅವರನ್ನು ಈ ಗೌರವಕ್ಕೆ ಅರ್ಹವಾಗಿಸಿವೆ’’ ಎಂದು ವಿಜಯ ವಸಂತ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.

ಅಶ್ವಿನ್ 106 ಟೆಸ್ಟ್ ಪಂದ್ಯಗಳಲ್ಲಿ ಆಡಿ 537 ವಿಕೆಟ್‌ಗಳನ್ನು ಪಡೆದಿದ್ದಾರೆ. 37 ಬಾರಿ ಅವರು ಐದು ವಿಕೆಟ್‌ಗಳ ಗೊಂಚಿಲನ್ನು ಗಳಿಸಿದ್ದಾರೆ. ಅದೂ ಅಲ್ಲದೆ, 3,503 ರನ್‌ಗಳನ್ನು ಮಾಡಿದ್ದಾರೆ.

ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಏಳನೇ ಗರಿಷ್ಠ ವಿಕೆಟ್ ಗಳಿಕೆದಾರರಾಗಿದ್ದಾರೆ ಮತ್ತು ಎರಡನೇ ಗರಿಷ್ಠ ವಿಕೆಟ್‌ಗಳನ್ನು ಪಡೆದ ಭಾರತೀಯನಾಗಿದ್ದಾರೆ. ಭಾರತದಲ್ಲಿ ಮೊದಲ ಸ್ಥಾನದಲ್ಲಿ ಅನಿಲ್ ಕುಂಬ್ಳೆ (619) ಇದ್ದಾರೆ.

ಅವರು 116 ಏಕದಿನ ಪಂದ್ಯಗಳನ್ನು ಆಡಿ 156 ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು 707 ರನ್‌ಗಳನ್ನು ಸಂಪಾದಿಸಿದ್ದಾರೆ. ಅದೂ ಅಲ್ಲದೆ, 65 ಟಿ20 ಪಂದ್ಯಗಳನ್ನು ಆಡಿ 72 ವಿಕೆಟ್‌ಗಳನ್ನು ಗಳಿಸಿದ್ದಾರೆ ಮತ್ತು 184 ರನ್‌ಗಳನ್ನು ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News