ಸಮಾನತೆ, ಸ್ವಾತಂತ್ರ,ಬಂಧುತ್ವಗಳ ಅವನತಿ ಉಲ್ಬಣಗೊಳ್ಳುತ್ತಿರುವ ಬ್ರಾಹ್ಮಣ್ಯ-ಪ್ಯೂಡಲಿಸಂ
“I am the shining sword-arm of Bhim's thoughts"
-sings Anjali Bharti, a Dalit singer
"I don't get stumbled by their strike but neither do I get to reach anywheremy pain has reached beyond."
-Umesh Solanki
"democracy in India was only a top-dressing on an Indian soil which is essentially undemocratic."
-Ambedkar
ಮಾನವ ಹಕ್ಕುಗಳ ಉಲ್ಲಂನೆಯಾದ ಸಂದರ್ಭದಲ್ಲಿ ನಾವೆಲ್ಲಾ ಸಂವಿಧಾನದ ನೀತಿಸಂಹಿತೆಗಳ ಕುರಿತಾಗಿ ಮಾತನಾಡುತ್ತೇವೆ. ಸಮಾನತೆ ಮತ್ತು ಸಮಾನ ರಕ್ಷಣೆಯನ್ನು ಹೇಳುವ ಕಲಂ 14, ಜಾತಿ,ಧರ್ಮ,ಲಿಂಗ,ಭಾಷೆ,ಬಣ್ಣದ ಆಧಾರದಲ್ಲಿ ತಾರತಮ್ಯ ನಿಷೇಸುವ ಕಲಂ 15, ಸಮಾನ ಅವಕಾಶಗಳನ್ನು ಪ್ರತಿಪಾದಿಸುವ ಕಲಂ 16, ಅಸ್ಪಶ್ಯತೆಯನ್ನು ನಿರ್ಮೂಲನೆ ಮಾಡುವ ನೀತಿಸಂಹಿತೆ ಕಲಂ 17, ಅಭಿವ್ಯಕ್ತಿ ಸ್ವಾತಂತ್ರದ ಹಕ್ಕನ್ನು ಎತ್ತಿ ಹಿಡಿಯುವ ಕಲಂ 19, ಜೀವ ಮತ್ತು ವೈಯಕ್ತಿಕ ಸ್ವಾತಂತ್ರದ ರಕ್ಷಣೆಯನ್ನು ಹೇಳುವ ಕಲಂ 21. ಇದೆಲ್ಲಾ ಸರಿ. ಆದರೆ ವಾಸ್ತವದಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ಸಂವಿಧಾನ ವಿರೋ ಕೃತ್ಯಗಳು ಘಟಿಸುತ್ತಿರುವುದನ್ನು ನಾವು ಕಳೆದ ಅರುವತ್ತು ವರ್ಷಗಳಲ್ಲಿ ಮೂಕ ಪ್ರೇಕ್ಷಕರಂತೆ ವೀಕ್ಷಿಸುತ್ತಿದ್ದೇವೆ.
ಮೂವತ್ತರ ದಶಕದ ಬ್ರಿಟಿಷ್ ಆಡಳಿತದ ಸಂದರ್ಭದಲ್ಲಿ ಇಂಡಿಯಾದಲ್ಲಿ ಪ್ರಾಂತೀಯ ವಿಧಾನ ಸಭೆೆಗಳನ್ನು ರಚಿಸಲಾಗಿತ್ತು. ಕೇವಲ ಮೇಲ್ಜಾತಿಗಳಿಂದ ತುಂಬಿದ್ದ ಈ ಪ್ರಾಂತೀಯ ಸಭೆಗಳ ಸದಸ್ಯರು ಬಂಡವಾಳಶಾಹಿ ಪ್ರತಿನಿಗಳು, ಬ್ರಾಹ್ಮಣಶಾಹಿಯ ಪ್ರತಿನಿಗಳು, ರಾಜ ವಂಶಗಳ ಪ್ರತಿನಿಗಳನ್ನು ಸಂವಿಧಾನ ರಚನೆ ಸಮಿತಿಗೆ ಆಯ್ಕೆ ಮಾಡಿದ್ದರು. ಇವರೆಲ್ಲರೂ ಪಟ್ಟಭದ್ರ ಹಿತಾಸಕ್ತಿಗಳಿಗಾಗಿಯೇ ಆ ಸಂವಿಧಾನ ರಚನಾ ಸಭೆಯಲ್ಲಿದ್ದರು. ಇವರೆಲ್ಲರ ಧೂರ್ತತನ ಮತ್ತು ಬ್ರಾಹ್ಮಣ್ಯದ ಹೆಜಮಾಣಿಕೆಯನ್ನು ಮೀರಿ ಅಂಬೇಡ್ಕರ್ ಅವರು ಸಾಮಾಜಿಕ ಅಸಮಾನತೆ ಮತ್ತು ಆರ್ಥಿಕ ಅಸಮಾನತೆಯ ನಿರ್ಮೂಲನೆಗಾಗಿ ಏಕಾಂಗಿಯಾಗಿಯೇ ನೀತಿಸಂಹಿತೆಗಳನ್ನು ರೂಪಿಸಬೇಕಾಯಿತು. ಆದರೆ ಅದು ಅಂಬೇಡ್ಕರ್ ಕನಸಿನ ಸಂವಿಧಾನ ಆಗಿರಲಿಲ್ಲ. Constituent Assembly
ಡಿಬೇಟ್‌ನಲ್ಲಿ ಮಾತನಾಡುತ್ತಾ ಈ ಮತದಾರರ ಹಕ್ಕನ್ನು ಕಸಿದುಕೊಳ್ಳುವ ಸಂವಿಧಾನ ಬಾಹಿರ ಕೃತ್ಯಗಳ ಕುರಿತಾಗಿ ಎಚ್ಚರಿಸಿದ್ದರು. ಮೂಲಭೂತವಾಗಿ ಪ್ರಜಾಪ್ರಭುತ್ವ ವಿರೋಯಾದ ಭಾರತೀಯನಿಗೆ ಪ್ರಜಾಪ್ರಭುತ್ವದ ವೇಷವನ್ನು ಹಾಕಿದಂತಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದರು.
ಈ ಕಾರಣಕ್ಕಾಗಿಯೇ ಅಂಬೇಡ್ಕರ್ ಅವರು ಸಂವಿಧಾನ ಸಮರ್ಪಣೆಯ ಸಂದಭರ್ದಲ್ಲಿ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಆದರೆ ಕೇವಲ ರಾಜಕೀಯ ಪ್ರಜಾಪ್ರಭುತ್ವದಿಂದ ನಾವು ತೃಪ್ತರಾಗಬಾರದು, ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾ ಪ್ರಭುತ್ವವನ್ನಾಗಿಯೂ ರೂಪಿಸಬೇಕು. ಇಂದು ನಾವು ರಾಜಕೀಯ ಸಮಾನತೆಯನ್ನು ಸಾಸಿರಬಹುದು, ಆದರೆ ಸಾಮಾಜಿಕ ಸಮಾನತೆ ಇಲ್ಲದೆ ರಾಜಕೀಯ ಸಮಾನತೆ ಬಹುದಿನಗಳ ಕಾಲ ಉಳಿಯಲಾರದು. ಸಾಮಾಜಿಕ ಸಮಾನತೆ ಎಂದರೇನು? ಅದು ಸ್ವಾತಂತ್ರ, ಸಮಾನತೆ, ಬಂಧುತ್ವವನ್ನು ಗುರುತಿಸುತ್ತದೆ, ಮಾನ್ಯ ಮಾಡುತ್ತದೆ, ಗೌರವಿಸುತ್ತದೆ. ಸ್ವಾತಂತ್ರ, ಸಮಾನತೆ,ಬಂಧುತ್ವವನ್ನು ಬೇರೆಯಾಗಿ ಪರಿಗಣಿಸಲೇಬಾರದು. ಇವು ಬೇರ್ಪಟ್ಟರೆ ಪ್ರಜಾಪ್ರಭುತ್ವದ ಆಶಯಗಳೇ ಮಣ್ಣುಗೂಡಿದಂತೆ. ರಾಜಕೀಯದಲ್ಲಿ ಒಬ್ಬ ವ್ಯಕ್ತಿ, ಒಂದು ವೋಟು ಮತ್ತು ಒಂದು ವೌಲ್ಯ ಎನ್ನುವ ಆದರ್ಶವನ್ನು ಗೌರವಿಸುತ್ತೇವೆ. ಆದರೆ ಸಾಮಾಜಿಕ-ಆರ್ಥಿಕ ಚೌಕಟ್ಟಿನಲ್ಲಿ ಒಬ್ಬ ವ್ಯಕ್ತಿ, ಒಂದು ವೌಲ್ಯದ ಆದರ್ಶವನ್ನು ನಿರಾಕರಿಸುತ್ತೇವೆ. ಎಷ್ಟು ದಿನಗಳ ಕಾಲ ನಾವು ಸಾಮಾಜಿಕ-ಆರ್ಥಿಕ ವಲಯಗಳಲ್ಲಿ ಸಮಾನತೆಯನ್ನು ನಿರಾಕರಿಸುತ್ತೇವೆ? ಇದನ್ನು ನಾವು ನಿರಾಕರಿಸಿದಷ್ಟೂ ರಾಜಕೀಯ ಪ್ರಜಾಪ್ರಭುತ್ವವು ಕಂಟಕದಲ್ಲಿರುತ್ತದೆ ಎಂದು ಹೇಳಿದ ಮಾತುಗಳು ಮುಂದಿನ ದುರಂತಗಳಿಗೆ ಮುನ್ನೆಚ್ಚರಿಕೆಯ ಕರಗಂಟೆಯಂತಿತ್ತು. ಆದರೆ ವಿಸ್ಮತಿಯಲ್ಲಿ, ಬೌದ್ಧಿಕ ರಮ್ಯತೆಯ ಹುಡುಕಾಟದಲ್ಲಿ ಮುಳುಗಿದ ಇಲ್ಲಿನ ಪ್ರಜ್ಞಾವಂತ ವರ್ಗ ತನ್ನ ಬೇಜವಾಬ್ದಾರಿತನದ ಲವಾಗಿ ಇಡೀ ಸ್ಪೇಸ್ ಅನ್ನು ಸನಾತನವಾದಿ ಸಂಗಳಿಗೆ ಬಿಟ್ಟುಕೊಟ್ಟಿತು. ಕಳೆದ ಐವತ್ತು ವರ್ಷಗಳಲ್ಲಿ ನಡೆದ ಕೋಮುಗಲಭೆಗಳು ಒಂದೆಡೆಯಾದರೆ ಸಂಸದೀಯ ಪ್ರಜಾಪ್ರಭುತ್ವವನ್ನು ಪಾಲಿಸುವ ಇಂಡಿಯಾದಲ್ಲಿ ದಲಿತರ ವಿರುದ್ಧ ನಡೆದ ಹತ್ಯಾಕಾಂಡಗಳನ್ನು ಗಮನಿಸೋಣ. ತಮಿಳುನಾಡಿನ ಕೆಲ್ವಿನಮಣಿಯಲ್ಲಿ 44 ದಲಿತ ಕೂಲಿ ಕಾರ್ಮಿಕರನ್ನು ಸಜೀವ ದಹನ, ಆಂಧ್ರಪ್ರದೇಶದ(ಅವಿಭಜಿತ) ಕರಂಚೇಡುವಿನಲ್ಲಿ 6 ದಲಿತರ ಹತ್ಯೆ, ಸುಂದೂರು- ಆಂಧ್ರಪ್ರದೇಶದ (ಅವಿಭಜಿತ) ದಲ್ಲಿ 8 ದಲಿತರ ಕೊಲೆ, ಬದನವಾಳು, ನಂಜನಗೂಡು- 3 ದಲಿತರ ಹತ್ಯೆ. ಬತಾನಿ ತೋಲ,ಬಿಹಾರ -ರಣವೀರ ಸೇನಾ ಪಡೆಯಿಂದ 21 ದಲಿತರ ಕೊಲೆ, ಲಕ್ಷ್ಮಣಪುರ ಬಾತೆ, ಬಿಹಾರ್-ರಣವೀರ ಸೇನಾ ಪಡೆಯಿಂದ 58 ದಲಿತರ (27 ಮಹಿಳೆಯರು,16 ಮಕ್ಕಳು) ಹತ್ಯೆ, ಮೆಲವಲಾಲು, ತಮಿಳುನಾಡು-6 ದಲಿತರ ಕೊಲೆ, ಕಂಬಾಲಪಲ್ಲಿ, ಕರ್ನಾಟಕ 8 ದಲಿತರ ಜೀವಂತ ದಹನ, ಖೈರ್ಲಾಂಜೆ, ಮಹಾರಾಷ್ಟ್ರ-ಮಹರ್ ಸಮುದಾಯದ ಬೋತ್ಮಾಂಗೆ ಕುಂಟುಂಬದ 4 ಸದಸ್ಯರನ್ನು ಅತ್ಯಾಚಾರ ಮಾಡಿ ಕೊಲೆ, ಚಾಮರಾಜ ನಗರ,ಕೊಪ್ಪಳ ಜಿಲ್ಲೆಗಳಲ್ಲಿ ದಲಿತರ ಸರಣಿ ಹತ್ಯೆಗಳು.
2014ರ ಅಂಕಿ ಅಂಶಗಳ ಅನುಸಾರ ಪ್ರತಿ ದಿನ ಪರಿಶಿಷ್ಟ ಜಾತಿ ಸಮುದಾಯದ ವಿರುದ್ಧ 128 ಅಪರಾಧಗಳು ಜರಗುತ್ತಿವೆ.
ಪ್ರತಿ ವಾರವೂ 9 ದಲಿತರ ವಿರುದ್ಧ ಕೊಲೆಯ ಪ್ರಯತ್ನ ನಡೆಯುತ್ತಿದೆ.
ಪ್ರತಿ ತಿಂಗಳು 194 ದಲಿತ ಮಹಿಳೆಯರ ಮೇಲೆ ಹಲ್ಲೆ ಮಾಡಲಾಗುತ್ತಿದೆ.
2013ರ ನಂತರ ಪರಿಶಿಷ್ಟ ಜಾತಿ ಸಮುದಾಯದ ಮೇಲೆ ಶೇ.19ರ ಪ್ರಮಾಣದಲ್ಲಿ ಅಪರಾಧಗಳು ಹೆಚ್ಚಾಗಿವೆ.
ಪ್ರತಿ ನಾಲ್ಕು ಗಂಟೆಗೊಮ್ಮೆ ಒಬ್ಬ ಪರಿಶಿಷ್ಟ ಜಾತಿ ಸಮುದಾಯದ ಮಹಿಳೆ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾಳೆ
2014ರಲ್ಲಿ ನಡೆದ ಕೇಸುಗಳ ವಿಚಾರಣೆಯ ಸಂಖ್ಯೆ 1,27,341 ಪರಿಶಿಷ್ಟ ಜಾತಿ ಸಮುದಾಯದ ಮೇಲಿನ ದೌರ್ಜನ್ಯ, ಹಲ್ಲೆ, ಕೊಲೆ ಸಂಬಂತ 3,43,122 ಜನರ ವಿಚಾರಣೆ ನಡೆಸಲಾಗಿದೆ.
69,974 ಜನರನ್ನು ಜೈಲಿಗೆ ಕಳುಹಿಸಲಾಗಿದೆ.
1,08,659 ಕೇಸು ಬಾಕಿ ಉಳಿದಿವೆ.
ಪರಿಶಿಷ್ಟ ಜಾತಿ ಸಮುದಾಯದ ಮೇಲೆ ನಡೆದ ಅತ್ಯಾಚಾರ
2001ರಲ್ಲಿ-1,316; 2002ರಲ್ಲಿ-1,331 2003ರಲ್ಲಿ-1,089;2004ರಲ್ಲಿ-1,157 2005ರಲ್ಲಿ-1,172; 2006ರಲ್ಲಿ-1,217 2007ರಲ್ಲಿ-1,349;2008ರಲ್ಲಿ-1,453 2009ರಲ್ಲಿ-1,350; 2010ರಲ್ಲಿ-1,350; 2011ರಲ್ಲಿ-1,157;2012ರಲ್ಲಿ-1,576 2013ರಲ್ಲಿ-2,073; 2014ರಲ್ಲಿ-2,252
ಪರಿಶಿಷ್ಟ ಜಾತಿ ಸಮುದಾಯದ ಕೊಲೆಗಳು
2001ರಲ್ಲಿ-763; 2002ರಲ್ಲಿ-739;
2003ರಲ್ಲಿ-581 2004ರಲ್ಲಿ-654;
2005ರಲ್ಲಿ-669; 2006ರಲ್ಲಿ-673
2007ರಲ್ಲಿ-674; 2008ರಲ್ಲಿ-622;
2009ರಲ್ಲಿ-629 2010ರಲ್ಲಿ-572;
2011ರಲ್ಲಿ-673; 2012ರಲ್ಲಿ-651
2013ರಲ್ಲಿ- 676; 2014ರಲ್ಲಿ-744
2014ರಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಮೇಲೆ ಅತೀ ಹೆಚ್ಚು ದೌರ್ಜನ್ಯ,ಕೊಲೆ ಅತ್ಯಾಚಾರ ನಡೆದ ರಾಜ್ಯಗಳು(ಶೇಕಡವಾರು ಪ್ರಮಾಣ)
ಉತ್ತರ ಪ್ರದೇಶ-17.2; ರಾಜಸ್ತಾನ-17.1; ಬಿಹಾರ-16.8; ಆಂಧ್ರ ಪ್ರದೇಶ-8.7; ಮಧ್ಯಪ್ರದೇಶ-8.8; ಕರ್ನಾಟಕ-4.5; ಒಡಿಸ್ಸ-4.8;
ಮಹಾರಾಷ್ಟ್ರ-3.8;ತೆಲಂಗಾಣ-3.6;ತಮಿಳು ನಾಡು-3.3; ಇತರೇ ಭಾರತ-11.4 2014ರಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಪ್ರತಿ 1 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ನಡೆದ ದೌರ್ಜನ್ಯಗಳ ಸಂಖ್ಯೆ
ಗೋವಾ-66.8; ರಾಜಸ್ಥಾನ-65.7; ಆಂಧ್ರಪ್ರದೇಶ-48.7; ಬಿಹಾರ-47.6; ಮಧ್ಯಪ್ರದೇಶ-36.6; ಛತ್ತೀಸಗಡ-32.6; ಒಡಿಶಾ-31.5; ತೆಲಂಗಾಣ-31.2; ಇತರೇ ಭಾರತ-23.4 (ಮೇಲಿನ ಅಂಕಿ ಅಂಶಗಳ ಆಧಾರ ; ್ರಂಟ್‌ಲೈನ್ ಪತ್ರಿಕೆ 15,ಎಪ್ರಿಲ್ 2016)
ಗುಜರಾತ್ ಮಾಡೆಲ್ ಎಂದು ಪ್ರಚಾರ ಪಡೆದ ಮುಖ್ಯಮಂತ್ರಿಯಾಗಿ ಮೋದಿ ಆಡಳಿತದ 2002-2014ರ ಕಾಲಘಟ್ಟದ ಗುಜರಾತ್‌ನಲ್ಲಿ ಪರಿಶಿಷ್ಟ ಜಾತಿಗಳ ವಿರುದ್ಧದ ದೌರ್ಜನ್ಯ,ಅತ್ಯಾಚಾರ,ಕೊಲೆ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯ ಪ್ರಮಾಣ ಕೇವಲ ಶೇ.5ರಷ್ಟಿದೆ. ಪರಿಶಿಷ್ಟ ಪಂಗಡಗಳ ವಿರುದ್ಧ ಶೇಕಡ 4.3ಪ್ರಮಾಣದಷ್ಟಿದೆ. ಆದರೆ ರಾಷ್ಟ್ರೀಯ ಪ್ರಮಾಣ ಶೇ.29.2ಮತ್ತು ಶೇ.26.5ಪ್ರಮಾಣದಲ್ಲಿದೆ.
ಇದರ ಅರ್ಥ ಮೋದಿ ರಾಜ್ಯಭಾರದ ಗುಜರಾತ್‌ನಲ್ಲಿ ದಲಿತರ ವಿರುದ್ಧ ದೌರ್ಜನ್ಯ,ಕೊಲೆ ನಡೆಸಿದ 100 ಆರೋಪಿಗಳ ಪೈಕಿ ಕೇವಲ 5 ಆರೋಪಿಗಳು ಮಾತ್ರ ತಪ್ಪಿತಸ್ಥರೆಂದು ದೋಷಿ ನಿರ್ಣಯವಾಗಿದ್ದರೆ ಉಳಿದ 95 ಆರೋಪಿಗಳು ನಿರಪರಾಗಳೆಂದು ಬಿಡುಗಡೆಯಾಗಿದ್ದಾರೆ. ಇತ್ತೀಚಿನ ಮರ್ಯಾದೆಗೇಡು ಹತ್ಯೆಗಳು 2012ರಂದು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ದಲಿತ ಯುವಕ ಇಲಂಗೋ ಇಲವರಸನ್ ವಣ್ಣಿಯಾರ್ ಯುವತಿ ಎನ್.ದಿವ್ಯಾ ಅವರನ್ನು ಮದುವೆಯಾಗಿದ್ದರು. 4, ಜನವರಿ 2013ರಂದು ಧರ್ಮಪುರಿ ರೈಲ್ವೆ ಹಳಿಯ ಬಳಿ ಇಲವರಸನ್ ಅವರ ಶವ ಪತ್ತೆಯಾಗುತ್ತದೆ. ಪೋಲೀಸ್ ತನಿಖೆ ಇದನ್ನು ಆತ್ಮಹತ್ಯೆ ಎಂದು ಕರೆಯಿತು. ಆದರೆ ದಲಿತ ಸಂಘಟನೆಗಳು ಇದನ್ನು ಒಂದು ಮರ್ಯಾದಗೇಡು ಹತ್ಯೆ ಎಂದು ಪ್ರತಿಭಟಿಸಿದವು. ಆದರೆ ಇವರಿಬ್ಬರ ಮದುವೆಯ ನಂತರ 7,ನವೆಂಬರ್ 2012ರಂದು ವಣ್ಣಿಯಾರ್ ಸಮುದಾಯದವರು ದಲಿತರ ಕಾಲನಿಯ ಮೇಲೆ ದಾಳಿ ನಡೆಸಿ ಕೋಟ್ಯಂತರ ಮೊತ್ತದ ಆಸ್ತಿಯನ್ನು ನಾಶಪಡಿಸಿದರು.
ಮಾರ್ಚ್ 2016ರಂದು ದಲಿತ ಯುವಕ ಶಂಕರ್ ಮತ್ತು ಆತನ ಹೆಂಡತಿ ತೇವರ್ ಸಮುದಾಯದ ಕೌಶಲ್ಯಾ ಅವರ ಮೇಲೆ ಹಲ್ಲೆ ನಡೆಸಿ ಶಂಕರ್ ಅವರನ್ನು ಹತ್ಯೆ ಮಾಡಲಾಯಿತು. ಮರುದಿನ ಯುವತಿ ಕೌಶಲ್ಯಾರ ತಂದೆ ತೇವರ್ ಸಮುದಾಯದ ಚಿನ್ನಸ್ವಾಮಿ ಶರಣಾಗತನಾದ ಎಪ್ರಿಲ್ 2016ರಂದು ಮಂಡ್ಯ ಜಿಲ್ಲೆಯಲ್ಲಿ ಒಕ್ಕಲಿಗ ಜಾತಿಗೆ ಸೇರಿದ ಮೋನಿಕಾ ಎನ್ನುವ ಯುವತಿಯನ್ನು ಆಕೆಯ ತಂದೆ ಮತ್ತು ಚಿಕ್ಕಪ್ಪ ಸೇರಿ ಮರ್ಯಾದೆಗೇಡು ಹತ್ಯೆ ಮಾಡುತ್ತಾರೆ. ಆಕೆ ಮಾಡಿದ ಒಂದೇ ತಪ್ಪೆಂದರೆ ದಲಿತ ಯುವಕನನ್ನು ಪ್ರೇಮಿಸಿದ್ದು.
ಉನಾ ಬಂಡಾಯ: ಗರಿಬಿಚ್ಚಿದ ದಲಿತ ಅಸ್ಮಿತೆ
11 ಜುಲೈ 2016ರಲ್ಲಿ ಗುಜರಾತ್‌ನ ಉನಾ ಜಿಲ್ಲೆಯಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದಾರೆಂದು ದಲಿತ ಯುವಕರ ಮೇಲೆ ಈ ಸಂಘ ಪರಿವಾರದ ಗೋರಕ್ಷಣಾ ದಳದವರು ನಡೆಸಿದ ಹಲ್ಲೆ ದೃಶ್ಯ ಮಾಧ್ಯಮಗಳ ಮೂಲಕ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗವಾಗಿ ದೇಶಾದ್ಯಂತ ಒಂದು ಬಗೆಯ ಆಕ್ರೋಶ ಮತ್ತು ಆತಂಕ ಎರಡನ್ನೂ ಹುಟ್ಟು ಹಾಕುತ್ತಿದೆ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂದು ಕರೆಯಲ್ಪಡುವ ಇಂಡಿಯಾದ ಸೂಕ್ಷ್ಮತೆ,ಸಂವೇದನೆ,ಬಂಧುತ್ವ ನಶಿಸಿ ಹೋಗಿದ್ದಕ್ಕೆ ಈ ಘಟನೆ ಸಾಕ್ಷಿಯಾಯಿತು. ಈ ಲುಂಪೆನ್ ಗೋರಕ್ಷಣಾ ದಳಗಳು ಇದೇ ಮಾದರಿಯಲ್ಲಿ ಮಧ್ಯಪ್ರದೇಶದಲ್ಲಿ ಮುಸ್ಲಿಮ್ ಮಹಿಳೆಯರ ಮೇಲೆ,ಹರ್ಯಾಣ,ರಾಜಸ್ಥಾನ,ಮಹಾರಾಷ್ಟ್ರ ರಾಜ್ಯಗಳಲ್ಲಿ ದಲಿತರ ಮೇಲೆ ಹಲ್ಲೆ, ಅತ್ಯಾಚಾರ ನಡೆಸಿವೆ. ಈ ಶ್ರೇಣೀಕೃತ ಜಾತಿ ಪದ್ಧತಿಯ ಕಾರಣಕ್ಕಾಗಿ ಸತ್ತ ದನದ ಚರ್ಮವನ್ನು ಸುಲಿಯುವುದು ದಲಿತರ ಪಾಲಿಗೆ ಒಂದು ಕುಲಕಸುಬಾಗಿ ಶತಮಾನಗಳಿಂದ ಚಾಲ್ತಿಯಲ್ಲಿತ್ತು. ಇದನ್ನು ಮೇಲ್ಜಾತಿಯ ್ಯೂಡಲಿಸಂ ದಲಿತರ ಮೇಲೆ ಹೇರಿದ ದೌರ್ಜನ್ಯದ ಪ್ರತಿರೂಪವಾಗಿತ್ತು. ಆದರೆ ಸ್ವಾತಂತ್ರ ಮತ್ತು ಆಧುನಿಕ ಕಾಲಘಟ್ಟದ ಬದುಕು ಸಹ ಈ ಕ್ರೌರ್ಯವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಲಿಲ್ಲ ಬದಲಾಗಿ ಇದು ಮತ್ತಷ್ಟು ಗಟ್ಟಿಗೊಳ್ಳತೊಡಗಿದೆ.
ತೀರಾ ಇತ್ತೀಚೆಗೆ ಹರ್ಯಾಣದಲ್ಲಿ ಬ್ೀ ತಿನ್ನುತ್ತಾರೆಂದು ಆಪಾದಿಸಿ ಇಬ್ಬರು ಮುಸ್ಲಿಮ್ ಯುವಕರಿಗೆ ಸೆಗಣಿಯನ್ನು ಬಲವಂತವಾಗಿ ತಿನ್ನಿಸಿದ ಘಟನೆ ವರದಿಯಾಗಿದೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಸವರ್ಗಾಂವ್ ಗ್ರಾಮದಲ್ಲಿ ಆರು ದಲಿತ ಯುವಕರನ್ನು 25 ಸವರ್ಣೀಯ ತಂಡ ಥಳಿಸಿತ್ತು. ಈ ದಲಿತ ಯುವಕರು ತಮ್ಮ ಬೈಕಿನ ಮೇಲೆ ಅಂಬೇಡ್ಕರ್ ಅವರ ಭಾವಚಿತ್ರವನ್ನು ಅಂಟಿಸಿಕೊಂಡಿದ್ದು ಈ ಮೇಲ್ಜಾತಿಯವರ ಅಸಹನೆಗೆ ಕಾರಣವಾದರೆ ನಂತರ ದಲಿತ ಯುವಕರು ಬೈಕಿನಲ್ಲಿ ಈ ಮೇಲ್ಜಾತಿಯವರನ್ನು ಓವರ್ ಟೇಕ್ ಮಾಡಿದ್ದು ಇವರಿಗೆ ಕೆರಳಿಸಿದೆ. ಮೊನ್ನೆ ಉತ್ತರಪ್ರದೇಶದ ಕುರಾ ವ್ಯಾಪ್ತಿಯ ಲಕ್ಷ್ಮೀಪುರ ಗ್ರಾಮದಲ್ಲಿ 15 ರೂಪಾಯಿ ಸಾಲವನ್ನು ಹಿಂದಿರುಗಿಸಲಿಲ್ಲವೆಂದು ಮೇಲ್ಜಾತಿಯವರು ದಲಿತ ಕುಟುಂಬವನ್ನು ಕೊಚ್ಚಿ ಹತ್ಯೆ ಮಾಡಿದರು. ಜಾತಿ ನಿಂದನೆ,ಬಹಿಷ್ಕಾರ,ಹಲ್ಲೆ,ಅತ್ಯಾಚಾರ,ಹತ್ಯೆ,ಜೀವಂತ ದಹನಗಳಿಂದ ಇಂದಿಗೂ ಮುಕ್ತಿ ಇಲ್ಲದ ದಲಿತರ ಬದುಕಿನಲ್ಲಿ ಈ ಬಲಪಂಥೀಯ ೆನಟಿಕ್ ಗೋರಕ್ಷಕರು ದಾಳಿಕೋರರಾಗಿ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಈ ಹಿಂದುತ್ವ, ಹಿಂದೂಯಿಸಂನ ಅಜೆಂಡಾದೊಳಗೆ ದಲಿತರ, ಮುಸ್ಲಿಮರ ಮೇಲಿನ ಹಲ್ಲೆ, ದೌರ್ಜನ್ಯಗಳು ಒಂದು ನಟೋರಿಯಸ್ ಉದ್ಯೋಗವಾಗಿದೆ. ಈ ಹಿಂದೂಯಿಸಂ ಹೆಸರಿನ ವೃತ್ತಿಯು ಭಾರತ ದೇಶದ ಎಲ್ಲಾ ಬಗೆಯ ಮಾನವೀಯತೆ,ವೌಲ್ಯಗಳನ್ನು, ಸಭ್ಯತೆಯನ್ನು ಧ್ವಂಸಗೊಳಿಸಿದೆ. ಜಕಾತಿ ಮಾಡಿದೆ. ಈ ಹಿಂದುತ್ವದ ಹೆಸರಿನ ವೃತ್ತಿಯು ಅಮಾನುಷ ಹಿಂಸೆಗಳನ್ನು ಹುಟ್ಟು ಹಾಕುತ್ತಿದೆ. ಅಂದರೆ ಇಂದು ದಲಿತರು,ಮುಸ್ಲಿಮರನ್ನು ಹತ್ಯೆ ಮಾಡಲು ಒಂದು ಕಾರಣವೂ ಬೇಕಾಗಿಲ್ಲ. ದಲಿತರು ಮತ್ತು ಮುಸ್ಲಿಮ್‌ರಾಗಿದ್ದರೆ ಸಾಕು.
ಆದರೆ ಗುಜರಾತ್‌ನ ಉನದಲ್ಲಿ ದಲಿತರ ಮೇಲೆ ನಡೆದ ಹಲ್ಲೆಯ ನಂತರ ಇಡೀ ದಲಿತ ಸಮುದಾಯದಲ್ಲಿ ಹೊಸ ಸ್ವರೂಪದ ಬಂಡಾಯ ಮೈದಳೆಯತೊಡಗಿದೆ. ತಮ್ಮಳಗಿನ ಬೇಗುದಿ ತಲ್ಲಣಗಳ ವಿಮೋಚನೆಗೆ ದಲಿತ ಅಸ್ಮಿತೆಯ ಹೋರಾಟವನ್ನು ಅಲ್ಲಿ ರೂಪಿಸುತ್ತಿದ್ದಾರೆ. ಉನದಲ್ಲಿ ನಡೆದ ಹಲ್ಲೆಯ ನಂತರ ಒಗ್ಗಟ್ಟಾದ ದಲಿತ ಸಮುದಾಯದ ಸಾಯಿ ಕರ್ಮಚಾರಿಗಳು ಮತ್ತು ಪೌರ ಕಾರ್ಮಿಕರು ಸತ್ತ ದನವನ್ನು ಎತ್ತುವುದನ್ನು ನಿರಾಕರಿಸಿದರು. ಸಂಘಟಿತರಾದ ದಲಿತ ಸಮುದಾಯವು ಮೇಲ್ಜಾತಿಯ ಜಾತಿ-್ಯೂಡಲಿಸಂನ ವಿರುದ್ಧ ಆಗಸ್ಟ್ 5ರಿಂದ-ಆಗಸ್ಟ್15 ರವರೆಗೆ ಸುಮಾರು 350 ಕಿ.ಮೀ. ಅಹಮದಾಬಾದ್‌ನಿಂದ ಉನದವರೆಗೆ ದಲಿತ ಅಸ್ಮಿತ ಯಾತ್ರಾ ಹಮ್ಮಿಕೊಂಡಿತು. ಇದರ ನೇತೃತ್ವವನ್ನು ಯುವ ದಲಿತ ಮುಖಂಡ,ನ್ಯಾಯವಾದಿ ಜಿಗ್ನೇಶ್ ಮೆವಾನಿ ಮತ್ತು ಮಾಜಿ ಪೊಲೀಸ್ ಅಕಾರಿ ರಾಹುಲ್ ಶರ್ಮ ವಹಿಸಿದ್ದರು. ಶೋಷಣೆಯಿಂದ ಆಝಾದಿ ಎನ್ನುವ ಘೋಷಣೆಯನ್ನು ಕೂಗಿದ ದಲಿತ-ಮುಸ್ಲಿಮ್ ಸಮುದಾಯದ ಈ ಸ್ವಾಭಿಮಾನ ಯಾತ್ರೆಯು ಗೋವಿನ ಬಾಲವನ್ನು ನೀವೇ ಇಟ್ಟುಕೊಳ್ಳಿ,ನಮಗೆ ಭೂಮಿಯನ್ನು ಕೊಡಿ ಎಂದು ಹಕ್ಕೊತ್ತಾಯದೊಂದಿಗೆ ಆಗಸ್ಟ್ 15ರಂದು ಊನಾ ಪಟ್ಟಣದಲ್ಲಿ ಸಮಾವೇಶಗೊಂಡಿತು. ಇದು ದಲಿತ ಸ್ವಾಭಿಮಾನ ಚಳವಳಿಗೆ ಹೊಸ ವೇದಿಕೆಯನ್ನು ಸೃಷ್ಟಿಸಿದೆ. ಪ್ರಭುತ್ವದ ವೈಲ್ಯ ಮತ್ತು ವ್ಯವಸ್ಥೆಯ ಕ್ರೌರ್ಯದಿಂದ ಛಿದ್ರಗೊಂಡ ತಮ್ಮ ಬದುಕಿನಿಂದ ಮರುಹುಟ್ಟು ಪಡೆಯಲು ಇಂದು ಐಕ್ಯತೆಯ ಹೊಸ ಸ್ವರೂಪದೊಂದಿಗೆ ದಲಿತ ಚಳವಳಿ ಹುರಿಗಟ್ಟುತ್ತಿದೆ. ಹೋರಾಟದ ಹಾದಿಗೆ ಸಾವಿರಾರು ನದಿಗಳು ಕೂಡಿಕೊಳ್ಳುತ್ತಿವೆ.
(ಮುಂದುವರಿಯಲಿದೆ)