ಕಾಣದ್ದನ್ನು ರೂಪಿಸುವುದೆ ಸೃಜನಶೀಲತೆಯ ಲಕ್ಷಣ: ಶಿರಾ ಬಿಟ್ನಾಗ್

Update: 2016-10-03 18:09 GMT

‘‘ಒಬ್ಬ ಚಿತ್ರ ಕಲಾವಿದನಿಗೆ ಸೂರ್ಯಾಸ್ತ, ಸೂರ್ಯೋದಯದ ಸೌಂದರ್ಯ, ಇಲ್ಲವೆ ನದಿ, ಗಿಡ, ಮರ, ಬೆಟ್ಟಗಳನ್ನು ಯಥಾವತ್ತಾಗಿ ಚಿತ್ರಿಸುವುದು ಸವಾಲಿನ ಕೆಲಸವಲ್ಲ. ಪ್ರಕೃತಿಯಲ್ಲಿರುವ ಸಹಜ ಸೌಂದರ್ಯದ ಒಂದು ಎಳೆಯನ್ನು ಹಿಡಿದು ಹೊಸದೊಂದನ್ನು ಸೃಷ್ಟಿಸುವುದು ನಿಜವಾದ ಸೃಜನಶೀಲತೆಯ ಲಕ್ಷಣ.... ಪ್ರಕೃತಿಯಲ್ಲಿನ ಕೆಲವು ತುಣುಕುಗಳನ್ನು ಮಾತ್ರ ತೆಗೆದುಕೊಂಡು, ನನ್ನ ಭಾವನೆಗಳನ್ನು ಅನುಭವದ ಮೂಸೆಯಲ್ಲಿ ಸೃಜನಾತ್ಮಕವಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ’’ ಹೀಗೆಂದವರು ಚಿತ್ರಕಲಾವಿದೆ ಶಿರಾ ಬಿಟ್ನಾಗ್.

ಅವರು ರಚಿಸಿರುವ ಕಲಾಕೃತಿಗಳ ಪ್ರದರ್ಶನ ಇತ್ತೀಚೆಗೆ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ನಡೆದವು. ಸುಮಾರು ಇಪತ್ತಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನದಲ್ಲಿದ್ದು, ಒಂದೊಂದು ಕಲಾಕೃತಿಯು ವಿಶಿಷ್ಟತೆಯಿಂದ ಕೂಡಿದ್ದು, ಪ್ರಕೃತಿಯ ಸೊಬಗನ್ನು ಮೈವೆತ್ತಂತೆ ಗೋಚರಿಸುತ್ತಿತ್ತು. ತಮ್ಮ ವಿಶಿಷ್ಟ ಬಣ್ಣಗಾರಿಕೆಯಿಂದ ಈ ಕಲಾಕೃತಿಗಳು ಚಿತ್ರಕಲಾವಿದರನ್ನು, ಕಲಾಪ್ರೇಮಿಗಳನ್ನು ಆಕರ್ಷಿಸುತ್ತಿದ್ದವು. ‘‘ನಮ್ಮ ಮಕ್ಕಳಿಗೆ ಚಿತ್ರಗಳನ್ನು ನೋಡುವ, ಅರ್ಥೈಸಿಕೊಳ್ಳುವ ಬಗೆಯನ್ನು ಕಲಿಸಬೇಕಾಗಿದೆ. ಆಗ ಮಾತ್ರ ಚಿತ್ರಗಳು ಹೊರ ಸೂಸುವ ಕಲೆಯ ಸೊಬಗನ್ನು ಆನಂದಿಸಲು ಸಾಧ್ಯ. ಚಿತ್ರಗಳಿಗೆ ಸೀಮಿತವಾದ ಚೌಕಟ್ಟು ಇರುವುದಿಲ್ಲ. ಹರಿಯುವ ನದಿಯಂತೆ ಎಲ್ಲವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಚಿತ್ರಕಲೆಗಿದೆ’’ ಎನ್ನುತ್ತಾರೆ ಈ ಚಿತ್ರಕಲಾವಿದೆ.

Writer - ಮಂಜುನಾಥ ದಾಸನಪುರ

contributor

Editor - ಮಂಜುನಾಥ ದಾಸನಪುರ

contributor

Similar News