ಆ್ಯಂಡ್ರಾಯ್ಡ್ ಮೊಬೈಲ್‌ನಲ್ಲಿ ನಿಮಗೆ ಗೊತ್ತಿಲ್ಲದ 8 ಅತ್ಯುಪಯುಕ್ತ ಟೂಲ್‌ಗಳು

Update: 2016-10-09 14:45 GMT

ನಿಮ್ಮಲ್ಲಿ ಆ್ಯಂಡ್ರಾಯ್ಡಾ ಫೋನ್ ಇದ್ದರೆ ಅದರಲ್ಲೇನಿದೆಯೋ ಅಷ್ಟಕ್ಕೇ ತೃಪ್ತರಾಗ ಬೇಕೆಂದೇನಿಲ್ಲ. ನಿಮಗೆ ಗೊತ್ತಿಲ್ಲದ ಎಂಟು ಅತ್ಯುಪಯುಕ್ತ ಟೂಲ್‌ಗಳು ಇಲ್ಲಿವೆ. ಓದಿ ಬಳಸಿಕೊಳ್ಳಿ...

ಒಂದೇ ಸಾಧನದಲ್ಲಿ ಒಂದಕ್ಕಿಂತ ಹೆಚ್ಚು ಖಾತೆಗಳು

ಅದೊಂದು ಕಾಲವಿತ್ತು, ಸ್ಮಾರ್ಟ್ ಪೋನ್ ಇದ್ದವರು ಕೇವಲ ಒಂದೇ ಇ-ಮೇಲ್ ಆಥವಾ ಸಾಮಾಜಿಕ ಮಾಧ್ಯಮ ಖಾತೆಗೆ ತೃಪ್ತರಾಗಿರುತ್ತಿದ್ದರು. ಈಗ ನಮ್ಮಲ್ಲಿ ಹೆಚ್ಚಿನವರು ಒಂದಕ್ಕಿಂತ ಹೆಚ್ಚಿನ ಇ-ಮೇಲ್ ಅಥವಾ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹೊಂದಿದ್ದೇವೆ.

ಕೆಲವರು ಒಂದಕ್ಕಿಂತ ಹೆಚ್ಚು ವಾಟ್ಸಾಪ್ ಖಾತೆಗಳನ್ನು ಹೊಂದಿರಬಹುದು. ಆದರೆ ವರ್ಚುವಲೈಸೇಷನ್ ಬಳಸದಿದ್ದರೆ ಇವೆಲ್ಲ ಖಾತೆಗಳನ್ನು ಒಂದೇ ಸಾಧನದಲ್ಲಿ ಹೊಂದಿರಲು ಸಾಧ್ಯವಿಲ್ಲ. ಮಲ್ಟಿಡ್ರಾಯ್ಡಾ(ವರ್ಚುವಲೈಸೇಷನ್ ಇಂಜಿನ್) ಆಧರಿತ ಪ್ಯಾರಲಲ್ ಸ್ಪೇಸ್ ಒಂದೇ ಸಾಧನದಲ್ಲಿ ಹಲವಾರು ಖಾತೆಗಳನ್ನು ಹೊಂದಲು ಅವಕಾಶ ಕಲ್ಪಿಸುತ್ತದೆ.

ಎಲ್ಲಕ್ಕೂ ಮೊದಲು ಫೇಸ್‌ಬುಕ್,ವಾಟ್ಸಾಪ್,ಟ್ವಿಟರ್‌ಗಳಂತಹ ನೀವು ಬಳಸಲು ಬಯಸುವ ಎಲ್ಲ ಆ್ಯಪ್‌ಗಳು ನಿಮ್ಮ ಫೋನಿನಲ್ಲಿ ಈಗಾಗಲೇ ಇನ್‌ಸ್ಟಾಲ್ ಆಗಿರಬೇಕು. ಒಮ್ಮೆ ನೀವು ಪ್ಯಾರಲಲ್ ಸ್ಪೇಸ್ ಆ್ಯಪ್ ಇನಸ್ಟಾಲ್ ಮಾಡಿಕೊಂಡಿರೆಂದರೆ ಈ ಆ್ಯಪ್‌ನಲ್ಲಿಯ ವರ್ಚುವಲ್ ಸ್ಪೇಸ್‌ನಲ್ಲಿ ಯಾವ ಆ್ಯಪ್‌ಗಳನ್ನು ನೀವು ಬಳಸಲು ಬಯಸುತ್ತೀರಿ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ನೀವಷ್ಟೇ ಈ ವರ್ಚುವಲ್ ಸ್ಪೇಸ್ ಪ್ರವೇಶಿಸುವಂತಾಗಲು ನೀವು ಪಾಸ್‌ವರ್ಡ್ ರಕ್ಷಣೆಯನ್ನೂ ಪಡೆದು ಕೊಳ್ಳಬಹುದು. ಪ್ಯಾರಲಲ್ ಸ್ಪೇಸ್ ಕಾರ್ಯನಿರತವಾಗಿದ್ದಾಗ ನೀವು ಪರ್ಯಾಯ ಖಾತೆಗಳಿಗೆ ಸೈನ್ ಇನ್ ಆಗಬಹುದು. ಇದು ತುಂಬ ಸರಳ. ಆದರೆ ಇದು ಸುಲಲಿತವಾಗಿ ನಡೆಯಲು ನಿಮ್ಮ ಫೋನ ಕನಿಷ್ಠ ಮೂರು ಜಿಬಿ ರ್ಯಾಮ್ ಹೊಂದಿರುವುದನ್ನು ಖಚಿತ ಪಡಿಸಿಕೊಳ್ಳಿ

ಮೆಸೇಜ್‌ಗಳು ನಿಮಗಾಗಿ ಕೆಲಸ ಮಾಡಲಿ

ನೀವು ಎಷ್ಟೇ ಸಲ ಸೇವೆಗಳನ್ನು ಅನ್‌ಸಬ್‌ಸ್ಕ್ರೈಬ್ ಮಾಡಿಕೊಳ್ಳಲು ಪ್ರಯತ್ನಿಸಿರಲಿ,ಎಷ್ಟೇ ಬಾರಿ ಡು ನಾಟ್ ಕಾಲ್ ರಿಜಿಸ್ಟ್ರಿಯಲ್ಲಿ ನೋಂದಣಿ ಮಾಡಿಕೊಂಡಿರಲಿ...ಸ್ಪಾಮ್ ಟೆಕ್ಸ್ಟಗಳು ಬರುತ್ತಲೇ ಇರುತ್ತವೆ. ನೀವು ಆ್ಯಂಡ್ರಾಯ್ಡಾ ಹೊಂದಿದ್ದರೆ ಟ್ರು ಮೆಸೆಂಜರ್(ಟ್ರು ಕಾಲರ್‌ನಿಂದ) ಇನಸ್ಟಾಲ್ ಮಾಡಿಕೊಂಡಾಗ ಅದು ಕಂಪನಿಯ ವ್ಯಾಪಕ ಗ್ಲೋಬಲ್ ಡಾಟಾ ಬೇಸ್‌ನ್ನು ಬಳಸಿಕೊಂಡು ಮತ್ತು ಗೊತ್ತಿರುವ ಸ್ಪಾಮರ್‌ಗಳ ಪಟ್ಟಿಯನ್ನು ಕ್ಲೌಡ್ ಸೋರ್ಸಿಂಗ್ ಮಾಡಿಕೊಂಡು ನಿಮ್ಮ ಇನ್‌ಬಾಕ್ಸನ್ನು ಸ್ಪಾಮ್‌ಗಳೀಂದ ಮುಕ್ತವಾಗಿರಿಸುತ್ತದೆ. ನಿಮ್ಮ ಹಳೆಯ ಎಸ್‌ಎಂಎಸ್ ಆ್ಯಪ್‌ನಿಂದ ಬೇಸತ್ತಿದ್ದರೆ ಕ್ರೋಮ್ ಎಸ್‌ಎಂಎಸ್‌ನ್ನು ಪ್ರಯತ್ನಿಸಿ.

ಸ್ಕ್ರೀನ್ ಸೈಝನ್ನು ಕಿರಿದುಗೊಳಿಸಿ

ಆ್ಯಂಡ್ರಾಯ್ಡಾ ಫೋನ್‌ಗಳಲ್ಲಿಯ ದೊಡ್ಡ ಗಾತ್ರದ ಸ್ಕ್ರೀನ್‌ಗಳು ತುಂಬ ಪ್ರಯೋಜನಕಾರಿ ಹೌದು. ಆದರೆ ಸ್ಕ್ರೀನ್‌ನ ಎಲ್ಲ ಮೂಲೆಗಳನ್ನು ತಲುಪಲು ನಿಮಗೆ ಕಷ್ಟವೆನಿಸುತ್ತಿದ್ದರೆನಿಮ್ಮ ಸಾಧನವು ಸೆಟಿಂಗ್ಸ್‌ನಲ್ಲಿ ವನ್ ಹ್ಯಾಂಡೆಡ್ ಮೋಡ್ ಹೊಂದಿದೆಯೇ ಎನ್ನುವುದನ್ನು ಪರೀಕ್ಷಿಸಿ. ಅದಿಲ್ಲದಿದ್ದರೆ ನಿಮ್ಮ ಫೋನ್‌ನ್ನು ರೂಟ್ ಮಾಡಲು ನೀವು ಸಿದ್ಧರಿದ್ದರೆ ಅದನ್ನು ನೀವು ನಿಮ್ಮ ಸಾಧನದಲ್ಲಿ ಅಳವಡಿಸಿಕೊಳ್ಳಬಹುದು. ನಿಮ್ಮ ಸಾಧನ ಒಮ್ಮೆ ರೂಟ್ ಆಯಿತೆಂದರೆ ನೀವು ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ನಿವಟೋರಿ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ನಿಮ್ಮ ಫೋನ್‌ಗೆ ಎಕ್ಸ್‌ಪೋಸ್ಡ್ ಮಾಡ್ಯೂಲ್‌ನ್ನು ಸೇರಿಸಿ ಒಂದೇ ಕೈಯಿಂದ ಪೋನ್ ಬಳಕೆಯನ್ನು ಸಾಧ್ಯವಾಗಿಸುತ್ತದೆ. ನೀವು ಫೋನ್‌ನ್ನು ರೂಟ್ ಮಾಡಲು ಸಿದ್ಧರಿಲ್ಲವೆಂದರೆ ಲೇಝಿ ಆ್ಯಪ್‌ನಂತಹ ಬೇರೆ ಆ್ಯಪ್‌ನ್ನು ಬಳಸಿ ದೊಡ್ಡ ಸ್ಕ್ರೀನಿನ ಹೆಚ್ಚಿನ ಉಪಯೋಗವನ್ನು ಪಡೆಯಲು ಪ್ರಯತ್ನಿಸಿ.

ಆ್ಯನಿಮೇಶನ್ ವೇಗವನ್ನು ಹೆಚ್ಚಿಸಿ

ಇದು ಹೆಚ್ಚುಕಡಿಮೆ ಎಲ್ಲ ಆ್ಯಂಡ್ರಾಯ್ಡಾ ಫೋನ್‌ಗಳಲ್ಲಿ ಕೆಲಸ ಮಾಡುತ್ತದೆ ಮತ್ತು ಇದಕ್ಕಾಗಿ ನಿಮ್ಮ ಫೋನ್‌ನ್ನು ರೂಟ್ ಮಾಡಬೇಕಿಲ್ಲ. ಸೆಟಿಂಗ್ಸ್‌ನಲ್ಲಿ ಅಬೌಟ್ ಫೋನ್‌ಗೆ ಹೋಗಿ ಮತ್ತು ಬಿಲ್ಡ್ ನಂಬರ್ ಮೇಲೆ ಟ್ಯಾಪ್ ಮಾಡುತ್ತಲೇ ಇರಿ. ಸಾಮಾನ್ಯವಾಗಿ ಏಳೆಂಟು ಟ್ಯಾಪ್‌ಗಳ ಬಳಿಕ ಡೆವಲಪರ್ ಆಪ್ಷನ್‌ಗಳು ಕಾರ್ಯಸಮರ್ಥವಾಗಿವೆ ಎಂಬ ಚಿಕ್ಕ ಪಾಪ್ ಅಪ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ. ಡೆವಲಪರ್ ಆಪ್ಷನ್ಸ್‌ಗೆ ಹೋಗಿ ವಿಂಡೋ ಮತ್ತು ಟ್ರಾನ್ಸಿಷನ್ ಆ್ಯನಿಮೇಶನ್ ಸ್ಕೇಲ್ ಸೆಟಿಂಗ್ ಕಾಣುವವರೆಗೆ ಸ್ಕ್ರೋಲ್ ಡೌನ್ ಮಾಡಿ. ಡಿಫಾಲ್ಟ್ ವ್ಯಾಲ್ಯು ಸಾಮಾನ್ಯ ವೇಗದಲ್ಲಿರುತ್ತದೆ. ಇದನ್ನು ನೀವು ಅರ್ಧಕ್ಕಿಳಿಸಬಹುದು ಅಥವಾ ಇಮ್ಮಡಿಗೊಳಿಸಬಹುದು. ಈಗ ಹೋಮ್ ಸ್ಕ್ರೀನ್‌ಗೆ ವಾಪಸಾಗಿ ಸೂಚನೆಯನ್ನು ಪಾಲಿಸಿ.

ಬ್ಯಾಕ್ ಅಪ್ ಟೆಕ್ಸ್ಟ್ ಮೆಸೇಜ್‌ಗಳನ್ನು ಪಿಸಿಗೆ ವರ್ಗಾಯಿಸಿ

 ಕೆಲವೊಮ್ಮೆ ನಿಮ್ಮ ಇನ್‌ಬಾಕ್ಸ್‌ನಲ್ಲಿ 1000ಕ್ಕೂ ಅಧಿಕ ಸಂದೇಶಗಳು ಶೇಖರಗೊಂಡಿರುತ್ತವೆ. ಕೆಲವು ಮಹತ್ವದ್ದಾಗಿರುವುದರಿಂದ ಅವುಗಳನ್ನು ಡಿಲಿಟ್ ಮಾಡಲೂ ನಿಮಗೆ ಮನಸ್ಸಿಲ್ಲ. ಉಚಿತ ಎಸ್‌ಎಂಎಸ್ ಬ್ಯಾಕ್‌ಅಪ್ ಮತ್ತು ರಿಸ್ಟೋರ್ ಆ್ಯಪ್ ಅಳವಡಿಸಿಕೊಂಡು ಇವುಗಳನ್ನು ಪಿಸಿಗೆ ವರ್ಗಾಯಿಸಿಕೊಳ್ಳಬಹುದು.

ದೈನಂದಿನ ಕೆಲಸಗಳನ್ನು ಆಟೋಮೇಟ್ ಮಾಡಿ

ಐಎಫ್‌ಐಟಿಟಿ(ಇಫ್ ದಿಸ್ ದೆನ್ ದ್ಯಾಟ್) ಹೆಚ್ಚು ಬೇಸರ ತರಿಸುವ ಕೆಲಸಗಳನ್ನು ಸ್ವಲ್ಪ ಅಥವಾ ಏನೂ ಹಸ್ತಕ್ಷೇಪವಿಲ್ಲದೆ ಮಾಡಿಕೊಳ್ಳಲು ನಿಮಗೆ ನೆರವಾಗುತ್ತದೆ.

ವಿಷಯಗಳನ್ನು ಎಕ್ಸಟರ್ನಲ್ ಸ್ಟೋರೇಜ್‌ಗೆ ವರ್ಗಾಯಿಸಿ

 ಯಾವುದೇ ಆ್ಯಂಡ್ರಾಯ್ಡಾ ಸಾಧನದಲ್ಲಿ ಸಮರ್ಪಕ ಕಾರ್ಯ ನಿರ್ವಹಣೆಗಾಗಿ ಸ್ವಲ್ಪ ಫ್ರೀ ಸ್ಪೇಸ್ ಕಾಯ್ದುಕೊಳ್ಳುವ ಅಗತ್ಯವಿದೆ. ನಿಮ್ಮ ಸಾಧನದಲ್ಲಿ ಮೆಮರಿ ಕಾರ್ಡ್ ಸ್ಲಾಟ್ ಇದ್ದರೆ ಪರವಾಗಿಲ್ಲ. ಕಾರ್ಡ್ ಅಳವಡಿಸಿದ ನಂತರ ನೀವು ಫೋಟೊ ಮತ್ತು ವೀಡಿಯೊಗಳ ವರ್ಗಾವಣೆಯನ್ನು ಆರಂಭಿಸಬಹುದು. ಇದಕ್ಕಾಗಿ ಸ್ಯಾಮ್ ಲು ನಿಂದ ಉಚಿತ ಆ್ಯಪ್ 2ಎಸ್‌ಡಿ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಇದು ಯಾವ ಆ್ಯಪ್ ಅನ್ನು ಸ್ಥಾನಪಲ್ಲಟಗೊಳಿಸಬಹುದು ಮತ್ತು ಯಾವುದನ್ನು ಅಲ್ಲ ಎನ್ನುವುದನ್ನು ತೋರಿಸುತ್ತದೆ. ನಿಮಗೆ ಬೇಡವಾದ ಆ್ಯಪ್‌ಗಳನ್ನು ಒಂದೇ ಬಾರಿಗೆ ಅನ್‌ಇನ್‌ಸ್ಟಾಲ್ ಮಾಡಹುದಾಗಿದೆ.

ಚಾರ್ಜರ್ ಮತ್ತು ಕೇನಲ್ ಕಾರ್ಯ ನಿರ್ವಹಣೆಯನ್ನು ನೋಡಿ

ಉಚಿತವಾಗಿ ಲಭ್ಯವಿರುವ ಆ್ಯಪ್ ಆ್ಯಂಪಿಯರ್ ನಿಮ್ಮ ಚಾರ್ಜರ್ ಎಷ್ಟು ಪ್ರಮಾಣದಲ್ಲಿ ನಿಮ್ಮ ಫೋನಿಗೆ ವಿದ್ಯುತ್‌ನ್ನು ಪೂರೈಸುತ್ತದೆ ಎನ್ನುವುದನ್ನು ತೋರಿಸುತ್ತದೆ.

 ಈ ಆ್ಯಪ್‌ಗೆ ನೀವು ಚಾಲನೆ ನೀಡಿದರೆ ಅದು ವಿದ್ಯುತ್ತಿನ ಪ್ರಮಾಣವನ್ನು ಸ್ಕ್ರೀನ್ ಮೇಲೆ ತೋರಿಸುತ್ತದೆ. ಚಾರ್ಜರ್ ಸಂಪರ್ಕವಿಲ್ಲದಿದ್ದಾಗ ವ್ಯಯವಾಗುವ ವಿದ್ಯುತ್ತಿನ ಪ್ರಮಾಣವನ್ನು ಅದು ತೋರಿಸುತ್ತದೆ. ಯಾವ ಚಾರ್ಜರ್ ಮತ್ತು ಕೇಬಲ್ ಜೋಡಿ ನಿಮ್ಮ ಫೋನ್‌ಗೆ ಹೆಚ್ಚು ಸೂಕ್ತ ಎನ್ನುವುದನ್ನು ನಿರ್ಧರಿಸುವುದು ಈ ಆ್ಯಪ್‌ನ ಉದ್ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News